ಮಲದ ಗುಂಡಿಯೊಳಗೆ ಮಕ್ಕಳನ್ನು ಇಳಿಸಿ ಸ್ವಚ್ಛತಾ ಕಾರ್ಯ

ಕೋಲಾರ, ಡಿ. ೧೭: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಾಂಶುಪಾಲೆ ಭಾರತಮ್ಮ, ವಾರ್ಡನ್ ಮಂಜುನಾಥ್ ಹಾಗೂ ಶಿಕ್ಷಕ ಮುನಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನವೀನ್ ಕುಮಾರ್ ರಾಜ್, ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಇದೊಂದು ತೀರಾ ಗಂಭೀರವಾದ ವಿಚಾರ. ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ದೊಡ್ಡ ಲೋಪ ಎಸಗಿದ್ದಾರೆ. ಹೀಗಾಗಿ, ಅಮಾನತುಗೊಳಿಸಿ ತನಿಖೆ ನಡೆಸಲು ನಿರ್ದೇಶನ ನೀಡಿದ್ದೇನೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಮೊರಾರ್ಜಿ ದೇಸಾಯಿ ಶಾಲೆಗೆ ಜಿಲ್ಲಾ ನ್ಯಾಯಾಧೀಶ ಸುನೀಲ್ ಹೊಸಮಣಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಮಕ್ಕಳ ಬಳಿಯೂ ಸಮಸ್ಯೆಯನ್ನು ವಿಚಾರಿಸಿದ್ದಾರೆ. ಪ್ರತಿ ಕೊಠಡಿಗೂ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ನ್ಯಾಯಾಧೀಶರು ಮಕ್ಕಳಿಂದ ದೂರು ಪಡೆದುಕೊಂಡರು. ಈ ವೇಳೆ ಮಕ್ಕಳು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ವಾರ್ಡನ್ ಮಂಜುನಾಥ್ ಹಾಗೂ ಶಿಕ್ಷಕ ಅಭಿಷೇಕ್ ಅವರಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಭದ್ರತಾ ವೈಫಲ್ಯವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ-ಮೋದಿ

ನವದೆಹಲಿ, ಡಿ. ೧೬: ಸಂಸತ್ ಭದ್ರತಾ ವೈಫಲ್ಯ ಒಂದು ಗಂಭೀರ ವಿಷಯವಾಗಿದ್ದು, ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂದರ್ಶನವೊAದರಲ್ಲಿ ಮೋದಿ ಅವರು ಭದ್ರತಾ ವೈಫಲ್ಯದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ‘ಇಂತಹ ಸನ್ನಿವೇಶಗಳಲ್ಲಿ ಎಲ್ಲರೂ ಒಟ್ಟಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಅದನ್ನು ಬಿಟ್ಟು ಪರಸ್ಪರ ಕಿತ್ತಾಡಿಕೊಳ್ಳುವುದು ಸರಿಯಲ್ಲ' ಎಂದಿದ್ದಾರೆ. ಭದ್ರತಾ ವೈಫಲ್ಯಕ್ಕೆ ಸಂಬAಧಿಸಿದAತೆ ತನಿಖಾ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿವೆ. ಅದೇ ರೀತಿ ಕೃತ್ಯದಲ್ಲಿ ಭಾಗಿಯಾದವರ ಹಿನ್ನೆಲೆಯನ್ನು ಪರಿಶೀಲಿಸುವ ಮೂಲಕ ಈ ಕೃತ್ಯ ಎಸಗುವುದಕ್ಕೆ ಹಿಂದಿರುವ ಪ್ರಚೋದನೆಯೇನು ಎಂಬುದನ್ನು ಪತ್ತೆಮಾಡಬೇಕಿದೆ ಎಂದರು.

ಮೂವರು ‘ಹೈಬ್ರಿಡ್' ಭಯೋತ್ಪಾದಕರ ಬಂಧನ

ಶ್ರೀನಗರ, ಡಿ. ೧೭: ಜಮ್ಮು- ಮತ್ತು ಕಾಶ್ಮೀರದ ಬೆಮಿನಾ ಪ್ರದೇಶದಲ್ಲಿ ಕಳೆದ ವಾರ ಪೊಲೀಸರೊಬ್ಬರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ‘ಹೈಬ್ರಿಡ್' ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಆರ್.ಆರ್. ಸ್ವೆöÊನ್ ಭಾನುವಾರ ತಿಳಿಸಿದ್ದಾರೆ. ಕಾನ್‌ಸ್ಟೆಬಲ್ ಮೊಹಮ್ಮದ್ ಹಫೀಜ್ ಡಿಸೆಂಬರ್ ೯ ರಂದು ಮನೆಗೆ ಮರಳುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿತ್ತು. ಪಾಕಿಸ್ತಾನ ಮೂಲದ ಭಯೋತ್ಪಾದಕ ಅರ್ಜುಮಂಡ್ ಅಲಿಯಾಸ್ ಹಮ್ಜಾ ಬುರ್ಹಾನ್ ಅವರು ದಾಳಿ ನಡೆಸಲು ಸ್ಥಳೀಯ ಮಾಸ್ಟರ್‌ಮೈಂಡ್ ಡ್ಯಾನಿಶ್ ಅಹ್ಮದ್ ಮಲ್ಲಾ ಅವರೊಂದಿಗೆ ಸಂಪರ್ಕ ಸಾಧಿಸಿ ಈ ಸಂಚು ರೂಪಿಸಿದ್ದರು ಎಂದು ಡಿಜಿಪಿ ಹೇಳಿದರು. ದಾಳಿಯಲ್ಲಿ ಭಾಗಿಯಾದ ಹೈಬ್ರಿಡ್ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಭಯೋತ್ಪಾದಕರು ಆರು ಗುಂಡುಗಳನ್ನು ಹಾರಿಸಿದ್ದಾರೆ. ಇದರಲ್ಲಿ ಮೂರು ಗುಂಡುಗಳು ಪೊಲೀಸರಿಗೆ ತಗುಲಿದ್ದರೆ ಉಳಿದ ಮೂರು ಗುಂಡುಗಳು ಗುರಿಯಿಂದ ತಪ್ಪಿವೆ ಎಂದು ಅವರು ಮಾಹಿತಿ ನೀಡಿದರು.

ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ನವದೆಹಲಿ, ಡಿ. ೧೭: ಭಾರತೀಯ ವಾಯುಪಡೆಯು ತನ್ನ ಆಂತರಿಕ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಯತ್ನದಲ್ಲಿ ಭಾರಿ ಯಶಸ್ಸು ಕಂಡಿದ್ದು, ಸಮರ್ ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಐಎಎಫ್ ತನ್ನ ಹಳೆಯ ರಷ್ಯಾ ಮೂಲದ ಏರ್-ಟು-ಏರ್ ಕ್ಷಿಪಣಿ ವ್ಯವಸ್ಥೆಯನ್ನು ಬಳಸಿಕೊಂಡು ಭರವಸೆಯ ಪ್ರತೀಕಾರದ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಭಾರತೀಯ ವಾಯುಪಡೆಯು ಇತ್ತೀಚಿಗೆ ಸೂರ್ಯಲಂಕಾ ವಾಯುನೆಲೆಯಲ್ಲಿ ನಡೆದ ಅಸ್ಟಾçಶಕ್ತಿ ೨೦೨೩ ಕಸರತ್ತಿನ ಸಂದರ್ಭದಲ್ಲಿ ಆಂತರಿಕವಾಗಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಿದ ಸಮರ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಪ್ರಯೋಗ ನಡೆದಿದೆ. ಇದನ್ನು ಭಾರತೀಯ ವಾಯುಪಡೆಯ ನಿರ್ವಹಣಾ ಕಮಾಂಡ್ ಅಡಿಯಲ್ಲಿನ ಘಟಕವು ಅಭಿವೃದ್ಧಿಪಡಿಸಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಕ್ಷಿಪಣಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎ.ಪಿ. ಸಿಂಗ್ ಈಗಾಗಲೇ ವೀಕ್ಷಿಸಿದ್ದಾರೆ.

ನಮ್ಮ ದೇಶ ಹಿಂದೂಗಳ ರಾಷ್ಟçವಲ್ಲ - ಸಿದ್ದರಾಮಯ್ಯ

ಗದಗ, ಡಿ. ೧೭: ನಮ್ಮ ದೇಶ ಕೇವಲ ಹಿಂದೂಗಳ ರಾಷ್ಟç ಅಲ್ಲ, ಇದು ಬಹುತ್ವದ ದೇಶವಾಗಿದೆ. ಕೇವಲ ಹಿಂದೂ ರಾಷ್ಟçವನ್ನು ಮಾಡಲು ಆಗುವುದಿಲ್ಲ. ಈ ದೇಶ ಹಿಂದೂ ರಾಷ್ಟç ಆಗಬೇಕೆಂಬುದು ಬಿಜೆಪಿಯವರ ಸಿದ್ಧಾಂತವಷ್ಟೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ‘ಶ್ರೀ ರಾಮಮಂದಿರ ಉಳಿಯಬೇಕಾದರೆ ಹಿಂದೂ ರಾಷ್ಟç ಆಗಬೇಕು’ ಎಂಬ ಉಡುಪಿ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಇಂದು ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿಗಳ ಹೇಳಿಕೆಗೆ ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದಲ್ಲಿ ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಜೈನರು ಸಹ ಇದ್ದಾರೆ. ೧೯೫೦ರಲ್ಲಿ ಜನಸಂಘ ಸ್ಥಾಪಿಸಿ ಹಿಂದೂ ರಾಷ್ಟç ಮಾಡುತ್ತೇವೆ ಅಂದರು. ೧೯೨೫ರಲ್ಲಿ ಹೆಡ್ಗೇವಾರ್ ಆರ್‌ಎಸ್‌ಎಸ್ ಸ್ಥಾಪನೆ ಮಾಡಿದ್ದರು. ಈ ಬಗ್ಗೆ ಬಿಜೆಪಿಯವರನ್ನು ಕೇಳಿ, ಅವರಿಗೆ ಇವೆಲ್ಲವೂ ಗೊತ್ತೇ ಇಲ್ಲ. ಬಿಜೆಪಿಯವರು ಸುಮ್ಮನೆ ಬುರುಡೆ ಬಿಡುತ್ತಾರೆ ಎಂದು ಎಂದರು.

ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ ಮೋದಿ ಬೆಂಗಾವಲು ಪಡೆ

ವಾರಣಾಸಿ, ಡಿ. ೧೭: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಭಾನುವಾರ ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುವ ವೇಳೆ ಆ್ಯಂಬ್ಯುಲೆನ್ಸ್ಗೆ ದಾರಿ ಮಾಡಿಕೊಡಲು ತನ್ನ ಬೆಂಗಾವಲು ಪಡೆಯನ್ನು ತಡೆದಿದ್ದಾರೆ. ಪ್ರಧಾನಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ಜನರು ನಿಂತಿದ್ದು, ಆ್ಯಂಬುಲೆನ್ಸ್ ಬೆಂಗಾವಲು ಪಡೆಯನ್ನು ಹಿಂದಿಕ್ಕುತ್ತಿರುವುದು ವೀಡಿಯೊದಲ್ಲಿದೆ. ಪ್ರಧಾನಿ ಮೋದಿ ತಮ್ಮ ಎರಡು ದಿನಗಳ ಭೇಟಿಯಲ್ಲಿ ವಾರಣಾಸಿ ಮತ್ತು ಪೂರ್ವಂಚಲದಲ್ಲಿ ರೂ. ೧೯,೦೦೦ ಕೋಟಿಗೂ ಹೆಚ್ಚು ಮೊತ್ತದ ೩೭ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅಲ್ಲದೇ ಅವರು ನಮೋ ಘಾಟ್‌ನಿಂದ ಕಾಶಿ ತಮಿಳು ಸಂಗಮA ೨.೦ ನ್ನು ಪ್ರಾರಂಭಿಸುತ್ತಾರೆ ಮತ್ತು ಕನ್ಯಾಕುಮಾರಿಯಿಂದ ವಾರಣಾಸಿಗೆ ಹೊಸ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.