ಇಂದು ವಿಶ್ವ ವಲಸಿಗರ ದಿನ
ಜೀವಿಗಳು ಒಂದಲ್ಲ ಒಂದು ಕಾರಣಗಳಿಂದ ಬೇರೆ ಸ್ಥಳಗಳಿಗೆ ಹೋಗುವುದನ್ನು ಕಾಣುತ್ತೇವೆ. ಮಾನವ ಕೂಡ ಇದರಿಂದ ಹೊರತಾಗಿಲ್ಲ. ನಾಗರಿಕತೆ ಬೆಳೆಯುವ ಮೊದಲಿನಿಂದಲೇ ಮಾನವ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳ ಬದಲಾವಣೆ ಮಾಡುತ್ತಿದ್ದುದನ್ನು ಇತಿಹಾಸದ ಪುಟಗಳಲ್ಲಿ ಓದಿದ್ದೇವೆ.
ನಾಗರಿಕತೆಯು ಬೆಳೆದಂತೆಲ್ಲಾ ತನ್ನ ಸುಭದ್ರ ಜೀವನಕ್ಕೆ ಭದ್ರತೆಯನ್ನು ಒದಗಿಸುವ ನೆಲೆಯ ಹುಡುಕಾಟದಲ್ಲಿ ಚಲನಶೀಲನಾಗಿರುತ್ತಿದ್ದ. ಹೀಗೆ ಒಂದು ಕಡೆಯಿಂದ ಮತ್ತೊಂದೆಡೆಗೆ ಹೋಗುವುದನ್ನು ವಲಸೆ ಎಂದು ಕರೆಯುತ್ತಾರೆ.
ಪ್ರತಿವರ್ಷ ಡಿಸೆಂಬರ್ ೧೮ ರಂದು ವಲಸಿಗರ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ವಲಸೆ ಎಂದರೇನು? ವಲಸಿಗರು ಎಂದರೆ ಯಾರು ? ವಲಸೆಗೆ ಕಾರಣಗಳೇನು ? ಅದರ ಪರಿಣಾಮಗಳು ಇತ್ಯಾದಿ ಅಂಶಗಳ ಬಗ್ಗೆ ಅವಲೋಕನ ಮಾಡೋಣ.
ಯಾವುದೇ ಉದ್ದೇಶಗಳಿಗಾಗಿ ಒಬ್ಬ ವ್ಯಕ್ತಿ ತನ್ನ ಸ್ವಂತ ಸ್ಥಳದಿಂದ ತಾತ್ಕಾಲಿಕವಾಗಿಯೊ ಅಥವಾ ಶಾಶ್ವತವಾಗಿಯೋ ಬೇರೆ ಸ್ಥಳಕ್ಕೆ ಹೋಗಿ ನೆಲೆಸುವುದನ್ನು ವಲಸೆ ಎಂದು ಕರೆಯುತ್ತಾರೆ. ಯಾವ ವ್ಯಕ್ತಿ ವಲಸೆ ಹೋಗಿರುತ್ತಾನೋ ಆತನನ್ನು ‘ವಲಸಿಗ’ ಎಂದು ಕರೆಯಲಾಗುತ್ತದೆ. ವಲಸೆ ಪದವನ್ನು ‘ಗುಳೆ’ ಅಥವಾ ‘ಒಕ್ಕಲು ಹೋಗುವುದು’ ಎಂಬಿತ್ಯಾದಿ ಪದಗಳಿಂದಲೂ ಹೇಳುವರು.
ತಮ್ಮ ಸ್ವಂತ ದೇಶದಲ್ಲಿ ಪೌರತ್ವವನ್ನು ತ್ಯಜಿಸಿ ಮತ್ತೊಂದು ದೇಶದಲ್ಲಿ ಪೌರತ್ವವನ್ನು ಪಡೆಯುವ ವ್ಯಕ್ತಿಗಳಿಗೂ “ವಲಸಿಗ” ಎಂಬ ಪದವನ್ನು ಬಳಸಲಾಗುತ್ತದೆ. ತಮ್ಮ ಕುಟುಂಬ ನಿರ್ವಹಣೆಗೆ ಉದ್ಯೋಗ ಅರಸುವ ಮೂಲಕವೂ ಹಾಗೂ ಬೇರೆ ದೇಶದ ಜೀವನದ ಅಗತ್ಯತೆ ಅಥವಾ ಇನ್ನಿತರ ಉದ್ದೇಶಗಳಿಗಾಗಿಯೂ ಅಲ್ಲಿಯ ಪೌರತ್ವವನ್ನು ಬಯಸುವರು.
ಇಂದು ಹೆಚ್ಚಿನ ಜನರು ತಾವು ಹುಟ್ಟಿದ ದೇಶವನ್ನು ಬಿಟ್ಟು ಬೇರೆ ದೇಶಗಳಲ್ಲಿ ವಾಸಿಸುತ್ತಿರುವುದು ಸಾಮಾನ್ಯವಾಗಿದೆ. ಯುಎನ್ ಪ್ರಕಾರ, ಜಾಗತಿಕವಾಗಿ ವಲಸಿಗರ ಸಂಖ್ಯೆಯು ೨೦೧೦ ರಲ್ಲಿ ೫೧ ಮಿಲಿಯನ್ ಆಗಿದ್ದು, ೨೦೧೯ ರಲ್ಲಿ ಅಂದಾಜು ೨೭೨ ಮಿಲಿಯನ್ ತಲುಪಿದೆ. ೨೦೦೦ ರಲ್ಲಿ ೨.೮ ಪ್ರತಿಶತ ಮತ್ತು ೧೯೮೦ ರಲ್ಲಿ ೨.೩ ಪ್ರತಿಶತಕ್ಕೆ ಹೋಲಿಸಿದರೆ ವಿಶ್ವ ಜನಸಂಖ್ಯೆಯಲ್ಲಿ ಅಂರ್ರಾಷ್ಟಿçÃಯ ವಲಸಿಗರ ಪ್ರಮಾಣವು ಏರಿದೆ ಎಂದು ಅಂಕಿ ಅಂಶವೊAದು ಹೇಳುತ್ತದೆ. ಕೆಲವು ವ್ಯಕ್ತಿಗಳು ಆಯ್ಕೆಯಿಂದ ವಲಸೆ ಹೋಗುತ್ತಾರೆ ಮತ್ತು ಅನೇಕರು ಅವಶ್ಯಕತೆಯಿಂದ ವಲಸೆ ಹೋಗುತ್ತಾರೆ. ಒಟ್ಟಿನಲ್ಲಿ ಉತ್ತಮ ಆರ್ಥಿಕ ಮತ್ತು ಸಾಮಾಜಿಕ ಜೀವನಕ್ಕಾಗಿ ವಲಸೆ ಹೋಗುತ್ತಾರೆ. ಇಲ್ಲಿ ಎರಡು ವಿಧದ ವಲಸೆಯನ್ನು ಕಾಣಬಹುದು.
ಮೊದಲನೆಯದು ವಲಸೆ ಹೋದ ವ್ಯಕ್ತಿ ತಾತ್ಕಾಲಿಕವಾಗಿ ಬೇರೆಡೆ ನೆಲೆಸಿ ನಂತರ ಮರಳಿ ತನ್ನ ಸ್ವಸ್ಥಳಕ್ಕೆ ಹಿಂತಿರುಗುತ್ತಾನೆ. ಎರಡನೆಯದು ವಲಸೆ ಹೋದ ಸ್ಥಳದಲ್ಲೇ ಖಾಯಂ ನೆಲೆಸುವುದು. ಬೇರೆ ದೇಶಗಳಿಗೆ ಹೋಗಿ ಖಾಯಂ ಆಗಿ ನೆಲೆಸಿರುವ ವಲಸಿಗರು ಆ ದೇಶದ ಪೌರತ್ವವನ್ನು ಹೊಂದಲು ಆಸಕ್ತರಾಗಿರುತ್ತಾರೆ.
ವಲಸೆಗೆ ಕಾರಣಗಳು...
ಆರ್ಥಿಕವಾಗಿ ಹಿಂದುಳಿದ ಜೀವನ, ರಾಜಕೀಯ ಪ್ರಕ್ಷುಬ್ಧತೆ, ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪಗಳು, ನಿರುದ್ಯೋಗ, ಸಾಂಕ್ರಾಮಿಕ ರೋಗಗಳು ಮುಂತಾದವು ತನ್ನ ಮೂಲ ಸ್ಥಳವನ್ನು ತ್ಯಜಿಸಿ ಬೇರೆಡೆ ವಲಸೆ ಹೋಗಲು ಪ್ರೇರೇಪಿಸುವ ಅಂಶ ಒಂದೆಡೆಯಾದರೆ, ಉತ್ತಮ ಉದ್ಯೋಗಾವಕಾಶಗಳು ಮತ್ತು ಐಷಾರಾಮಿ ಜೀವನದ ಕನಸು, ಉತ್ತಮ ವೇತನದ ಆಕರ್ಷಣೆ, ಆಹ್ಲಾದಕರ ವಾತಾವರಣದಂತಹ ಕಾರಣಗಳಿಂದಾಗಿಯೂ ಮಾನವ ವಲಸೆ ಹೋಗುವಂತಹದ್ದು ಮತ್ತೊಂದು.
ಆರ್ಥಿಕವಾಗಿ ಹಿಂದುಳಿದ ವ್ಯಕ್ತಿ ತನ್ನ ಕುಟುಂಬದ ಜವಾಬ್ದಾರಿಯನ್ನು ಸುಸೂತ್ರವಾಗಿ ನೆರವೇರಿಸಿ ಜೀವನ ಮಟ್ಟವನ್ನು ಉತ್ತಮಪಡಿಸಲು ಉದ್ಯೋಗವನ್ನು ಅರಸುತ್ತ ವಲಸೆ ಹೋಗುತ್ತಾನೆ. ತನಗೆ ಆ ಪರಿಸರ ಅಥವಾ ಅಲ್ಲಿನ ಜೀವನ ಶೈಲಿ ಇಷ್ಟವಾದರೆ ಇಲ್ಲವೇ ಅಲ್ಲಿನ ವೇತನ ಆಕರ್ಷಕವಾಗಿದ್ದರೆ ಅಲ್ಲಿಯೇ ಸ್ಥಿರವಾಗಿ ನೆಲೆಸಲು ಇಚ್ಛಿಸುತ್ತಾನೆ.
ರಾಜಕೀಯ ಪ್ರಕ್ಷÄದ್ಧತೆ ಅಥವಾ ದಬ್ಬಾಳಿಕೆಯ ಪರಿಸ್ಥಿತಿಯಿಂದಲೂ ವಲಸೆ ಹೋಗುವ ಸಂದರ್ಭಗಳು ಬರುತ್ತವೆ. ಯುದ್ಧಗಳು ನಡೆಯುವ ಸಂದರ್ಭದಲ್ಲಿಯೂ ಅನೇಕರು ತಮ್ಮ ಜೀವ ರಕ್ಷಣೆಗಾಗಿ ಬೇರೆಡೆ ವಲಸೆ ಹೋಗುವುದನ್ನು ಕಾಣುತ್ತೇವೆ.
ಜರ್ಮನ್ ಆಕ್ರಮಿತ ಯುರೋಪಿನಿಂದ ತಪ್ಪಿಸಿಕೊಳ್ಳುವ ಯಹೂದಿಗಳ ವಲಸೆ, ಎರಡನೆಯ ಮಹಾಯುದ್ಧದ ನಂತರ ಪೋಲೆಂಡ್ನಿAದ ಜರ್ಮನಿಗೆ ವಲಸೆ, ಉತ್ತರ ಕೊರಿಯದವರು ಚೀನಕ್ಕೆ ಅಕ್ರಮವಾಗಿ ವಲಸೆ, ಟಿಬೆಟಿಯನ್ನರು ಭಾರತಕ್ಕೆ ವಲಸೆ ಹೀಗೆ ರಾಜಕೀಯ ಅಂಶಗಳು ವಲಸೆಗೆ ಕಾರಣವಾಗಿರುವುದು ಕಂಡುಬAದಿದೆ.
ಹವಾಮಾನ ವೈಪರೀತ್ಯದಿಂದಾಗಿ ಒದಗಿದ ವಲಸೆಗೆ ನಮ್ಮ ಕೊಡಗಿನಲ್ಲಿ ಪ್ರತಿವರ್ಷ ಆಗುವ ಅತಿವೃಷ್ಟಿ ಒಂದು ಉತ್ತಮ ಉದಾಹರಣೆಯಾಗಿದೆ. ಅದರಲ್ಲೂ ೨೦೧೮ ರ ವರ್ಷದಲ್ಲಿ ಪ್ರಕೃತಿ ವಿಕೋಪದಿಂದಾಗಿ ಆದ ನಷ್ಟ ಅಷ್ಟಿಷ್ಟಲ್ಲ. ಎಷ್ಟೋ ಜನರ ಪ್ರಾಣಹಾನಿ, ಬೆಳೆ, ತೋಟ, ಹೊಲ, ಗದ್ದೆಗಳು ನಾಶವಾಗಿ ಅದರಲ್ಲೂ ಉಳಿದ ಜನರು ತಮ್ಮ ಜೀವ ರಕ್ಷಣೆಗಾಗಿ ತಮ್ಮೆಲ್ಲ ಆಸ್ತಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ಹಾಗೂ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಹವಾಮಾನ ವಲಸೆಯ ಹಠಾತ್ ಅಥವಾ ಕ್ರಮೇಣ ಹವಾಮಾನ-ಉಲ್ಬಣಗೊಂಡ ವಿಪತ್ತುಗಳ ಪ್ರಭಾವದಿಂದ ನಡೆಸಲ್ಪಡುವ ಚಲನೆಯನ್ನು ಸೂಚಿಸುತ್ತದೆ, ಉದಾಹರಣೆಗೆ "ಅಸಹಜವಾಗಿ ಭಾರೀ ಮಳೆಗಳು, ದೀರ್ಘಕಾಲದ ಬರ ಪರಿಸ್ಥಿತಿ, ಮರುಭೂಮೀಕರಣ, ಪರಿಸರ ಅವನತಿ ಅಥವಾ ಸಮುದ್ರಮಟ್ಟದ ಏರಿಕೆ ಮತ್ತು ಚಂಡಮಾರುತಗಳು ಹೀಗೆ ಹಠಾತ್ ವಿಪತ್ತುಗಳಿಗಿಂತ ಪರಿಸರದಲ್ಲಿ ಕ್ರಮೇಣ ಬದಲಾವಣೆಗಳು ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತವೆ. ಬಹುಪಾಲು ಹವಾಮಾನ ವಲಸಿಗರು ತಮ್ಮ ದೇಶಗಳಲ್ಲಿ ಆಂತರಿಕವಾಗಿ ಚಲಿಸುತ್ತಾರೆ, ಆದರೂ ಕಡಿಮೆ ಸಂಖ್ಯೆಯ ಹವಾಮಾನ-ಸ್ಥಳಾಂತರಿತ ಜನರು ಸಹ ರಾಷ್ಟಿçÃಯ ಗಡಿಗಳನ್ನು ದಾಟುತ್ತಾರೆ.
ಹಿಂದೆ ಸಾಂಕ್ರಾಮಿಕ ರೋಗಗಳು ಹೆಚ್ಚಿದಾಗ ಇಡೀ ಊರಿಗೆ ಊರೇ ಬೇರೆಡೆ ವಲಸೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ವಲಸೆಯ ಪರಿಣಾಮಗಳ ಬಗ್ಗೆ ನೋಡುವಾಗ ವಲಸೆಯು ವಲಸಿಗರ ಜೀವನದ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳನ್ನು ಬೀರಬಹುದು.
ಧನಾತ್ಮಕ ಪರಿಣಾಮಗಳು
ನಿರುದ್ಯೋಗ ಕಡಿಮೆಯಾಗಿದೆ ಮತ್ತು ಜನರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ.
ವಲಸೆಯು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜನರ ನಡುವೆ ಸಹೋದರತ್ವವನ್ನು ಸುಧಾರಿಸಲು ಸಹಾಯ ಮಾಡುವ ಹೊಸ ಸಂಸ್ಕೃತಿ, ಪದ್ಧತಿಗಳು ಮತ್ತು ಭಾಷೆಗಳ ಬಗ್ಗೆ ಜನರು ಕಲಿಯುವುದರಿಂದ ಅವರ ಸಾಮಾಜಿಕ ಜೀವನವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ನುರಿತ ಕಾರ್ಮಿಕರ ವಲಸೆಯು ಪ್ರದೇಶದ ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ.
ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶಗಳು ದೊರೆಯುತ್ತವೆ.
ಜನಸಂಖ್ಯಾ ಸಾಂದ್ರತೆಯು ಕಡಿಮೆಯಾಗುತ್ತದೆ.
ಋಣಾತ್ಮಕ ಪರಿಣಾಮಗಳು
ಗ್ರಾಮೀಣ ಪ್ರದೇಶದಿಂದ ವಲಸೆ¬ಯ ಮೂಲಕ ಅಲ್ಲಿನ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ.
ನಗರ ಪ್ರದೇಶಗಳಲ್ಲಿ ಕಾರ್ಮಿಕರ ಒಳಹರಿವು ಹೆಚ್ಚಿ ಕೆಲಸ, ಮನೆ, ಶಾಲಾ ಸೌಲಭ್ಯಗಳು ಇತ್ಯಾದಿಗಳಿಗೆ ಸ್ಪರ್ಧೆಯನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಜನಸಂಖ್ಯೆಯು ನೈಸರ್ಗಿಕ ಸಂಪನ್ಮೂಲಗಳು, ಸೌಕರ್ಯಗಳು ಮತ್ತು ಸೇವೆಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ.
ನಗರ ಪ್ರದೇಶಗಳಲ್ಲಿ ನೈಸರ್ಗಿಕ ಪರಿಸರ ಮತ್ತು ಶುದ್ಧಗಾಳಿ ಮಾನವನ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ.
ವಲಸೆಯು ಒಂದು ಸ್ಥಳದ ಜನಸಂಖ್ಯೆಯನ್ನು ಬದಲಾಯಿಸುತ್ತದೆ.
ಅನೇಕ ವಲಸಿಗರು ಅನಕ್ಷರಸ್ಥರು ಮತ್ತು ಅವಿದ್ಯಾವಂತರಾಗಿರುತ್ತಾರೆ. ಇದರಿಂದಾಗಿ ಹೆಚ್ಚಿನ ಉದ್ಯೋಗಗಳಿಗೆ ಅನರ್ಹರು ಮಾತ್ರವಲ್ಲ, ಮೂಲಭೂತ ಜ್ಞಾನ ಮತ್ತು ಜೀವನ ಕೌಶಲ್ಯಗಳನ್ನು ಹೊಂದಿರುವುದಿಲ್ಲ.
ವಲಸೆಯು ನಗರಗಳಲ್ಲಿನ ಕೊಳಗೇರಿ ಪ್ರದೇಶಗಳನ್ನು ಹೆಚ್ಚಿಸಿವೆ. ಇದು ಅನೈರ್ಮಲ್ಯ ಪರಿಸ್ಥಿತಿಗಳು, ಅಪರಾಧ, ಮಾಲಿನ್ಯದಂತಹ ಅನೇಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಕೆಲವೊಮ್ಮೆ ವಲಸಿಗರು ಶೋಷಣೆಗೆ ಒಳಗಾಗುತ್ತಾರೆ.
ವಲಸೆಯು ವಿಭಕ್ತ ಕುಟುಂಬವನ್ನು ಹೆಚ್ಚಿಸುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ವಲಸೆಯಿAದ ಮಕ್ಕಳ ಶಿಕ್ಷಣದ ಮೇಲೆಯೂ ಪ್ರಭಾವ ಬೀರುತ್ತದೆ.
ಮಗು ಒಂದೆಡೆ ವಿದ್ಯಾಭ್ಯಾಸವನ್ನು ಪೂರೈಸಲು ಅಸಾಧ್ಯವಾಗಿದ್ದು ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳ ಸಂಖ್ಯೆಯು ಅಧಿಕವಾಗುತ್ತದೆ. ಹೀಗೇ ಪಟ್ಟಿ ಮಾಡುತ್ತಾ ಹೋದಂತೆ ವಲಸೆಯಿಂದ ಹಲವಾರು ಋಣಾತ್ಮಕ ಅಂಶಗಳು ಗೋಚರಿಸುತ್ತವೆ.
ಇಷ್ಟೆಲ್ಲ ವಿಚಾರಗಳನ್ನು ಉಲ್ಲೇಖಿಸುವಾಗ ವಲಸಿಗರ ಮೇಲೆ ಸರ್ಕಾರವು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂಬುವುದರ ಬಗ್ಗೆ ವಿಮರ್ಶೆ ಮಾಡಿಕೊಳ್ಳುವ ಅಗತ್ಯತೆ ಇದೆ.
ಹಳ್ಳಿಯಿಂದ ಪಟ್ಟಣಕ್ಕೆ ಹೋಗುವ ವಲಸಿಗರ ಸುರಕ್ಷತೆಗಾಗಿ ಎಷ್ಟು ಗಮನ ನೀಡಿದ್ದೇವೆ !ಅವರ ಜೀವನ ಕ್ರಮ, ಅವರ ಆಹಾರ-ವಿಹಾರ, ಸಂಸ್ಕೃತಿಗಳು, ಮನರಂಜನೆ ಹೇಗಿವೆ? ವೇತನಗಳು ಸರಿಯಾಗಿ ಪಾವತಿಯಾಗುತ್ತಿದೆಯಾ ? ಅವರ ಮನೆಗಳ ಪರಿಸ್ಥಿತಿ ಹೇಗಿದೆ? ಅಲ್ಲದೆ ಅವರ ಆರೋಗ್ಯ ದೃಷ್ಟಿಯಲ್ಲಿ ಎಷ್ಟರಮಟ್ಟಿಗೆ ಗಮನ ಕೊಟ್ಟಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.
ಮುಂದಿನ ದಿನಗಳಲ್ಲಿ ಇಂತಹ ವಲಸಿಗರ ಮೇಲೆ ಗಮನ ಹರಿಸಿ ಅಂತಹವರಿಗಾಗಿ ಒಳ್ಳೆಯ ಪ್ಯಾಕೇಜ್ಗಳನ್ನು ನೀಡುವಲ್ಲಿ ಸರ್ಕಾರ ಗಮನ ಹರಿಸಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
- ಮೀರ ಸುಮನ್ ಕ್ಯಾಸ್ತಲಿನ್, ಸಹಶಿಕ್ಷಕಿ, ಹಂಡ್ಲಿ ಪ್ರೌಢಶಾಲೆ.