ಪೊನ್ನಂಪೇಟೆ, ಡಿ. ೧೮: ಕುಡಿಯುವ ನೀರು, ಶೌಚಾಲಯ, ಚರಂಡಿ, ವಿದ್ಯುತ್, ಮೈದಾನ ದುರಸ್ಥಿ, ಇಂಗುಗುAಡಿ, ಕೈ ತೊಳೆಯುವ ವ್ಯವಸ್ಥೆಗಳನ್ನು ಒದಗಿಸುವಂತೆ ಮತ್ತು ರಾತ್ರಿ ಶಾಲೆಯಲ್ಲಿ ಪುಂಡರು ಮದ್ಯಪಾನ ಕೂಟ ನಡೆಸುವುದನ್ನು ತಡೆಗಟ್ಟುವಂತೆ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಕೆಪಿಎಸ್ ಪ್ರೌಢ ಶಾಲಾ ವಿದ್ಯಾರ್ಥಿನಿ ಅಮೃತಾ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿನಿ ರುಕ್ಮಿಣಿ, ತೇಜಸ್ವಿನಿ, ದೀಪಿಕಾ, ರೇಷ್ಮ, ದಿಕ್ಷಾ, ಕಲ್ಪಿತಾ, ಮಂಜುಳಾ ಇನ್ನಿತರ ವಿದ್ಯಾರ್ಥಿಗಳು ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಮಕ್ಕಳಿಗೆ, ವಕೀಲ ರಫಿಕ್ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಅನುಷಾ, ಮಕ್ಕಳ ಹಕ್ಕು ಮತ್ತು ಅಭಿವೃದ್ಧಿ ವಿಚಾರವನ್ನು ತಿಳಿಸಿದರು.
ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಅರುಣ ವಿದ್ಯಾರ್ಥಿ ಗಳು ಮೊಬೈಲ್ ಹೆಚ್ಚಾಗಿ ಬಳಸದಂತೆ ಸಲಹೆ ನೀಡಿದರು.
ಮಕ್ಕಳ ಸಹಾಯ ವಾಣಿಯ ಸಹಾಯಕಿ ಮಧು ಮಕ್ಕಳ ಸಹಾಯವಾಣಿ ನಿರ್ವಹಿಸುವ ಕಾರ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಗಿರಜಾ ವೆಂಕಟೇಶ್, ಸದಸ್ಯರಾದ ರಾಮಕೃಷ್ಣ, ವಿಜಯ ಕುಮಾರ್, ಅಣ್ಣೀರ ಹರೀಶ್, ಮೂಕಳೇರ ಮಧು, ಅರತಿ ಸುರೇಶ್, ರಮೇಶ್, ವಿಮಲ, ಭಾರತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಪೊನ್ನಂಪೇಟೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ತಿರುನಲ್ಲಿಮಾಡ ಜೀವನ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ನಾಗವೇಣಿ, ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ವಾಸುವರ್ಮ, ಪ್ರೌಢ ಶಾಲಾ ಶಿಕ್ಷಕ ಚಿದಾನಂದ, ಮಹಿಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿಯಾಗಿ ರೀತಾ ಬಿ.ಎಸ್, ಶಾಲಾ ಶಿಕ್ಷಕರುಗಳಾದ ಝಾನ್ಸಿ, ರೇಖಾ. ಪಿ.ಎ, ಗೀತಾ, ರಮ್ಯ. ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್. ಟಿ.ಎಸ್, ಅತಿಥಿ ಶಿಕ್ಷಕಿ ಅಜಿತ, ವಿದ್ಯಾರ್ಥಿಗಳು ಇದ್ದರು.