ನಾಪೋಕ್ಲು, ಡಿ. ೨೪: ತಡಿಯಂಡಮೋಳ್ ಬೆಟ್ಟವನ್ನೇರಲು ಆಗಮಿಸಿದ್ದ ಪ್ರವಾಸಿ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಹರಿಯಾಣದ ಜತಿನ್ (೨೩) ಎಂಬಾತನೇ ಮೃತ ಯುವಕ.

ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ೬ ಜನರ ತಂಡ ಭಾನುವಾರ ಬೆಟ್ಟವನ್ನು ಏರಲು ಕಕ್ಕಬೆಗೆ ಆಗಮಿಸಿತ್ತು. ಮೂವರು ಯುವಕರು ಮತ್ತು ಮೂವರು ಯುವತಿಯರ ತಂಡ ತಡಿಯಂಡಮೋಳ್ ಶಿಖರದ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ)

ತುದಿ ತಲುಪುತ್ತಿದ್ದಂತೆ ಉಸಿರಾಟದ ಸಮಸ್ಯೆ ಯಿಂದಾಗಿ ಜತಿನ್ ಕುಸಿದು ಬಿದ್ದಿದ್ದು ತಂಡದಲ್ಲಿದ್ದ ವೈದ್ಯರೊಬ್ಬರು ಪ್ರಥಮ ಚಿಕಿತ್ಸೆ ನೀಡಿದರೂ ಚೇತರಿ ಸಿಕೊಳ್ಳದೆ ಸಾವನಪ್ಪಿದ್ದಾನೆ. ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಡಿಯAಡಮೋಳ್ ಶಿಖರದ ತುದಿಯಿಂದ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯ ಕುಡಿಯರ ಭರತ್, ಉಪ ವಲಯ ಅರಣ್ಯ ಅಧಿಕಾರಿ ಸುರೇಶ್ ಎಂ.ಬಿ, ಗಸ್ತು ಅರಣ್ಯಪಾಲಕ ಸೋಮಣ್ಣಗೌಡ ಇವರುಗಳು ಕಠಿಣ ದಾರಿಯಲ್ಲಿ ಮೃತ ದೇಹವನ್ನು ಹೊತ್ತು ಕೆಳಕ್ಕೆ ತಂದರು.

ಮೃತದೇಹವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದ್ದು, ಪೋಷಕರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಠಾಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ. -ದುಗ್ಗಳ ಸದಾನಂದ