ಐಗೂರು, ಡಿ. ೧೭: ಭಾರತೀಯ ಅಂಚೆ ಸೌಲಭ್ಯದ ಸೇವೆಯ ಐಗೂರಿನಲ್ಲಿ ಅಂಚೆ ಕಚೇರಿ ಬಂದ್ಗ್ರಾಮೀಣ ಅಂಚೆ ಕಚೇರಿಗಳ ನೌಕರರು ಮಡಿಕೇರಿಯ ಜಿಲ್ಲಾ ಅಂಚೆ ಕಚೇರಿ ಎದುರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಪ್ರತಿಭಟನೆಯಿಂದ ಐಗೂರು ಗ್ರಾಮದ ಅಂಚೆ ಕಚೇರಿಯು ಕೆಲವು ದಿನಗಳಿಂದ ಬಾಗಿಲು ಮುಚ್ಚಿದೆ. ಸಾರ್ವಜನಿಕರ ಅಂಚೆ ಬಟವಾಡೆ, ಪತ್ರ ವ್ಯವಹಾರ, ಮನಿ ಆರ್ಡರ್, ಆರ್ ಡಿ ಸೌಲಭ್ಯ, ಮತ್ತು ಬ್ಯಾಂಕ್ ಸೌಲಭ್ಯದಿಂದ ವಂಚಿತರಾಗಿದ್ದು, ಸರಕಾರ ಮಧ್ಯಪ್ರವೇಶಿಸಿ ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆAದು ಸಾರ್ವಜ ನಿಕರು ಆಗ್ರಹಿಸಿದ್ದಾರೆ.