ಕುಶಾಲನಗರ, ಡಿ. ೧೭: ಕುಶಾಲ ನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೆ ಪ್ರಯುಕ್ತ ಶನಿವಾರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಂಡಲ ಪೂಜೆ ಅಂಗವಾಗಿ ಕಳೆದ ಎರಡು ದಿನಗಳಿಂದ ದೇವಾಲ ಯದಲ್ಲಿ ವಿಶೇಷ ಸೇವೆಗಳು ನಡೆದಿದ್ದು ಶನಿವಾರ ಬೆಳಿಗ್ಗೆ ಶಾಸ್ತç ಪೂಜೆ, ಅಭಿಷೇಕ ಪೂಜೆ, ಹೋಮ ನೈವೇದ್ಯ ನಂತರ ಮಹಾಮಂಗಳಾರತಿ ನಡೆ ಯಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಪಾಲ್ಕೊಂಬು ಉತ್ಸವ, ಸಂಜೆ ಚೆಂಡೆವಾದ್ಯದೊAದಿಗೆ ಭವ್ಯ ದೀಪಾ ಲಂಕೃತ ಮಂಟಪದಲ್ಲಿ ಸ್ವಾಮಿಯ ಮೆರವಣಿಗೆ ನಡೆಯಿತು. ರಾತ್ರಿ ಭಜನಾ ಕಾರ್ಯಕ್ರಮ ನಂತರ ಬೆಳಗ್ಗಿನ ಜಾವ ಅಗ್ನಿಕೊಂಡ ಪ್ರವೇಶ ಕಾರ್ಯಕ್ರಮ ಜರುಗಿತು. ಅಯ್ಯಪ್ಪ ವ್ರತಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಗಣಪತಿ ಮತ್ತು ಆಡಳಿತ ಮಂಡಳಿ ಸದಸ್ಯರು ಇದ್ದರು.