ಸೋಮವಾರಪೇಟೆ, ಡಿ. ೧೯: ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ ಹೆಚ್.ಪಿ. ಮತ್ತು ೧೦ ಹೆಚ್.ಪಿ. ವರೆಗಿನ ನೀರಾವರಿ ವಿದ್ಯುತ್ ಪಂಪ್ ಸೆಟ್ಗಳ ಗ್ರಾಹಕರು ಮಾಸಿಕ ಶುಲ್ಕ ವನ್ನು ಪಾವತಿಸಿದ ನಂತರವೇ ಡಿಬಿಟಿ ಯಲ್ಲಿ ಗ್ರಾಹಕರಿಗೆ ಸರ್ಕಾರದಿಂದ ಮರುಪಾವತಿಸಲು ತಿಳಿಸಿರುವುದರಿಂದ ಕಾಫಿ ಬೆಳೆಗಾರ ೧೦ ಹೆಚ್.ಪಿ ಮತ್ತು ೧೦ ಹೆಚ್.ಪಿ. ವರೆಗಿನ ನೀರಾವರಿ ವಿದ್ಯುತ್ ಪಂಪ್ಸೆಟ್ಗಳ ಗ್ರಾಹಕರು ಎಲ್ಲಾ ವಿದ್ಯುತ್ ಬಾಕಿ ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸು ವಂತೆ ಸೆಸ್ಕ್ ಎಇಇ ವಿ. ರವಿ ಅವರು ತಿಳಿಸಿದ್ದಾರೆ. ತಾ. ೨೩ರ ನಂತರ ವಿದ್ಯುತ್ ಬಾಕಿ ಉಳಿಸಿಕೊಂಡಿ ರುವ ಸ್ಥಾವರಗಳಿಗೆ ನಿಗಮದ ನಿಯಮಾ ನುಸಾರ ಕ್ರಮವಹಿಸಲಾಗುವುದು. ಡಿಬಿಟಿ ಯೋಜನೆಯಡಿ ನೋಂದಾ ಯಿಸಿಕೊಳ್ಳಲು ಆಧಾರ್ ಕಾರ್ಡ್, ಫ್ರೂಟ್ಸ್ ಐಡಿ ಮತ್ತು ಬಿಲ್ಲು ಪ್ರತಿ ದಾಖ ಲಾತಿಗಳನ್ನು ಹತ್ತಿರದ ಸೆಸ್ಕ್ ಕಛೇರಿ ಯಲ್ಲಿ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.
ಟೆಂಡರ್ ಪ್ರಕ್ರಿಯೆ ಮುಂದೂಡಿಕೆ
ಸೋಮವಾರಪೇಟೆ, ಡಿ.೧೯: ಪಟ್ಟಣ ಪಂಚಾಯಿತಿಗೆ ಒಳಪಟ್ಟ ೬೦ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ತಾ. ೨೧ರಂದು ನಿಗದಿ ಗೊಳಿಸಲಾಗಿದ್ದು, ಕಾರಣಾಂತರಗ ಳಿಂದ ಜಿಲ್ಲಾಧಿಕಾರಿಗಳ ಸೂಚನೆ ಮೇರೆ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.