ನಾಪೋಕ್ಲು, ಡಿ. ೨೩: ಸಮೀಪದ ಚೆಯ್ಯಂಡಾಣೆ ಗ್ರಾಮದ ನರಿಯಂದಡ ಪ್ರೌಢಶಾಲೆಯ ಬಳಿ ಎರಡು ಸ್ಕೂಟರ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ತೀವ್ರ ಗಾಯಗೊಂಡ ಘಟನೆ ನಿನ್ನೆ ಸಂಜೆ ನಡೆದಿದೆ. ಸ್ಥಳೀಯ ಮಹಿಳೆ ಸಂಧ್ಯಾ ಎಂಬವರ ಕಾಲು ಮುರಿದಿದ್ದು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಮರಂದೋಡದ ಸಿ. ಹರೀಶ್ ಬೋಪಣ್ಣ ಗಾಯಗೊಂಡ ಮಹಿಳೆಯನ್ನು ವೀರಾಜಪೇಟೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.