(ಕೆ.ಎA ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಡಿ. ೨೨: ಕನ್ನಡ ಮಣ್ಣಿನಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ೩೪ ವರ್ಷಗಳಿಂದ ಎಲ್ಲಾ ವಿದ್ಯಾರ್ಥಿ ಸಂಘಟನೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿವೆ.

೧೯೮೯ರಲ್ಲಿ ಕರ್ನಾಟಕದಲ್ಲಿ ಅಧಿಕೃತವಾಗಿ ಸ್ಥಾಪನೆಯಾದ ಎಸ್.ಎಸ್.ಎಫ್ ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿ ಸಾಹಿತ್ಯೋತ್ಸವವನ್ನು ಆಯೋಜಿಸು ವುದರ ಮೂಲಕ ಎಲೆಮರೆ ಕಾಯಿಯಂತಿರುವ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ.

"ಕೆಡುಕಿನಿಂದ ಒಳಿತಿನೆಡೆಗೆ" ಎಂಬ ಧ್ಯೇಯ ವಾಕ್ಯದೊಂದಿಗೆ ದಾರಿ ತಪ್ಪುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರುವಲ್ಲಿ ಎಸ್.ಎಸ್.ಎಫ್ ಯಶಸ್ವಿಯಾಗಿವೆ.

೧೯೭೩ರಲ್ಲಿ ಕೇರಳದಲ್ಲಿ ಸ್ಥಾಪನೆ ಯಾದ ಎಸ್.ಎಸ್.ಎಫ್ ಧಾರ್ಮಿಕ ವಿದ್ಯಾರ್ಥಿ ಸಂಘಟನೆಯು ಗೋಲ್ಡನ್ ಫಿಫ್ಟಿ ಸಂಭ್ರಮದಲ್ಲಿ ಇದ್ದು, ಇದೀಗ ಕರ್ನಾಟಕದಲ್ಲಿ ಎಸ್.ಎಸ್.ಎಫ್ ಸಾಹಿತ್ಯೋತ್ಸವದ ಕಾವು ಹೆಚ್ಚಿದೆ.

ನೆಲ್ಲಿಹುದಿಕೇರಿಯ ಶಾದಿ ಮಹಲ್ ನಲ್ಲಿ ಡಿಸೆಂಬರ್ ೨೩ ಹಾಗೂ ೨೪ ರಂದು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ನಡೆಯಲಿದೆ.

"ಎರಡು ವರ್ಷಕ್ಕೊಮ್ಮೆ ನಡೆಯುವ ಸಾಹಿತ್ಯೋತ್ಸವ"

ಎಸ್.ಎಸ್.ಎಫ್ ಸಂಘಟನೆಯು ೨೦೦೩ರಲ್ಲಿ ಪ್ರಾರಂಭಿಸಿದ ಸಾಹಿತ್ಯೋತ್ಸವ ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಎರಡು ವರ್ಷಗಳಿಗೊಮ್ಮೆ ಸಾಹಿತ್ಯೋತ್ಸವ ನಡೆಯುತ್ತದೆ. ೨೦೦೩ ರಿಂದ ೨೦೨೧ರವರೆಗೆ "ಪ್ರತಿಭೋತ್ಸವ" ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಕಲೋತ್ಸವ ಈ ವರ್ಷದಿಂದ ಅಧಿಕೃತವಾಗಿ ಸಾಹಿತ್ಯೋತ್ಸವ ಎಂಬ ಹೆಸರಿನಲ್ಲಿ ನಡೆಯುತ್ತಿದ್ದು, ರಾಜ್ಯ ಮಟ್ಟದವರೆಗೆ ಮಾತ್ರ ಸೀಮಿತವಾಗಿದ್ದ ಎಸ್‌ಎಸ್‌ಎಫ್ ಸಾಹಿತ್ಯೋತ್ಸವವು ೨೦೨೧ ರಿಂದ ರಾಷ್ಟಿçÃಯ ಮಟ್ಟದಲ್ಲಿ ಕೂಡ ಆಯೋಜನೆಗೊಳುತ್ತಿದೆ.

ಯೂನಿಟ್ ಮಟ್ಟದಲ್ಲಿ ಆಯ್ಕೆಯಾದ ಪ್ರತಿಭೆಗಳು ಸೆಕ್ಟರ್ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಮೊದಲ ಸ್ಥಾನ ಪಡೆದ ಪ್ರತಿಭೆಗಳು ಡಿವಿಷನ್ ಮಟ್ಟಕ್ಕೆ ಆಯ್ಕೆಯಾಗುತ್ತಾರೆ.

ಡಿವಿಷನ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು ಜಿಲ್ಲಾಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆ ಆಗುತ್ತಾರೆ.

ಮೂರು ಡಿವಿಷನ್‌ಗಳ ಮಧ್ಯೆ ನಡೆಯುವ ಪೈಪೋಟಿಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳು ರಾಜ್ಯಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆಯಾಗಲಿದ್ದಾರೆ. ನಂತರ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು ರಾಷ್ಟಿçÃಯಮಟ್ಟದ ಸಾಹಿತ್ಯೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

೦೫ ವಿಭಾಗ, ೧೨೫ ಕ್ಕೂ ಹೆಚ್ಚು ಸ್ಪರ್ಧೆಗಳು!

ಎಸ್.ಎಸ್.ಎಫ್ ಸಾಹಿತ್ಯೋತ್ಸವವು ಇದೇ ಮೊದಲ ಬಾರಿಗೆ ಅತೀ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಿದೆ. ರಾಷ್ಟಿçÃಯ ಮಟ್ಟದಲ್ಲಿ ಸಾಹಿತ್ಯೋತ್ಸವ ನಡೆಯುತ್ತಿರುವುದರಿಂದ ಎಸ್.ಎಸ್.ಎಫ್ ರಾಜ್ಯ ಸಮಿತಿ ರಾಷ್ಟಿçÃಯ ಮಟ್ಟಕ್ಕೆ ಅನುಕೂಲ ವಾಗುವಂತಹ ವಿಷಯಗಳ ಸ್ಪರ್ಧೆಗಳಿಗೆ ಅವಕಾಶ ನೀಡಲಾಗಿದೆ.

೨೫ ವರ್ಷದೊಳಗಿನ ಸ್ಪರ್ಧಿಗಳು ಸಾಹಿತ್ಯೋತ್ಸವದಲ್ಲಿ ಭಾಗವಹಿಸ ಬಹುದಾಗಿದೆ. ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಕ್ಯಾಂಪಸ್ ಹಾಗೂ ಜನರಲ್ ವಿಭಾಗದಲ್ಲಿ ವಯಸ್ಸಿಗೆ ಅನುಗುಣವಾಗಿ, ಒಟ್ಟು ಐದು ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.

ನೆಲ್ಲಿಹುದಿಕೇರಿಯಲ್ಲಿ ತಾ.೨೩ರಿಂದ (ಇಂದಿನಿAದ) ನಡೆಯಲಿರುವ ಸಾಹಿತ್ಯೋತ್ಸವದಲ್ಲಿ ಐದು ವೇದಿಕೆಗಳನ್ನು ನಿರ್ಮಿಸಲಾಗಿದ್ದು, ೧೦ ತೀರ್ಪುಗಾರರು ಕಾರ್ಯ ನಿರ್ವಹಿಸಲಿದ್ದಾರೆ.

ಕೇರಳ, ಕರ್ನಾಟಕ ರಾಜ್ಯದ ಸಾಹಿತ್ಯೋತ್ಸವದಲ್ಲಿ ತೀರ್ಪು ನೀಡಿ ಅನುಭವವಿರುವ ನುರಿತ ತೀರ್ಪುಗಾರರು ಈ ಬಾರಿಯ ಕೊಡಗು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ತೀರ್ಪು ನೀಡಲಿದ್ದಾರೆ.

ಜಿಲ್ಲಾ ಮಟ್ಟದವರೆಗೆ ಮಾತ್ರ ಸಬ್ ಜೂನಿಯರ್ ಹಾಗೂ ಜೂನಿಯರ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಸೀನಿಯರ್, ಕ್ಯಾಂಪಸ್ ಹಾಗೂ ಜನರಲ್ ವಿಭಾಗದಲ್ಲಿ ಪ್ರಥಮಸ್ಥಾನ ಪಡೆಯುವ ಪ್ರತಿಭೆಗಳು ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಬಹುದಾಗಿದೆ.

ಮೂರು ಡಿವಿಷನ್‌ಗಳ ಮಧ್ಯೆ ಪ್ರಶಸ್ತಿಗಾಗಿ ಪೈಪೋಟಿ!

ಎಸ್.ಎಸ್.ಎಫ್ ಕೊಡಗು ಜಿಲ್ಲಾಮಟ್ಟದ ಸಾಹಿತ್ಯೋತ್ಸವದಲ್ಲಿ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಸೆಕ್ಟರ್‌ಗಳ ಮಧ್ಯೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿವೆ. ಪ್ರತೀ ಬಾರಿಯಂತೆ ಈ ಬಾರಿಯೂ ಕೂಡ ಪ್ರಶಸ್ತಿ ಗೆಲ್ಲುವ ಫೇವರೇಟ್ ಡಿವಿಷನ್ ಮಡಿಕೇರಿಯಾಗಿವೆ. ಕಳೆದ ಹಲವು ವರ್ಷಗಳಿಂದ ಜಿಲ್ಲಾಮಟ್ಟದ ಸಾಹಿತ್ಯೋತ್ಸವದ ಪ್ರಶಸ್ತಿಯನ್ನು ಮಡಿಕೇರಿ ಡಿವಿಷನ್ ಪ್ರತಿಭೆಗಳು ಗೆಲ್ಲುತ್ತಾ ಬಂದಿದೆ.

ಮಡಿಕೇರಿ ಡಿವಿಷನ್‌ನಲ್ಲಿ, ಎಮ್ಮೆಮಾಡು, ನಾಪೋಕ್ಲು, ಹಾಗೂ ಕೊಂಡAಗೇರಿ ಸೆಕ್ಟರ್ ಪ್ರತಿಭೆಗಳು ಮಡಿಕೇರಿ ಡಿವಿಷನ್ ಪ್ರತಿನಿಧಿಸಲಿದ್ದಾರೆ. ಕಡಂಗ, ಸಿದ್ದಾಪುರ, ಪಾಲಿಬೆಟ್ಟ ಸೆಕ್ಟರ್ ಪ್ರತಿಭೆಗಳು ವೀರಾಜಪೇಟೆ ಸೆಕ್ಟರ್ ಪ್ರತಿನಿಧಿಸಲಿದ್ದಾರೆ.

ನೆಲ್ಲಿಹುದಿಕೇರಿ ಸೆಕ್ಟರ್, ಕುಶಾಲನಗರ, ಸುಂಟಿಕೊಪ್ಪ ಹಾಗೂ ಸೋಮವಾರಪೇಟೆ ಸೆಕ್ಟರ್ ಪ್ರತಿಭೆಗಳು ಸೋಮವಾರ ಡಿವಿಷನ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಬಾರಿ ಹೊಸದಾಗಿ ವೀರಾಜಪೇಟೆ ಡಿವಿಷನ್‌ನಲ್ಲಿ ಇದ್ದ, ನೆಲ್ಲಿಹುದಿಕೇರಿಯ ಸೆಕ್ಟರ್ ಸೋಮವಾರ ಡಿವಿಷನ್‌ಗೆ ಸೇರ್ಪಡೆಗೊಂಡಿದೆ. ಸೋಮವಾರಪೇಟೆ ಡಿವಿಷನಲ್ಲಿ ಕಂಡಕರೆ ಹಾಗೂ ನೆಲ್ಲಿಹುದಿಕೇರಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮೂರು ಡಿವಿಷನ್‌ಗಳ ಮಧ್ಯೆ ನಡೆಯುವ ಕೊಡಗು ಜಿಲ್ಲಾಮಟ್ಟದ ಸಾಹಿತ್ಯೋತ್ಸವವು ಈ ಬಾರಿ ಅತೀ ಹೆಚ್ಚು ಸ್ಪರ್ಧೆಗಳು ಇರುವುದರಿಂದ ಯಾರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ ಎಂಬುದು ಕುತೂಹಲವಾಗಿವೆ.

ಕನ್ನಡ, ಇಂಗ್ಲಿಷ್, ಉರ್ದು, ಅರಬಿ, ಮಲಯಾಳಂ ಭಾಷಣ, ಕನ್ನಡ, ಇಂಗ್ಲಿಷ್, ಉರ್ದು ಕವನ ರಚನೆ ಹಾಗೂ ಕವಿತೆ ಬರವಣಿಗೆ, ಸೈನ್ಸ್ ಮೋಡೆಲ್, ಡಿಬೇಟ್, ಟೆಡ್ ಟಾಕ್, ಕವಾಲಿ, ಬುರ್ದಾ, ನಶೀದಾ, ಕನ್ನಡ, ಉರ್ದು, ಮಲಯಾಳಂ ಹಾಡು, ಕನ್ನಡ ಉರ್ದು, ಇಂಗ್ಲೀಷ್, ಪ್ರಬಂಧ, ಅನುವಾದ, ಕಥೆ ಹೇಳುವುದು, ಟ್ವೀಟ್, ಪೋಸ್ಟರ್ ಡಿಸೈನಿಂಗ್, ಡಿಜಿಟಲ್ ಡಿಸೈನಿಂಗ್, ಸ್ಪಾಟ್ ಮ್ಯಾಗಝಿನ್, ಕ್ವಿಝ್ ಸೇರಿ ಐದು ವಿಭಾಗಗಳಲ್ಲಿ ೧೨೫ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ.

ಕೊಡಗು ಜಿಲ್ಲಾ ಎಸ್‌ಎಸ್‌ಎಫ್ ಸಾಹಿತ್ಯೋತ್ಸವದಲ್ಲಿ ಪ್ರಥಮ ಸ್ಥಾನ ಪ್ರಡೆಯುವ ಪ್ರತಿಭೆಗಳು ಫೆಬ್ರವರಿ ೯ ರಿಂದ ೧೧ವರೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಯುವ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು, ಫೆಬ್ರವರಿ ೧೬, ೧೭ ಹಾಗೂ ೧೮ ರಂದು ಆಂಧ್ರಪ್ರದೇಶದಲ್ಲಿ ನಡೆಯಲಿರುವ ರಾಷ್ಟಿçÃಯಮಟ್ಟದ ಸಾಹಿತ್ಯೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಇಂಗ್ಲಿಷ್, ಉರ್ದು, ಅರೇಬಿಕ್ ವಿಷಯಗಳ ಸ್ಪರ್ಧೆಗಳು ಮಾತ್ರ ರಾಷ್ಟಿçÃಯ ಮಟ್ಟದಲ್ಲಿ ನಡೆಯಲಿವೆ.