ಶನಿವಾರಸಂತೆ, ಡಿ. ೧೭: ಹಿಂದೂ ಜಾಗರಣಾ ವೇದಿಕೆ ವತಿಯಿಂದ ೨ ನೇ ವರ್ಷದ ಶ್ರೀ ಹನುಮ ಜಯಂತಿ ಹಾಗೂ ಅದ್ದೂರಿ ಶೋಭಾಯಾತ್ರೆ ಕಾರ್ಯಕ್ರಮ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆ ಯಿಂದ ಜರುಗಿತು.

ಕಾರ್ಯಕ್ರಮದ ಪ್ರಯುಕ್ತ ಸಂಜೆ ೬-೩೦ ಕ್ಕೆ ತ್ಯಾಗರಾಜ ಕಾಲೋನಿಯ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಅರ್ಚಕ ಮಂಜು ನಾಥ್ ಶರ್ಮ ಅವರು ವಿನಾಯಕನಿಗೆ ಪೂಜೆ ಸಲ್ಲಿಸಿ ಹಿಂದೂ ಜಾಗರಣಾ ವೇದಿಕೆ ಆಯೋಜಕರ ಸಮ್ಮುಖದಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಶೋಭಾ ಯಾತ್ರೆಯಲ್ಲಿ ಕೊಣನೂರಿನ ಬೆಳ್ಳಿರಥದಲ್ಲಿ ಶ್ರೀ ಹನುಮಾನ್ ದೇವರ ಅಲಂಕೃತ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಕಲೇಶಪುರದ ಚಂಡೆವಾದ್ಯ ಮತ್ತು ಪುತ್ತೂರಿನ ನಾಸಿಕ್ ಬ್ಯಾಂಡ್ ದೊಂದಿಗೆ ವಿದ್ಯುತ್ ದೀಪಾಲಂಕಾರ ಸಹಿತ ಡಿ.ಜೆ. ಸೌಂಡ್ಸ್ನ ಮೆರವಣಿಗೆ ಶೋಭಾಯಾತ್ರೆಯ ಮೆರುಗು ಹೆಚ್ಚಿಸಿತು. ಜನರು ಕುಣಿದು ಕುಪ್ಪಳಿಸಿದರು.

ಆಕರ್ಷಕ ಶೋಭಾ ಯಾತ್ರೆ ಯನ್ನು ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನಸಾಗರ ಕಣ್ತುಂಬಿಕೊAಡಿತು. ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹಾಗೂ ಪ್ರತಿ ಅಂಗಡಿ-ಮುAಗಟ್ಟು, ಕೇಸರಿ ಬಂಟಿAಗ್ಸ್ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುತಿತ್ತು.

ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆ ಮುಖ್ಯರಸ್ತೆಯ ಮೂಲಕ ಗುಡುಗಳಲೆ ಶ್ರೀ ಬಸವೇಶ್ವರ ದೇವಸ್ಥಾನ ತಲುಪಿ ಅಲ್ಲಿಂದ ಪ್ರವಾಸಿ ಮಂದಿರ ರಸ್ತೆಯ ಮಾರ್ಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಇರುವ ಬನ್ನಿ ಮಂಟಪ ತಲುಪಿ ಸಂಪನ್ನವಾಯಿತು.

ನಂತರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಪುನೀತ್, ಗೌರವಾಧ್ಯಕ್ಷ ಸೋಮ ಶೇಖರ್ ಪೂಜಾರಿ, ಉಪಾಧ್ಯಕ್ಷ ದಿನೇಶ್, ಕಾರ್ಯದರ್ಶಿಗಳಾದ ಅರುಣ್ ಕುಮಾರ್ ಮತ್ತು ಸಂದೀಪ್ ನೇತೃತ್ವ ವಹಿಸಿದ್ದರು. ಅಸಂಖ್ಯಾತ ಕಾರ್ಯಕರ್ತರು, ಕಾರ್ಯಕ್ರಮ ಆಯೋಜಕರು ಪಾಲ್ಗೊಂಡಿದ್ದರು.