ವೀರಾಜಪೇಟೆ, ಡಿ. ೨೨: ಅರಮೇರಿ ಎಸ್.ಎಂ.ಎಸ್. ಪದವಿಪೂರ್ವ ಕಾಲೇಜಿನ ವತಿಯಿಂದ ಕಲೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ನಾಪೋಕ್ಲು ಶ್ರೀ ರಾಮ ಟ್ರಸ್ಟ್ ಶಾಲೆಯು ರನ್ನರ್ ಪ್ರಶಸ್ತಿ ಪಡೆಯಿತು.

ಕಾಲೇಜು ವಿಭಾಗದ ಕ್ವಿಜ್‌ನಲ್ಲಿ ರಾಫೆಲ್ಸ್ ಪದವಿಪೂರ್ವ ಕಾಲೇಜು ಪ್ರಥಮ, ಕಾವೇರಿ ಕಾಲೇಜು ದ್ವಿತೀಯ ಹಾಗೂ ಪೋಟ್ ಡೆಕೋರೇಷನ್‌ನಲ್ಲಿ ಕಾವೇರಿ ಕಾಲೇಜು ಪ್ರಥಮ, ರಾಫೆಲ್ಸ್ ಕಾಲೇಜು ದ್ವಿತೀಯ, ಟ್ರೇಸರ್ ಹಂಟ್‌ನಲ್ಲಿ ರಾಫೆಲ್ಸ್ ಕಾಲೇಜು ಪ್ರಥಮ, ಬಾಳುಗೋಡು ಏಕಲವ್ಯ ಕಾಲೇಜು ದ್ವಿತೀಯ, ಸಮೂಹ ನೃತ್ಯದಲ್ಲಿ ಕಾವೇರಿ ಕಾಲೇಜು ಪ್ರಥಮ, ಬಾಳುಗೋಡು ಏಕಲವ್ಯ ಕಾಲೇಜು ದ್ವಿತೀಯ ಬಹುಮಾನ ಗಳಿಸಿತು.

ಪ್ರೌಢ ಶಾಲಾ ವಿಭಾಗದಲ್ಲಿ ಮಾಡೆಲ್ ಮೇಕಿಂಗ್‌ನಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆ ಪ್ರಥಮ, ನಾಪೋಕ್ಲು ಮರ್ಕಜ್ ಹಾಗೂ ಮೂರ್ನಾಡು ಜ್ಞಾನಜ್ಯೋತಿ ದ್ವಿತೀಯ ಬಹುಮಾನ, ಫೋಟೊ ಡೆಕೋರೇಷನ್‌ನಲ್ಲಿ ನೇತಾಜಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ನಾಪೋಕ್ಲು ಶ್ರೀರಾಮ ಟ್ರಸ್ಟ್ ಶಾಲೆ ಹಾಗೂ ನಾಪೋಕ್ಲು ಎಕ್ಸೆಲ್ ಸ್ಕೂಲ್ ದ್ವಿತೀಯ, ಟ್ರೇಸರ್ ಹಂಟ್‌ನಲ್ಲಿ ನಾಪೋಕ್ಲು ರಾಮ ಟ್ರಸ್ಟ್ ಶಾಲೆ ಪ್ರಥಮ, ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆ ದ್ವಿತೀಯ, ಗ್ರೂಪ್ ಡಾನ್ಸ್ನಲ್ಲಿ ಮಡಿಕೇರಿ ಜಿ.ಟಿ. ಶಾಲೆ ಪ್ರಥಮ, ಎಸ್.ಎಂ.ಎಸ್. ಶಾಲೆ ಹಾಗೂ ಮೂರ್ನಾಡು ಜ್ಞಾನಜ್ಯೋತಿ ಶಾಲೆ ದ್ವಿತೀಯ ಬಹುಮಾನಗಳನ್ನು ಪಡೆಯಿತು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯದ ಅರಣ್ಯ ಮತ್ತು ಪರಿಸರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಘವೇಂದ್ರ, ಎಸ್.ಎಂ.ಎಸ್. ಪಿ.ಯು. ಕಾಲೇಜಿನ ನಿರ್ದೇಶಕ ಸಚಿನ್, ಎಸ್.ಎಂ.ಎಸ್. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕುಸುಮ್ ಟಿಟೋ, ಎಸ್.ಎಂ.ಎಸ್. ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಎಸ್.ಎಂ.ಎಸ್. ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಸಪ್ನ ಸುಬ್ಬಯ್ಯ, ಎಸ್.ಎಂ.ಎಸ್. ಪಿಯು ಕಾಲೇಜಿನ ನಿರ್ದೇಶಕ ಕೃಷ್ಣ ಕಿಶೋರ್ ಉಪಸ್ಥಿತರಿದ್ದರು. ಕಲೋತ್ಸವದಲ್ಲಿ ವಿಜೇತ ತಂಡಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.