ಸಿದ್ದಾಪುರ, ಡಿ. ೨೩: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿ ಪಂದ್ಯAಡ ಬೆಳ್ಯಪ್ಪ, ಸ್ವಾತಂತ್ರ್ಯ ಹೋರಾಟಗಾರ್ತಿ ಪಂದ್ಯAಡ ಸೀತಾ ಬೆಳ್ಯಪ್ಪ ಅವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಿದ್ದಾಪುರ ಸ್ವರ್ಣಮಾಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯಿತು.
ಯುನೈಟೆಡ್ ಕೊಡವ ಆರ್ಗ ನೈಸೇಷನ್ (ಯುಕೊ) ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ SಔUಐಈUಐ SಔಎಔUಖಓ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ ಕೊಡಗಿನ ಗಾಂಧಿ ಎಂದೇ ಖ್ಯಾತಿ ಹೊಂದಿರುವ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಪಂದ್ಯAಡ ಬೆಳ್ಯಪ್ಪ, ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ ಪಂದ್ಯAಡ ಸೀತಾ ಬೆಳ್ಯಪ್ಪ ಅವರ ಕುರಿತಾದ ಪುಸ್ತಕವನ್ನು ಅವರ ಮೊಮ್ಮಗಳು ಬೊಮ್ಮಂಡ ಸವೇರ ಚಂಗಪ್ಪ ಬರೆದಿದ್ದು, ಪಂದ್ಯAಡ ಬೆಳ್ಯಪ್ಪ ಸ್ವಾತಂತ್ರ್ಯ ಇತಿಹಾಸ ಮಾತ್ರ ವಲ್ಲ ಸಾಮಾಜಿಕ ಕಳಕಳಿ ಯೊಂದಿಗೆ ವಿವಿಧ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಕೊಡಗಿನ ಸಹಕಾರಿ ಕ್ಷೇತ್ರದಲ್ಲೂ ಅವರ ಸಾಧನೆ ಅಪಾರವಾದದ್ದು. ಶಿಕ್ಷಣ ಕ್ಷೇತ್ರದಲ್ಲೂ ಮುಂಚೂಣಿ ಯಲ್ಲಿದ್ದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸ್ಥಾಪನೆಗೆ ನೆಹರೂ ಅವರ ಕಾಲದಲ್ಲಿ ಮಂಜೂರಾತಿ ಮಾಡಿಸಿ ತಂದ ಮಹಾನ್ ವ್ಯಕ್ತಿತ್ವ ಅವರದು. ಅವರ ಜೀವನ ಚರಿತ್ರೆಯ ಆತ್ಮ ಕಥೆಗಳ ಪುಸ್ತಕವನ್ನು ಪ್ರತಿಯೊಬ್ಬರೂ ಓದುವಂತಾಗಬೇಕು ಎಂದರು.
ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ ನಾಡಿಗಾಗಿ ದುಡಿದಂತಹ ಮಹಾನ್ ವ್ಯಕ್ತಿತ್ವದ ಸಾಧಕರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ಮುನ್ನಡೆಯುವ ಮೂಲಕ ಅವರ ಜೀವನ ಚರಿತ್ರೆಯ ಪುಸ್ತಕಗಳನ್ನ ಓದಿ ಮಾರ್ಗದರ್ಶನವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ಲೇಖಕಿ ಬೊಮ್ಮಂಡ ಸವೇರ ಚಂಗಪ್ಪ ಮಾತನಾಡಿ ನನ್ನ ಅಜ್ಜ ಅಜ್ಜಿಯ ಅವರ ಸ್ವಾತಂತ್ರö್ಯ ಹೋರಾಟದ ಜೀವನ ಚರಿತ್ರೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆಯ ಬಗ್ಗೆ ಇಂಗ್ಲೀಷ್ನಲ್ಲಿ ಪುಸ್ತಕ ಬರೆದಿದ್ದೇನೆ ಎಂದು ತಿಳಿಸಿದರು.
ಪುಸ್ತಕ ಲೋಕಾರ್ಪಣೆ ಕಾರ್ಯ ಕ್ರಮದಲ್ಲಿ ಅಲ್ಲಾರಂಡ ವಿಠಲ್ ನಂಜಪ್ಪ, ಕರ್ನಲ್ ಬೊಮ್ಮಂಡ ಧೀರಜ್ ಚೆಂಗಪ್ಪ ಮತ್ತು ತಪಸ್ ದೇವಯ್ಯ, ನೆರವಂಡ ಶಾಂತಿ ನಂಜಪ್ಪ, ಕುಸುಮ ಅಯ್ಯಪ್ಪ, ಪಂದ್ಯAಡ ವಿಜಯ್ ಬೆಳ್ಳಿಯಪ್ಪ, ಫೀ.ಮಾ. ಕಾರ್ಯಪ್ಪ-ಜ.ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತAಡ ಸುಬ್ಬಯ್ಯ, ಎ. ತಮ್ಮು ಪೂವಯ್ಯ, ದೆಹಲಿ ಕೊಡವ ಸಮಾಜ ಅಧ್ಯಕ್ಷ ಮಾಚಿಮಂಡ ತಮ್ಮು ಕಾರ್ಯಪ್ಪ, ಕರ್ನಲ್ ಮಂಡೇಪAಡ ಕೆ. ಅಯ್ಯಪ್ಪ, ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಗಣ್ಯರು ಹಾಜರಿದ್ದರು.
-ಎಸ್.ಎಂ ಮುಬಾರಕ್