ಭಾಗಮಂಡಲ, ಡಿ. ೧೮: ಬಸ್ಸು ತಂಗುದಾಣವೆAದರೆ ಕಸದ ರಾಶಿ, ಮುರಿದ ಶೀಟುಗಳು ಒಟ್ಟಾರೆ ಬವಣೆಯ ತಾಣ ಎಂಬ ಕಲ್ಪನೆ ನಿಮ್ಮಲ್ಲಿದ್ದರೆ ಅದಕ್ಕಿಂತ ಭಿನ್ನವಾದ ಜನಮನ ಆಕರ್ಷಿಸುವ ತಂಗುದಾಣ ಒಂದನ್ನು ಇಲ್ಲಿನ ಭಾಗಮಂಡಲ ಗ್ರಾಮ ಪಂಚಾಯಿತಿ ಅಭಿವೃದ್ಧಿಪಡಿಸಿದೆ. ಸಮೀಪದ ಕೋರಂಗಾಲದಲ್ಲಿ ಐದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ತಂಗುದಾಣ ತಾ. ೧೯ ರಂದು (ಇಂದು) ಉದ್ಘಾಟನೆಗೊಳ್ಳಲಿದೆ.

ಬಸ್ಸು ತಂಗುದಾಣದಲ್ಲಿ ಹತ್ತು ಜನ ಕೂರಬಹುದು. ಮೊದಲ ನೋಟದಲ್ಲಿ ತಂಗುದಾಣ ಆಕರ್ಷಿಸುತ್ತದೆ. ನೇಗಿಲ ಯೋಗಿ, ಬೆಳೆಯ ಸಿರಿ ಮೊಳಕೆಯಲ್ಲಿ, ಎಪಿಜೆ ಅಬ್ದುಲ್ ಕಲಾಂ, ಚಂದ್ರಯಾನದ ವಿಕ್ರಂ ಲ್ಯಾಂಡರ್ ಸೇರಿದಂತೆ ಆಕರ್ಷಕ ಚಿತ್ರಗಳೊಂದಿಗೆ ಆಕರ್ಷಿಸುತ್ತಿದೆ. ಈ ಬಸ್ಸು ತಂಗುದಾಣ ೩೨ ಅಡಿ ಉದ್ದ ೧೦ ಅಡಿ ಅಗಲವಿದೆ. ತಂಗುದಾಣಕ್ಕೆ ಹೊಂದಿಕೊAಡAತೆ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಯಾದ ವಿಶೇಷ ಬಸ್ಸು ತಂಗುದಾಣವಿದು.

ಸಮೀಪದ ಕೊರಂಗಾಲದ ವಾಜಪೇಯಿ ವಸತಿ ಶಾಲೆಯಲ್ಲಿ ೫೨೦ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ . ಈ ಶಾಲೆಗೆ ಪೋಷಕರು ಆಗಮಿಸುತ್ತಾರೆ. ವಿದ್ಯಾರ್ಥಿನಿಯರು, ಮಹಿಳೆಯರು ಶೌಚಾಲಯಕ್ಕಾಗಿ ಹಾಸ್ಟೆಲ್ ಶೌಚಾಲಯ ಬಳಕೆ ಮಾಡಬೇಕಾಗಿದೆ. ಕೆಲವೊಮ್ಮೆ ಶಾಲೆ ಒಳಗಡೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಇಂತಹ ಸಮಯದಲ್ಲಿ ಮಹಿಳೆಯರಿಗೆ ಅನುಕೂಲವಾಗುವಂತೆ ತಂಗು ದಾಣಕ್ಕೆ ಹೊಂದಿಕೊAಡAತೆ ಶೌಚಾಲಯ ನಿರ್ಮಿಸಲಾಗಿದೆ. ಇದರಲ್ಲಿ ಗಲೀಜು ಉಂಟಾಗಬಾರದು ಎಂದು ಪಾಶ್ಚಾತ್ಯ ಶೈಲಿಯ ಕಮೋಡ್ ಅಳವಡಿಸಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ.

ಸಾಮಾನ್ಯವಾಗಿ ಬಸ್ಸು ತಂಗುದಾಣಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಭಿತ್ತಿ ಪತ್ರವನ್ನು ಅಂಟಿಸಲಾಗುತ್ತದೆ. ಆದರೆ ಇಲ್ಲಿ ದೇಶದ ಸಾಧನೆಯನ್ನು ಬಿಂಬಿಸುವ ಚಿತ್ರಗಳನ್ನು ರಚಿಸಲಾಗಿದೆ. ಯಾವುದೇ ರೀತಿಯ ಭಿತ್ತಿ ಪತ್ರಗಳನ್ನು ಅಂಟಿಸಲು ಅವಕಾಶವಿಲ್ಲ ಎನ್ನುತ್ತಾರೆ ಅವರು, ಪ್ರತಿ ಗ್ರಾಮೀಣ ಭಾಗದ ರಸ್ತೆ ಅಂಚಿನಲ್ಲಿ ಜಲಜೀವನ್ ಮಷೀನ್‌ನ ವಾಟರ್ ಲೈನ್ ಹಾದುಹೋಗಿರುವುದರಿಂದ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ಸು ತಂಗುದಾಣವನ್ನು ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಂಗುದಾಣದಲ್ಲಿ ಚಿತ್ರಗಳ ರಚನೆಗೆ ಸ್ವತಹ ಖರ್ಚು ಮಾಡಿದ್ದೇನೆ. ದಾನಿಗಳು ನೆರವು ನೀಡಿದ್ದಾರೆ. ಎಲ್ಲರ ಸಹಕಾರದಿಂದ ಉತ್ತಮ ತಂಗುದಾಣ ನಿರ್ಮಾಣಗೊಂಡಿದೆ ಎಂದರು.

-ಸುನಿಲ್ ಕುಯ್ಯಮುಡಿ