ಮುಳ್ಳೂರು, ಡಿ. ೧೮: ಸೋಮವಾರಪೇಟೆ ತಾಲೂಕಿನ ಹಂಡ್ಲಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತಗೊಂಡಿರುವ, ವರ್ಗಾವಣೆಗೊಂಡಿ ರುವ ಶಿಕ್ಷಕರು ಹಾಗೂ ಹಂಡ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗೆ ಗೋಪಾಲಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿನಂದನಾ ಮತ್ತು ಸನ್ಮಾನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು. ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ. ಜಯಕುಮಾರ್, ನಿವೃತ್ತ ಶಿಕ್ಷಕ ಡಿ.ಬಿ. ಸೋಮಪ್ಪ ಅವರು ಮಾತನಾಡಿದರು.

ಹಿರಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿ.ಎಲ್. ಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗೋಪಾಲಪುರ ಶಾಲೆಯಿಂದ ನಿವೃತ್ತಗೊಂಡ ಶಿಕ್ಷಕ ಟಿ.ಕೆ. ಅಪ್ಪಸ್ವಾಮಿ, ಹಂಡ್ಲಿ ಶಾಲೆಯಿಂದ ನಿವೃತ್ತಗೊಂಡ ಶಿಕ್ಷಕ ಎಂ.ಎA. ಪ್ಯಾರಿ, ಮೂದ್ರವಳ್ಳಿ ಶಾಲೆಯಿಂದ ನಿವೃತ್ತಿಗೊಂಡ ಶಿಕ್ಷಕಿ ಎ.ಎಸ್. ಸ್ವಾತಿ, ಗೋಪಾಲಪುರ ಶಾಲೆಯಿಂದ ನಿವೃತ್ತಗೊಳ್ಳಲಿ ರುವ ಶಿಕ್ಷಕ ಎಚ್.ಬಿ. ಚಂದ್ರಶೇಖರ್ ಹಾಗೂ ಹಂಡ್ಲಿ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸು ತ್ತಿದ್ದು, ಇದೀಗ ಹಾಸನ ಜಿಲ್ಲೆಗೆ ಜಿಪಿಟಿ ಶಿಕ್ಷಕರಾಗಿ ವರ್ಗಾವಣೆಗೊಂಡಿರುವ ಎಂ.ಟಿ. ಮನೋಹರ್ ಇವರುಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಸಮಾರಂಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕವಿತಾ, ಹಿರಿಯ ಶಿಕ್ಷಕರುಗಳಾದ ಯಶೋಧ, ಮಾಲತಿ, ಸುಧಾ, ಮಲ್ಲೇಶ್, ವಿಶ್ವನಾಥ್, ಸಿಆರ್‌ಪಿ ಸಿ.ಕೆ. ದಿನೇಶ್, ಪುಟ್ಟಸ್ವಾಮಿ ಹಂಡ್ಲಿ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಪಾಲ್ಗೊಂಡಿದ್ದರು.