ವೀರಾಜಪೇಟೆ, ಡಿ. ೨೩: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಲ್ಲಿ ಭ್ರಾತೃತ್ವ ಸ್ನೇಹಾಚಾರವನ್ನು ವೃದ್ಧಿಗೊಳಿಸಲು ಹಾಗೂ ಕೇಕ್‌ಗಳನ್ನು ತಯಾರಿಸುವ ವಿಧಾನಗಳನ್ನು ತಿಳಿಯಪಡಿಸುವ ಉದ್ದೇಶದಿಂದ ಪ್ರಪ್ರಥಮ ಭಾರಿಗೆ ವಿನೂತವಾಗಿ ಕೇಕ್ ಪ್ರದರ್ಶನ ಶಾಲಾ ಆವರಣದಲ್ಲಿ ಎರ್ಪಡಿಸಲಾಗಿತ್ತು.

ಸಂತ ಅನ್ನಮ್ಮ ವಿದ್ಯಾಸಂಸ್ಥೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಶಾಲೆಯ ದ್ವೀಶತಮಾನ ಭವನದ ಸಭಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಕೇಕ್ ಕಾರ್ನಿವಲ್ ೨೦೨೩ ಪ್ರದರ್ಶನ ನಡೆಯಿತು. ಉದ್ಘಾಟನೆ ಮಾಡಿ ಮಾತನಾಡಿದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದ ಆಂಗ್ಲ ಹಾಗೂ ಕನ್ನಡ ಮಾದ್ಯಮ ಮಕ್ಕಳಿಂದ ಪ್ರಪ್ರಥಮ ಭಾರಿಗೆ ಕೇಕ್ ಮೇಳವನ್ನು ಆಯೋಜಿಸಲಾಗುತ್ತಿದ್ದು, ಶಾಲಾ ಮಕ್ಕಳು ತಾವೇ ಮನೆಯಲ್ಲಿ ಸಿದ್ಧಪಡಿಸಿದ ಕೇಕನ್ನು ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಗೋದುಳಿಯಲ್ಲಿ ಬಾಲ ಯೆಸು ಜನನ, ಸಂತ ಮರಿಯ ಮಾತೆಯ ಆಕೃತಿ, ಬಾಲ ಯೇಸುವಿನ ಜನನದ ಸಂದರ್ಭ, ಸಾಂತ ಕ್ಲಸ್, ಚರ್ಚ್ಗಳ ಆಕೃತಿ ಹೀಗೆ ಹತ್ತು ಹಲವು ಬಗೆಯ ಸುಮಾರು ೧೦೦೦ ರೂ.ಗಳಿಂದ ೧೦,೦೦೦ ರೂ.ಗಳ ವೆಚ್ಚದಲ್ಲಿ ಕೇಕ್‌ಗಳನ್ನು ಶಾಲಾ ವಿದ್ಯಾರ್ಥಿಗಳು ಸಿದ್ಧಪಡಿಸಿ ಪ್ರದರ್ಶನ ಮಾಡಿದರು. ಕೇಕ್ ಮೇಳದಲ್ಲಿ ಒಟ್ಟು ೨೬ ತಂಡಗಳು ಭಾಗವಹಿಸಿದ್ದವು. ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಕೇಕ್ ಪ್ರದರ್ಶನವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರಾದ ಮೋನಿಕಾ ಮತ್ತು ವಿಲೀನಾ ಗೋನ್ಸಾಲ್ವೇಸ್ ಅವರುಗಳು ಕೇಕ್ ಪ್ರದರ್ಶನದ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಪ್ರದರ್ಶನದ ವೇಳೆಯಲ್ಲಿ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೋಜಿ, ಸಿಸ್ಟರ್ ಐಡಾ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಬೆನ್ನಿ ಜೋಸೆಫ್, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.