ಸುಂಟಿಕೊಪ್ಪ, ಡಿ. ೧೯ : ವರ್ಕ್ಶಾಪ್ ಮಾಲೀಕರ ಸಂಘದ ೨೦೨೩-೨೪ ನೇ ಸಾಲಿನ ಅಧ್ಯಕ್ಷರಾಗಿ ಪಿ.ಆರ್.ಸುನಿಲ್ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಮಣಿಕಂಠ ಪುನರ್ ಆಯ್ಕೆ ಆದರೆ, ಉಪಾಧ್ಯ ಕ್ಷರಾಗಿ ಅನಿಸ್, ಸಹಕಾರ್ಯದರ್ಶಿ ಯಾಗಿ ನಿತಿನ್, ಸಂಘಟನಾ ಕಾರ್ಯದರ್ಶಿಯಾಗಿ ಫೆಲಿಕ್ಸ್, ಖಜಾಂಜಿಯಾಗಿ ಸಂದೀಫ್, ಗೌರವಧ್ಯಕ್ಷರಾಗಿ ಬಿ.ಎ.ಸಂತೋಷ್, ಪಿ.ಆರ್.ಸುಕುಮಾರ್, ಕೆ.ಪಿ. ವಿನೋದ್, ಸಮಿತಿ ಸದಸ್ಯರುಗಳಾಗಿ ಕೆ.ಜಿ.ಸತೀಶ್, ಯೇಸುದಾಸ್, ಸುರೇಶ್, ರಜಾಕ್ ಹಾಗೂ ೯ ಮಂದಿಯ ಆಡಳಿತ ಮಂಡಳಿ ರಚಿಸಲಾಯಿತು. ೨೧ನೇ ವಾರ್ಷಿಕ ಮಹಾಸಭೆಯು ಪಿ.ಆರ್. ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ಖರ್ಚುವೆಚ್ಚಗಳ ಲೆಕ್ಕ ಪತ್ರವನ್ನು ಮಂಡಿಸಲಾಯಿತು.