ಮಡಿಕೇರಿ ಡಿ. ೨೨ : ಟಿ.ಶೆಟ್ಟಿಗೇರಿ - ಶ್ರೀಮಂಗಲ ಶೂರ‍್ಸ್ ಕ್ಲಬ್ ವತಿಯಿಂದ ತಾ. ೨೫ರಂದು ಶ್ರೀಮಂಗಲ ಕೊಡವ ಸಮಾಜದ ಆವರಣದಲ್ಲಿ ೩ನೇ ವರ್ಷದ ಮುಕ್ತ ತೋಕ್ ನಮ್ಮೆ - ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿದೆ.

ಈ ಬಾರಿ ತಡಿಯಂಗಡ ಪ್ರೆರಿತ್ ಪೂವಣ್ಣ ಸ್ಮರಣಾರ್ಥವಾಗಿ ಈ ಸ್ಪರ್ಧೆ ನಡೆಸಲಾಗುತ್ತಿದೆ. .೨೨ ರೈಫಲ್, ೧೨ನೇ ಬೋರ್, ಸ್ಲಗ್ ವಿಭಾಗದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಏರ್ ರೈಫಲ್‌ನಲ್ಲಿ ಮೊಟ್ಟೆಗೆ ಗುಂಡು ಹಾರಿಸುವ ಸ್ಪರ್ಧೆ ಜರುಗಲಿದೆ.

.೨೨ ವಿಭಾಗದಲ್ಲಿ ಪ್ರಥಮ ರೂ. ೨೫ ಸಾವಿರ, ದ್ವಿತೀಯ ರೂ. ೧೫ ಸಾವಿರ ಹಾಗೂ ತೃತೀಯ ರೂ. ೧೦ ಸಾವಿರ ಬಹುಮಾನವಿದೆ. ೧೨ನೇ ಬೋರ್‌ನಲ್ಲಿ ಪ್ರಥಮ ರೂ. ೨೦, ದ್ವಿತೀಯ ರೂ. ೧೫ ಸಾವಿರ ಹಾಗೂ ತೃತೀಯ ರೂ. ೧೦ ಸಾವಿರ, ಸ್ಲಗ್ ವಿಭಾಗದಲ್ಲಿ ಪ್ರಥಮ ರೂ. ೧೫ ಸಾವಿರ, ದ್ವಿತೀಯ ರೂ. ೧೦ ಸಾವಿರ ಹಾಗೂ ತೃತೀಯ ರೂ. ೫ ಸಾವಿರ ನಗದು ಬಹುಮಾನ ನೀಡಲಾಗುತ್ತದೆ.

ಏರ್‌ಗನ್ ವಿಭಾಗದಲ್ಲಿ ಪ್ರಥಮ ರೂ. ೧೦ ಸಾವಿರ, ದ್ವಿತೀಯ ರೂ. ೭ ಸಾವಿರ ಹಾಗೂ ತೃತೀಯ ರೂ. ೫ ಸಾವಿರ ಬಹುಮಾನವಿದೆ.

ತಾ. ೨೫ರಂದು ಬೆಳಿಗ್ಗೆ ೯ ರಿಂದ ಸ್ಪರ್ಧೆ ಆರಂಭಗೊಳ್ಳಲಿದ್ದು ಕಾರ್ಯಕ್ರಮವನ್ನು ನಿವೃತ್ತ ಕರ್ನಲ್ ಕೋಟ್ರಮಾಡ ನರೇಂದ್ರ

ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಪಾಲ್ಗೊಳ್ಳಲಿದ್ದು, ಟಿ.ಶೆಟ್ಟಿಗೇರಿ-ಶ್ರೀಮಂಗಲ ಶೂರ‍್ಸ್ ಕ್ಲಬ್ ಅಧ್ಯಕ್ಷ ತಡಿಯಂಗಡ ಕಂಬ ಕರುಂಬಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಮಾನ ವಿತರಣಾ ಕಾರ್ಯಕ್ರಮ ಸಂಜೆ ೫.೩೦ಕ್ಕೆ ಜರುಗಲಿದೆ.