ಕಡಂಗ, ಡಿ. ೨೩: ಎಸ್ವೈಎಸ್ ಹಾಗೂ ಎಸ್ಕೆಎಸ್ಎಸ್ಎ ಕಡಂಗ ಶಾಖೆ ವತಿಯಿಂದ ೫ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಹಾಗೂ ನೂರೇ ಅಜ್ಮಿರ್ ಕಾರ್ಯಕ್ರಮ ಕೊಕ್ಕಂಡಬಾಣೆ ದರ್ಗಾ ಸಮೀಪದಲ್ಲಿ ಜನವರಿ ೧೩ ರಂದು ನಡೆಸಲಾಗುವುದು ಎಂದು ಎಸ್ಕೆಎಸ್ಎಸ್ಎಫ್ ಅಧ್ಯಕ್ಷ ಇಸಾಕ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಸ್ತ ಸದಸ್ಯ ಎಂ.ಎA. ಅಬ್ದುಲ್ಲಾ ಫೈಝಿ ನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ದುಆ ಮಜಲಿಸ್ ಜೈನುಲ್ ಅಬೀದಿನ್ ತಂಗಳ್ ಬೆಳ್ತಂಗಡಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಪ್ರವಚನಕ್ಕೆ ನೂರೇ ಅಜ್ಮೀರ್ ಕಾರ್ಯಕ್ರಮವನ್ನು ವಲಿಯುದ್ದೀನ್ ಫೈಸಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಮಅತ್ ಅಧ್ಯಕ್ಷ ಅಬ್ದುಲ್ಲಾ, ಸುಬೀರ್, ರಜಾಕ್, ಯೂಸುಫ್ ಮುಸ್ಲಿಯಾರ್, ಇಕ್ಬಾಲ್ ಹಾರಿಸ್ ಅಬ್ದುಲ್ ರಹಮಾನ್, ಅಬ್ದುಲ್ಲಾ ಹಾಜಿ, ರಹ್ಮಾನ್, ಸುಬಿರ್, ಹ್ಯಾರಿಸ್ ಹಾಜಿ, ಹ್ಯಾರಿಸ್ ಉಪಸ್ಥಿತರಿದ್ದರು.