ಕುಶಾಲನಗರ, ಡಿ. ೨೨: ಕೊಡಗು ಜಿಲ್ಲೆಯ ಧಾರ್ಮಿಕ ನಗರಿ ಎಂದೇ ಪ್ರಖ್ಯಾತ ಗೊಂಡಿರುವ ಕುಶಾಲನಗರದಲ್ಲಿ ಹನುಮ ಜಯಂತಿ ಅಂಗವಾಗಿ ತಾ. ೨೩ ರಿಂದ (ಇಂದಿನಿAದ) ಎರಡು ದಿನಗಳ ಕಾಲ ಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಹನುಮ ಜಯಂತಿ ದಶಮಂಟಪ ಸಮಿತಿ ಆಶ್ರಯದಲ್ಲಿ ನಡೆಯಲಿರುವ ಅದ್ದೂರಿ ಶೋಭಾಯಾತ್ರೆ ತಾ. ೨೪ರಂದು ನಡೆಯಲಿದೆ. ಈ ಶೋಭ ಯಾತ್ರೆಯಲ್ಲಿ ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯ ಎಂಟು ಮಂಟಪಗಳು ಮೆರವಣಿಗೆಯಲ್ಲಿ ಕುಶಾಲನಗರದ ಗಣಪತಿ ದೇವಾಲಯ ಬಳಿ ಸೇರಲಿವೆ. ಬಸವನಹಳ್ಳಿ, ಗುಡ್ಡೆಹೊಸೂರು, ಮಾದಾಪಟ್ಟಣ ಹಾರಂಗಿ ಮಾರ್ಗಗಳಿಂದ ಶೋಭಾ ಯಾತ್ರೆಯ ಮಂಟಪಗಳು ವಿವಿಧ ತಂತ್ರಜ್ಞಾನಗಳೊAದಿಗೆ ಕುಶಾಲನಗರ ಪಟ್ಟಣದ ಕಡೆಗೆ ಸಾಗಲಿವೆ.
ಹನುಮ ಜಯಂತಿ ಅಂಗವಾಗಿ ಕುಶಾಲನಗರ ರಾಮಾಂಜನೇಯ ಉತ್ಸವ ಸಮಿತಿ ಮತ್ತು ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ೩೮ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ತಾ. ೨೩ ಮತ್ತು ೨೪ ರಂದು ನಡೆಯಲಿದೆ.
ಕುಶಾಲನಗರ ರಥ ಬೀದಿಯ ಶ್ರೀ ಆಂಜನೇಯ ದೇವಾಲಯದಲ್ಲಿ ತಾ. ೨೩ ರಂದು ಬೆಳಿಗ್ಗೆ ಪವಮಾನ ಹೋಮ ನಡೆಯುವುದು.
ತಾ. ೨೪ರಂದು ಬೆಳಿಗ್ಗೆ ೭ ಗಂಟೆಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಂತರ ಒಂದು ಗಂಟೆಗೆ ಅನ್ನಸಂತರ್ಪಣೆ ಇರುತ್ತದೆ ಎಂದು ಸಮಿತಿ ಮೂಲಗಳು ತಿಳಿಸಿವೆ. ಆಂಜನೇಯ ದೇವಾಲಯದಿಂದ ಸಂಜೆ ಅಲಂಕೃತ ಮಂಟಪದಲ್ಲಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಏರ್ಪಡಿಸಲಾಗಿದೆ.
ಶ್ರೀ ರಾಮಾಂಜನೇಯ ಉತ್ಸವ ಸಮಿತಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ವಿ.ಎಚ್. ಪ್ರಶಾಂತ್, ಉಪಾಧ್ಯಕ್ಷರಾಗಿ ಕೆ.ವಿ. ಅನುದೀಪ್, ಕಾರ್ಯದರ್ಶಿ ನವನೀತ್ ಪೊನ್ನೇಟಿ ಮತ್ತು ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ವಿ.ಡಿ. ಪುಂಡರಿಕಾಕ್ಷ, ಪ್ರಧಾನ ಅರ್ಚಕ ಡಾ. ರಾಧಾಕೃಷ್ಣ ಭಟ್ ಅವರ ನೇತೃತ್ವದಲ್ಲಿ ದೇವಾಲಯ ಪೂಜಾ ವಿಧಿ ವಿಧಾನಗಳು ಜರುಗಲಿವೆ.
ಹನುಮ ಜಯಂತಿ ದಶಮಂಟಪ ಸಮಿತಿ ಅಧ್ಯಕ್ಷರಾಗಿ ಎಂ.ಡಿ. ಕೃಷ್ಣಪ್ಪ ಅವರು ಸೇವೆ ಸಲ್ಲಿಸುತ್ತಿದ್ದು, ಈ ಬಾರಿ ಐದನೇ ವರ್ಷದ ಅದ್ದೂರಿ ಹನುಮ ಜಯಂತೋತ್ಸವ ಶೋಭಾಯಾತ್ರೆ ನಡೆಯಲಿದೆ. ತಾ. ೨೪ ರಂದು ಸಂಜೆ ೬ ಗಂಟೆಗೆ ಶ್ರೀ ಆಂಜನೇಯ ದೇವಸ್ಥಾನದ
(ಮೊದಲ ಪುಟದಿಂದ) ಉತ್ಸವ ಮೂರ್ತಿಯ ಜೊತೆಗೆ ಹೆಚ್ಆರ್ಪಿ ಕಾಲೋನಿ ಹಿಂದೂ ಜಾಗರಣಾ ವೇದಿಕೆಯ ಅಂಜನಿಪುತ್ರ ಜಯಂತೋತ್ಸವ ಸಮಿತಿ, ಬೈಚನಹಳ್ಳಿಯ ಶ್ರೀ ಮಾರಿಯಮ್ಮ ದೇವಸ್ಥಾನ ಸಮಿತಿ ಮತ್ತು ಗೆಳೆಯರ ಬಳಗ, ಕುಶಾಲನಗರ ಗೋಪಾಲ ಸರ್ಕಲ್ನ ಗಜಾನನ ಯುವಕ ಸಂಘ, ಮಾದಾಪಟ್ಟಣದ ಶ್ರೀರಾಮದೂತ ಜಯಂತಿ ಆಚರಣೆ ಸಮಿತಿ ಮತ್ತು ಹಿಂದೂ ಜಾಗರಣಾ ವೇದಿಕೆ, ಕುಶಾಲನಗರ ಜನತಾ ಕಾಲೋನಿಯ ದ್ವಾರಕಾ ಉತ್ಸವ ಸಮಿತಿ, ಗುಡ್ಡೆಹೊಸೂರಿನ ವೀರಾಂಜನೇಯ ಸೇವಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಮಿತಿಗಳು, ಕೂಡಿಗೆ ಮತ್ತು ಕೂಡುಮಂಗಳೂರಿನ ಹನುಮ ಸೇನಾ ಸೇವಾ ಸಮಿತಿ ಹಾಗೂ ಕುಶಾಲನಗರ ರಥಬೀದಿಯ ಚೌಡೇಶ್ವರಿ ದೇವಸ್ಥಾನದ ಮಂಟಪಗಳು ಶೋಭಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ ಎಂದು ದಶಮಂಟಪ ಸಮಿತಿಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ತಿಳಿಸಿದ್ದಾರೆ.
ಅಲಂಕೃತ ಮಂಟಪಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಗದು ಹಾಗೂ ಸ್ಮರಣಿಕೆಗಳು ಒಳಗೊಂಡಿರುವ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎಂಟು ಮಂಟಪಗಳಿಗೆ ಅಂದಾಜು ಒಂದು ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ವಿವರ ನೀಡಿದ್ದಾರೆ.
ವರ್ಷದ ಕೊನೆ ಹಾಗೂ ಕ್ರಿಸ್ಮಸ್ ಅಂಗವಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುವ ಸಾಧ್ಯತೆ ಇದ್ದು, ಈ ಸಂಬAಧ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಅವರ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳ ಜೊತೆಗೆ ಎರಡು ಸಭೆಗಳನ್ನು ನಡೆಸಿದ್ದು, ನಿಯಮ ಪಾಲಿಸುವುದರೊಂದಿಗೆ ಶೋಭಯಾತ್ರೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಶೋಭಾಯಾತ್ರೆಯ ಸಂದರ್ಭ ಯಾವುದೇ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಬಾರದು. ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ. ಶೋಭಾಯಾತ್ರೆ ಸಂದರ್ಭ ಸಮರ್ಪಕ ಸಂಚಾರ ವ್ಯವಸ್ಥೆಗಾಗಿ ಕೆಲವು ಬದಲಿ ರಸ್ತೆಗಳನ್ನು ಗುರುತಿಸಲಾಗಿದೆ ಎಂದು ಡಿವೈಎಸ್ಪಿ ಗಂಗಾಧರಪ್ಪ ಅವರು ತಿಳಿಸಿದ್ದಾರೆ. ಕುಶಾಲನಗರ ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ ಬಸ್ಗಳ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ.
ದಶಮಂಟಪ ಸಮಿತಿಗಳ ಪ್ರಮುಖರ ಸಭೆ ಮತ್ತು ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ ಎಂದು ಕೃಷ್ಣಪ್ಪ ಮಾಹಿತಿ ನೀಡಿದ್ದಾರೆ.
ದಶಮಂಟಪ ಸಮಿತಿಗಳ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎನ್. ದೇವರಾಜು, ಖಜಾಂಚಿಯಾಗಿ ಡಿ.ಪಿ. ಗಿರೀಶ್ ಅವರುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಮಂಟಪಗಳ ಸಮಿತಿಯ ಪದಾಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿಕೊಂಡಿದ್ದಾರೆ.
ಶೋಭಾಯಾತ್ರೆ ಸಂದರ್ಭ ಕುಶಾಲನಗರ ಪಟ್ಟಣ ಸೇರಿದಂತೆ ಜಿಲ್ಲೆ ಹಾಗೂ ನೆರೆ ಜಿಲ್ಲೆಯ ವಿವಿಧಡೆಗ ಳಿಂದ ಅಂದಾಜು ೨೫,೦೦೦ಕ್ಕೂ ಅಧಿಕ ಮಂದಿ ಪಾಲ್ಗೊ ಳ್ಳುವುದಾಗಿ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.
ವರದಿ :ಚಂದ್ರಮೋಹನ್