ಪೊನ್ನAಪೇಟೆ, ಡಿ. ೧೮: ಬಿಟ್ಟಂಗಾಲ ಸಮೀಪದ ಕಂಡAಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಸಮಿತಿ ವತಿಯಿಂದ ಸ್ಥಳೀಯ ಶಾಲಾ ಮೈದಾನದಲ್ಲಿ ಕಳೆದ ೪ ದಿನಗಳಿಂದ ನಡೆಯುತ್ತಿದ್ದ ಮೂರು ನಾಡು ವ್ಯಾಪ್ತಿಯ ೨ನೇ ವರ್ಷದ ಕೌಟುಂಬಿಕ ಹಾಕಿ ಪಂದ್ಯಾವಳಿ ಮುಕ್ತಾಯಗೊಂಡಿದ್ದು, ಕಳೆದ ಬಾರಿಯ ಚಾಂಪಿಯನ್ ಕಂಡAಗಾಲದ ಅಪ್ಪಂಡೇರAಡ ತಂಡ ೨ನೇ ಬಾರಿಗೆ ವಿನ್ನರ್ಸ್ ಪ್ರಶಸ್ತಿ ಪಡೆಯುವುದರ ಮೂಲಕ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿತು. ಫೈನಲ್ ಪಂದ್ಯಾವಳಿಯಲ್ಲಿ ೫-೩ ಗೋಲಿನ ಅಂತರದಿAದ ಮದ್ರೀರ ತಂಡವನ್ನು ಮಣಿಸಿದ ಅಪ್ಪಂಡೇರAಡ ತಂಡ ಸತತವಾಗಿ ೨ನೇ ಬಾರಿಗೆ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.

ಫೈನಲ್ಸ್ ಪಂದ್ಯದಲ್ಲಿ ಆರಂಭದಿAದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ವಿಜೇತ ಅಪ್ಪಂಡೇರAಡ ತಂಡ ಎದುರಾಳಿ ಆಟಗಾರರ ವಿರುದ್ಧ ರಕ್ಷಣಾತ್ಮಕ ಮತ್ತು ಸಂಘಟಿತವಾದ ಆಟವಾಡಿ ಪ್ರಶಸ್ತಿ ಗೆದ್ದುಕೊಂಡಿತು. ಅಪ್ಪಂಡೇರAಡ ತಂಡದ ಪರವಾಗಿ ಆಡಿದ ಅತಿಥಿ ಆಟಗಾರರು ಇಡೀ ಪಂದ್ಯದುದ್ದಕ್ಕೂ ಪ್ರೇಕ್ಷಕರ ಗಮನ ಸೆಳೆದರಲ್ಲದೆ, ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರರಾದ ಲಿಖಿತ್ ೨ ಗೋಲು, ಆಭರಣ ಸುದೇವ್, ನಿತಿನ್ ಮತ್ತು ಭರತ್ ತಲಾ ಒಂದು ಗೋಲು ಹೊಡೆದರು. ತಂಡದ ವಿರುದ್ಧ ದಾಖಲಾಗಬಹುದಾಗಿದ್ದ ಸಾಕಷ್ಟು ಗೋಲುಗಳನ್ನು ತಡೆಗೋಡೆಯಂತೆ ನಿಂತು ತಡೆದ ಅಪ್ಪಂಡೇರAಡ ತಂಡದ ಗೋಲ್ ಕೀಪರ್ ಕೌಶಿಕ್ ಸುಬ್ರಮಣಿ ಪಂದ್ಯಾವಳಿಯ ಸರಣಿ ಪುರುಷೋತ್ತಮ ವಿಶೇಷ ಪ್ರಶಸ್ತಿಗೆ ಪಾತ್ರರಾದರು. ಅಪ್ಪಂಡೇರAಡ ಯಶ್ವಂತ್ ಕಾಳಪ್ಪ ತರಬೇತುದಾರರಾಗಿ ಮತ್ತು ಅಪ್ಪಂಡೇರAಡ ಸುರೇಶ್ ವಿಜೇತ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.