ಸೋಮವಾರಪೇಟೆ, ಡಿ.೨೩ : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಸೋಮವಾರ ಪೇಟೆ ಪಟ್ಟಣ ಸಮೀಪದ ಆಲೇಕಟ್ಟೆ ರಸ್ತೆ ನಿವಾಸಿಯೋರ್ವರು ಮೃತಪಟ್ಟು, ಮೂವರು ಗಂಭೀರ ಗಾಯ ಗಳೊಂದಿಗೆ ಪ್ರಾಣಾಪಾಯ ದಿಂದ ಪಾರಾಗಿರುವ ಘಟನೆ ನಡೆದಿದೆ.

ಪಟ್ಟಣ ಸಮೀಪದ ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಆಲೇಕಟ್ಟೆ ರಸ್ತೆ ನಿವಾಸಿ, ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿ ಇಟ್ಟುಕೊಂಡಿರುವ ರಾಘವೇಂದ್ರ ಕೆಫೆ ಮಾಲೀಕ ಕೆಂಚುಮನೆ ರವಿ (೫೩) ಎಂಬವರೇ ಸಾವನ್ನಪ್ಪಿದ ದುರ್ದೈವಿ.

ರವಿ ಅವರೊಂದಿಗೆ ದೇವಾಲ ಯಕ್ಕೆ ತೆರಳಿದ್ದ ತಾಯಿ ಮಣಿಯಮ್ಮ (೭೫), ಪುತ್ರ ಶರಣ್ (೧೦), ಅತ್ತಿಗೆ ನೀತು (೪೫) ಅವರುಗಳ ಕೈ, ಕಾಲು, ತಲೆ ಭಾಗಕ್ಕೆ ಪೆಟ್ಟಾಗಿದ್ದು, ಅದೃಷ್ಟವ ಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಪತ್ನಿ ವಾಣಿ (೪೭), ಪುತ್ರಿ ರಿಷಾ (೧೯), ಸಹೋದರ ಯೋಗೇಶ್ (೫೫), ಇವರ ಪುತ್ರಿ ನೇಹಾ (೨೪), ಪುತ್ರ ಅಂಜನ್ (೧೪) ಅವರುಗಳಿಗೆ ಸಣ್ಣಪುಟ್ಟ ಗಾಯ ಗಳಾಗಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಗಂಭೀರ ಗಾಯಗೊಂಡ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ದೇವಾಲಯಕ್ಕೆ ಕುಟುಂಬಸ್ಥರೊAದಿಗೆ ಪ್ರವಾಸ ಹಮ್ಮಿಕೊಂಡಿದ್ದ ರವಿ ಅವರು ತಮ್ಮ ಓಮ್ನಿ ಕಾರಿನಲ್ಲಿ ಬೆಳಿಗ್ಗೆ ಸೋಮವಾರಪೇಟೆಯಿಂದ ಹೊರಟು, ಧರ್ಮಸ್ಥಳಕ್ಕೆ ತೆರಳಿ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿದ್ದರು.

ಸುಬ್ರಹ್ಮಣ್ಯ ಕಡೆಯಿಂದ ಆಗಮಿಸುತ್ತಿದ್ದ ಕ್ರೇಟಾ ಕಾರು, ಮರ್ದಾಳ ಸಮೀಪದ ಅಳೇರಿ ತಿರುವಿನಲ್ಲಿ ಓಮ್ನಿ ಕಾರಿಗೆ ಢಿಕ್ಕಿಂ iÀiÁಗಿದ್ದು, ಓಮ್ನಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊAಡು, ಕಾರು ಚಾಲಿಸುತ್ತಿದ್ದ ರವಿ ಅವರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಸಹಾಯಕ್ಕೆ ಧಾವಿಸಿ ರವಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ.

ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರ್ದಾಳ ಸಮೀಪದ ಅಳೇರಿ ತಿರುವಿನಲ್ಲಿ ರಸ್ತೆ ಕಿರಿದಾಗಿದ್ದು ರಸ್ತೆಗೆ ತಾಗಿದಂತೆ ಇರುವ ವಿದ್ಯುತ್ ಕಂಬ ದಿಂದಾಗಿ ಅಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿರುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೃತ ರವಿ ಮತ್ತು ಸಹೋದರ ಯೋಗೇಶ್ ಅವರುಗಳು ಒಂದೇ ಮನೆಯಲ್ಲಿ

(ಮೊದಲ ಪುಟದಿಂದ) ವಾಸವಾಗಿದ್ದು, ಪಟ್ಟಣದಲ್ಲಿರುವ ಅಂಗಡಿಯಲ್ಲಿ ಒಟ್ಟಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಯೋಗೇಶ್ ಅವರ ಪುತ್ರಿ ಮುಂದಿನ ತಿಂಗಳು ಉದ್ಯೋಗ ನಿಮಿತ್ತ ಆಸ್ಟೆçÃಲಿಯಾಕ್ಕೆ ತೆರಳಲು ಸಿದ್ಧತೆ ಕೈಗೊಂಡಿದ್ದು, ಈ ಮಧ್ಯೆ ಕುಟುಂಬ ಸಮೇತ ಧರ್ಮಸ್ಥಳ-ಸುಬ್ರಹ್ಮಣ್ಯಕ್ಕೆ ತೆರಳಿ ಪೂಜೆ ಸಲ್ಲಿಸಲು ತೀರ್ಮಾನಿಸಿದ್ದರು. ಹೀಗಾಗಿ ಇಂದು ಬೆಳಿಗ್ಗೆ ಸೋಮವಾರಪೇಟೆಯಿಂದ ಹೊರಟು ಧರ್ಮಸ್ಥಳದಲ್ಲಿ ಪೂಜೆ ಮುಗಿಸಿ ಸುಬ್ರಹ್ಮಣ್ಯಕ್ಕೆ ಆಗಮಿಸುವ ಮಾರ್ಗ ಮಧ್ಯೆ ದುರಂತ ಸಂಭವಿಸಿದೆ.

ಸದಾ ಚಟುವಟಿಕೆಯಲ್ಲಿದ್ದ ರವಿ ಅವರು ಪಟ್ಟಣದ ಅಂಗಡಿಯಲ್ಲಿ ಪತ್ರಿಕೆಗಳ ವಿತರಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರ ಅಂತ್ಯಕ್ರಿಯೆ ತಾ. ೨೪ರಂದು (ಇಂದು) ಕರ್ಕಳ್ಳಿ ಕುರುಹಿನಶೆಟ್ಟಿ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತ ರವಿ ಅವರು ಪತ್ನಿ ಸೇರಿದಂತೆ ಈರ್ವರು ಮಕ್ಕಳನ್ನು ಅಗಲಿದ್ದಾರೆ.