ಮಡಿಕೇರಿ, ಡಿ. ೧೯: ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ಸೂರ್ಲಬ್ಬಿ, ಮುಟ್ಲು, ಹಮ್ಮಿಯಾಲ, ಹಚ್ಚಿನಾಡು ಕುಂಬಾರಗಡಿಗೆ ಕಿಕ್ಕರಳ್ಳಿ ಹಾಗೂ ಮಂಕ್ಯ ಒಳಗೊಂಡ ಸೂರ್ಲಬ್ಬಿ ನಾಡಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ರಾಮ ಜನ್ಮ ಭೂಮಿ ಅಯೋ ಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ತಲುಪಿಸಲಾಯಿತು. ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಾಡಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂ ಡಿದ್ದರು.

ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್ ಅವರು ಅಯೋಧ್ಯೆಯಲ್ಲಿ ೨೦೨೪ರ ಜನವರಿ ೨೨ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾಪನೆ ಮಹೋತ್ಸವದ ಕುರಿತು ಮಾಹಿತಿ ನೀಡಿದರು.

ನಾಡಿನ ತಕ್ಕ ಮುಖ್ಯಸ್ಥರಾದ ಎಂ.ಟಿ. ಪೂವಯ್ಯ, ಓಡಿಯಂಡ ಪಟ್ಟು, ಮುದ್ದಂಡ ಮಧು, ತಂಬು ಕುತ್ತಿರ ಗಪ್ಪುಸೋಮಯ್ಯ, ಹಿರಿಯ ರಾದ ಡಾಲಿ ನಾಣ್ಯಪ್ಪ ಸೇರಿದಂತೆ ಭಕ್ತರು ಪಾಲ್ಗೊಂಡು ಮಂತ್ರಾಕ್ಷತೆ ಕಲಶವನ್ನು ನಾಡ ದೇಗುಲಕ್ಕೆ ಸ್ವಾಗತಿಸಿ