ಗುಡ್ಡೆಹೊಸೂರು, ಡಿ. ೨೩: ಇಲ್ಲಿನ ಶಾಲಾ ಆವರಣದಲ್ಲಿ ಕೇಂದ್ರ ಸರಕಾರದ ವತಿಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ದೊರೆಯು ತ್ತಿರುವ ಹಲವು ಯೋಜನೆಗಳ ಬಗ್ಗೆ ಮತ್ತು ಬ್ಯಾಂಕ್‌ಗಳಿAದ ದೊರೆಯು ತ್ತಿರುವ ರಿಯಾಯಿತಿ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಈ ಸಭೆಯನ್ನು ಲೀಡ್ ಬ್ಯಾಂಕ್ ಮತ್ತು ಕುಶಾಲನಗರ ಎಸ್.ಬಿ.ಐ ಶಾಖೆ ಮತ್ತು ಭಾರತ್ ಗ್ಯಾಸ್ ಏಜೆನ್ಸಿ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಸಲಾಯಿತು.

ಈ ಸಂಧರ್ಭ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಮಾಹಿತಿ ನೀಡಿದರು. ಎಸ್.ಬಿ.ಐ. ಬ್ಯಾಂಕಿನ ವ್ಯವಸ್ಥಾಪಕಿ ಪವಿತ್ರ, ಆರ್.ಎಸ್., ಗುಡ್ಡೆಹೊಸೂರು ಗ್ರಾ. ಬ್ಯಾಂಕಿನ ಪ್ರದೀಪ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮೀಲನ್ ಕೆ.ಭರತ್, ಭಾರತ್ ಗ್ಯಾಸ್ ಏಜೆನ್ಸಿ ದಿನೇಶ್ ಮತ್ತು ವ್ಯವಸ್ಥಾಪಕ ಸಿ.ಎನ್. ಶ್ರೀಧರ ಮುಂತಾದವರು ಹಾಜರಿದ್ದರು.

ಕೇಂದ್ರ ಸರಕಾರದ ವತಿಯಿಂದ ದೊರೆಯುವ ಅಡುಗೆ ಅನಿಲದ ರಿಯಾಯಿತಿ ದರದ ಬಗ್ಗೆ ಮಾಹಿತಿ ನೀಡಲಾಯಿತು.

ಮಾರ್ಚ್ ತಿಂಗಳ ಕೊನೆಯ ತನಕ ಅನಿಲ ಸಂಪರ್ಕದ ಖಾತೆಗೆ ಆಧಾರ್ ಲಿಂಕ್ ಮಾಡಲು ಸಮಯ ಇರುವುದಾಗಿ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ನೂರಕ್ಕೂ ಅಧಿಕ ಮಂದಿ ಹಾಜರಿದ್ದರು.

ಅಲ್ಲದೆ ಮೋದಿ ಗ್ಯಾರಂಟಿಯ ಬಗ್ಗೆ ಸಭೆಯಲ್ಲಿ ಕಿರುಚಿತ್ರ ಪ್ರದರ್ಶನ ನಡೆಯಿತು. ಇದೇ ಸಂದರ್ಭ ಭತ್ತದ ಗದ್ದೆ, ಶುಂಠಿ, ಹೊಲ, ಅರಶಿನ ಕ್ಷೇತ್ರ, ತರಕಾರಿ ತೋಟಗಳಿಗೆ ಡ್ರೋನ್ ಚಾಲಿತ ಕೀಟನಾಶಕ ಉಪಕರಣದ ಪ್ರಯೋಗವನ್ನು ಈ ಸಂದರ್ಭ ನಡೆಸಿ ಎಲ್ಲಾರ ಗಮನ ಸೆಳೆಯಲಾಯಿತು.

ಅಲ್ಲದೆ ರೈತರಿಗೆ ಶೇ.೫೦ ಸಬ್ಸಿಡಿ ದರದಲ್ಲಿ ನೀಡಲಾಗುವುದಾಗಿ ಎಂದು (ಆರ್.ಸಿ.ಎಫ್.) ರಾಷ್ಟಿçÃಯ ಕೆಮಿಕಲ್ ಫರ್ಟಿಲೈರ‍್ಸ್ ಇದರ ಅಧಿಕಾರಿ ಅರುಣ್ ಕುಮಾರ್ ಮಾಹಿತಿ ನೀಡಿದರು.