ಸೋಮವಾರಪೇಟೆ, ಡಿ. ೧೯: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ೬೦ ಅಂಗಡಿ ಮಳಿಗೆಗಳಿಗೆ ಟೆಂಡರ್ ಪ್ರಕ್ರಿಯೆ ತಾ. ೨೧ರಂದು ನಿಗದಿಯಾಗಿದ್ದು, ವರ್ತಕರು, ಪ.ಪಂ. ಸದಸ್ಯರುಗಳು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮೇರೆ ಟೆಂಡರ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ತಾಲೂಕು ಕಚೇರಿಯ ಅವ್ಯವಸ್ಥೆಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗ, ಈ ಬಗ್ಗೆ ಮನವಿ ಸಲ್ಲಿಸಿದ್ದು, ಅಂತಿಮವಾಗಿ ಜಿಲ್ಲಾ ಧಿಕಾರಿ ವೆಂಕಟ್ ರಾಜಾ ಅವರು ತಾ. ೨೧ರಂದು ನಡೆಯಬೇಕಿದ್ದ ಟೆಂಡರ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡುವAತೆ ಸೂಚಿಸಿದರು.

ತಾ. ೨೬ರಂದು ಪಟ್ಟಣ ಪಂಚಾಯಿತಿ ಸದಸ್ಯರನ್ನು ಒಳಗೊಂಡAತೆ ಸಾಮಾನ್ಯ ಸಭೆಯನ್ನು ನಡೆಸಿ, ನಂತರ ಟೆಂಡರ್ ಪ್ರಕ್ರಿಯೆಯ ಬಗ್ಗೆ ನಿಯಮಾನುಸಾರ ಕ್ರಮ ವಹಿಸುವಂತೆ ಹಾಗೂ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮಾತ್ರ ಪರಿಗಣಿಸುವಂತೆ ಆಡಳಿತಾಧಿಕಾರಿ ಯಾಗಿರುವ ತಹಶೀಲ್ದಾರ್ ನರಗುಂದ್ ಹಾಗೂ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಸೂಚಿಸಿದ ಹಿನ್ನೆಲೆ, ಅಂತಿಮವಾಗಿ ಟೆಂಡರ್ ಪ್ರಕ್ರಿಯೆ ಯನ್ನು ಮುಂದೂಡಲಾಯಿತು.

ಇದಕ್ಕೂ ಮುನ್ನ ಉಪ ವಿಭಾ ಗಾಧಿಕಾರಿಯನ್ನು ಭೇಟಿ ಮಾಡಿದ ವರ್ತಕರು ಹಾಗೂ ಪ.ಪಂ. ಸದಸ್ಯರು, ಈಗಾಗಲೇ ಬಡ ವರ್ತಕರು ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡು ಜೀವನ ಸಾಗಿಸುತ್ತಿ ದ್ದಾರೆ. ಮಹಿಳೆಯರು, ವಿಶೇಷಚೇತ ನರು, ವಿಧವೆಯರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ನ್ಯಾಯೋಚಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಳಸಿ ಕೊಂಡಿರುವವರಿಗೆ ಮಳಿಗೆಗಳನ್ನು ನೀಡಲು ಸರ್ಕಾರದ ಮಟ್ಟದಲ್ಲಿ ಕ್ರಮವಹಿಸಬೇಕೆಂದು ಉಪವಿಭಾ ಗಾಧಿಕಾರಿ ಯತೀಶ್ ಉಳ್ಳಾಲ್ ಅವರಿಗೆ ಮನವಿ ಸಲ್ಲಿಸಿದ್ದರು.

ಈ ಸಂದರ್ಭ ಮಾತನಾಡಿದ ಪ.ಪಂ. ಸದಸ್ಯ ಶುಭಕರ್, ಕಳೆದ ಅನೇಕ ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ವರ್ತಕರಿಗೆ ಮಳಿಗೆಗಳನ್ನು ನೀಡಬೇಕು. ಇದೀಗ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಖಾಲಿ ಇರುವುದರಿಂದ ತಹಶೀಲ್ದಾರ್‌ರು ಆಡಳಿತಾಧಿಕಾರಿಯಾಗಿದ್ದಾರೆ. ಈ ಹಿಂದೆ ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಟೆಂಡರ್ ಪ್ರಕ್ರಿಯೆಯ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ವ್ಯವಹರಿಸುವಂತೆ ನಿರ್ಧರಿಸಲಾಗಿತ್ತು. ಇದನ್ನು ಆಡಳಿತಾಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ದೂರಿದರು.

ಈ ಮಧ್ಯೆ ಎರಡು ಬಾರಿ ಟೆಂಡರ್ ವಿಚಾರವನ್ನು ಸಭೆಯ ಅಜೆಂಡಾದಲ್ಲಿ ನಮೂದಿಸಿ, ಎರಡು ಬಾರಿಯೂ ಸಹ ಸಭೆಯನ್ನು ಮುಂದೂಡಿದ್ದಾರೆ. ಹಿಂದಿನ ಸಭೆಯ ನಡಾವಳಿಯನ್ನು ತಿರುಚಿ, ಅದನ್ನೇ ದಾಖಲೆಯನ್ನಾಗಿ ಮಾಡಿಕೊಂಡು ತಾ. ೨೧ಕ್ಕೆ ಟೆಂಡರ್‌ಗೆ ದಿನಾಂಕ ನಿಗದಿಗೊಳಿಸಿದ್ದು, ಇದನ್ನು ಮುಂದೂ ಡಬೇಕು. ಪಂಚಾಯಿತಿಯ ಸಾಮಾನ್ಯ ಸಭೆ ಕರೆದು ಚರ್ಚಿಸಬೇಕೆಂದು ಗಮನ ಸೆಳೆದರು. ಪ್ರಮುಖರಾದ ಶಾಂತವೇರಿ ವಸಂತ್ ಮಾತನಾಡಿ, ಬಡ ವರ್ತಕರ ಬದುಕಿನ ಮೇಲೆ ಸವಾರಿ ಮಾಡು ವಂತಾಗಬಾರದು. ಮಾನವೀಯತೆಯ ದೃಷ್ಟಿಯಿಂದ ನ್ಯಾಯ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಅವಕಾಶ ಕಲ್ಪಿಸಬೇಕು. ಓರ್ವರೇ ಎರಡು, ಮೂರು ಅಂಗಡಿಗಳನ್ನು ಬಾಡಿಗೆ ಪಡೆದಿರುವ ಪ್ರಕರಣವಿದ್ದು, ಅಂತಹ ಅಂಗಡಿಗಳನ್ನು ಹರಾಜು ಮಾಡಲು ಕ್ರಮ ವಹಿಸಬೇಕೆಂದರು. ಸಂಜೆ ವೇಳೆಗೆ ಆಗಮಿಸಿದ ಜಿಲ್ಲಾಧಿ ಕಾರಿಗಳು ಅಂತಿಮವಾಗಿ ಟೆಂಡರ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.

೬೦ ಅಂಗಡಿಗಳಿಗೆ ೩೪೪ ಅರ್ಜಿ: ಪಟ್ಟಣ ಪಂಚಾಯಿತಿಯ ಸಿ.ಕೆ. ಸುಬ್ಬಯ್ಯ ರಸ್ತೆ, ಕ್ಲಬ್ ರಸ್ತೆ, ಜೇಸೀ ವೇದಿಕೆ ಮುಂಭಾಗ, ಖಾಸಗಿ ಬಸ್ ನಿಲ್ದಾಣದಲ್ಲಿರುವ ಒಟ್ಟು ೬೦ ಮಳಿಗೆ ಗಳನ್ನು ಹರಾಜು ಮಾಡಲು ಕ್ರಮ ವಹಿಸಲಾಗಿದ್ದು, ತಾ. ೨೧ಕ್ಕೆ ಟೆಂಡರ್ ನಿಗದಿಯಾಗಿತ್ತು.

ಇದೇ ಪ್ರಥಮ ಬಾರಿಗೆ ಟೆಂಡರ್ ಪ್ರಕ್ರಿಯೆ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು, ೬೦ ಅಂಗಡಿ ಮಳಿಗೆ ಗಳಿಗೆ ೩೪೪ ಅರ್ಜಿ ಸಲ್ಲಿಕೆಯಾಗಿದೆ. ಪ್ರತಿ ಅಂಗಡಿ ಮಳಿಗೆಗೆ ಒಂದು ಲಕ್ಷ ಮುಂಗಡ ಹಣ ನಿಗದಿಪಡಿಸಿದ್ದು, ಪಟ್ಟಣ ಪಂಚಾಯಿತಿಯ ಹೆಸರಿಗೆ ೧ ಲಕ್ಷ ಮುಖಬೆಲೆಯ ಡಿ.ಡಿ. ತೆಗೆದು ೩೪೪ ಅರ್ಜಿ ಸಲ್ಲಿಸಲಾಗಿದೆ.

ಖಾಸಗಿ ಬಸ್ ನಿಲ್ದಾಣದಲ್ಲಿರುವ ೧೫ ಅಂಗಡಿಗಳಿಗೆ ೧೫, ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ೧೭ ಮಳಿಗೆಗಳಿಗೆ ೯೧, ಕ್ಲಬ್‌ರಸ್ತೆಯಲ್ಲಿರುವ ೧೯ ಮಳಿಗೆಗಳಿಗೆ ೬೪, ಜೇಸೀ ವೇದಿಕೆ ಮುಂಭಾಗ ವಿರುವ ೯ ಮಳಿಗೆಗಳಿಗೆ ೭೮ ಅರ್ಜಿಗಳು ಸಲ್ಲಿಕೆಯಾಗಿವೆ.