ಮಡಿಕೇರಿ, ಡಿ. ೧೭ : ಒಂದು ಗಿಡನೆಟ್ಟು ಬೆಳೆಸುವದೇ ಕಷ್ಟ., ಅಂತದ್ದರಲ್ಲಿ ಬೆಳೆದುನಿಂತ ಮರಗಳನ್ನು ಕಡಿದುರುಳಿಸಿದರೆ ಮತ್ತೆ ಅಲ್ಲಿ ಮರವಾಗಲು ಇನ್ನೆಷ್ಟು ಕಾಲ ಬೇಕಾಗಬಹುದು..? ಅಭಿವೃದ್ಧಿ, ಐಷಾರಾಮಿ ಹೆಸರಲ್ಲಿ ಅಲ್ಲಲ್ಲಿ ಮರಗಳನ್ನು ನಾಶ ಮಾಡುತ್ತಿರುವದು ಕಂಡುಬರುತ್ತಿದೆ. ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳುವ ಸಂದರ್ಭ ಪರಿಸರಕ್ಕೆ ಹಾನಿಮಾಡಬಾರದು ಎಂಬ ನಿಯಮವಿದೆ. ಒಂದು ಮರ ಕಡಿದರೆ ಪರ್ಯಾಯವಾಗಿ ಮತ್ತೊಂದು ಸಸಿ ನೆಟ್ಟು ಪೋಷಿಸಬೇಕೆಂಬದಿದೆ. ಅದೆಲ್ಲವನ್ನೂ ಗಾಳಿಗೆ ತೂರಲಾಗುತ್ತಿದೆ. ಬೇರೆ ಕಡೆ ಹೋಗಲಿ ಇದೀಗ ನದಿಯನ್ನು ಸಂರಕ್ಷಿಸುತ್ತಿರುವ ನದಿ ತೀರದ ಮರಗಳನ್ನು ಕಡಿದುರುಳಿಸಲು ಮುಂದಾಗಿರುವದು ಕಂಡುಬರುತ್ತಿದೆ.

ಕಾವೇರಿ ನದಿ ಸೇರಿದಂತೆ ಹಾರಂಗಿ ಅಣೆಕಟ್ಟೆಯನ್ನು ಸೇರುವ ಉಪ ನದಿಗಳು ಹರಿಯುವ ಸ್ಥಳಗಳಲ್ಲಿ ಪ್ರವಾಹ ಉಂಟಾಗುವ ಸ್ಥಳಗಳೆಂದು ಆಯ್ಕೆ ಮಾಡಿ ಅಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಸಲುವಾಗಿ ನದಿತೀರಗಳಲ್ಲಿ ಅನಾದಿ ಕಾಲ ದಿಂದಲೂ ಬೆಳೆದುನಿಂತಿರುವ ಮರಗಳನ್ನು ಕಡಿದುರುಳಿಸುವ ಕಾರ್ಯ ನಡೆಯುತ್ತಿದೆ. ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದರಿಂದ ಮಣ್ಣು ಸವಕಳಿಯಾಗಿ ಇನ್ನಷ್ಟು ಅಪಾಯ ಎದುರಾಗಲಿದೆಯೆಂದು ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗತೊಡಗಿದೆ.

೨೦೧೮ರಲ್ಲಿ ಪ್ರಾಕೃತಿಕ ವಿಕೋಪ ಉಂಟಾದ ಸಂದರ್ಭದಲ್ಲಿ ಹಾರಂಗಿ ಹಾಗೂ ಉಪ ನದಿಗಳಲ್ಲಿ ತುಂಬಿರುವ ಹೂಳೆತ್ತಲು ಹಾಗೂ ಅವಶ್ಯವಿರುವೆಡೆಗಳಲ್ಲಿ ತಡೆಗೋಡೆ ಹಾಗೂ ಗೇಬಿಯನ್ ಗೋಡೆಗಳನ್ನು ನಿರ್ಮಾಣ ಮಾಡುವ ಸಲುವಾಗಿ ಸರಕಾರ ಕಾವೇರಿ ನೀರಾವರಿ ನಿಗಮದ ಮೂಲಕ ರೂ.೧೩೦ ಕೋಟಿ ಅನುದಾನ ಮಂಜೂರು ಮಾಡಿದೆ. ಅದರನ್ವಯ ಕಾಮಗಾರಿ ಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಈಗಾಗಲೇ ಕೆಲಸ ಪ್ರಾರಂಭವಾಗಿದೆ. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ನದಿ ತಟಗಳಲ್ಲಿನ ಮರಗಳನ್ನು ಕಡಿದು ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಯಂತ್ರಗಳನ್ನು ಬಳಸಿ ನದಿ ತಟದಲ್ಲಿ ಮಣ್ಣು ತೆರವುಗೊಳಿಸಲಾಗುತ್ತಿದೆ. ಇದು ಅವೈಜ್ಞಾನಿಕವಾಗಿದ್ದು, ಮರಕಡಿತಲೆಯಿಂದ ಮಣ್ಣಿನ ಸವಕಳಿ ಉಂಟಾಗಲಿದೆ. ಮಣ್ಣು ಸಡಿಲಗೊಂಡು ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆಯಿರುವದಾಗಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವೈಜ್ಞಾನಿಕ ಯೋಜನೆಗೆ ಅನುದಾನ

೨೦೧೮ರಲ್ಲಿ ಪ್ರಾಕೃತಿಕ ವಿಕೋಪ ಉಂಟಾದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಲ್ಲಿ ಹೂಳು ತುಂಬಿಕೊAಡಿತ್ತು. ಈ ಹೂಳೆತ್ತುವ ಕಾಮಗಾರಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಆಗಿನ ಶಾಸಕ ಅಪ್ಪಚ್ಚುರಂಜನ್ ಸರಕಾರವನ್ನು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ೨೦೧೯ರಲ್ಲಿ ಹಾರಂಗಿ ಜಲಾಶಯದ ಮಿತಿ, ತುಂಬಿರುವ ಹೂಳುಗಳ ಬಗ್ಗೆ ಸಮೀಕ್ಷೆ ನಡೆಸಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ಸಲುವಾಗಿ ವೈಜ್ಞಾನಿಕ ರೀತಿಯಲ್ಲಿ ಹೂಳೆತ್ತುವದು ಹಾಗೂ ಇತರ ಪರಿಹಾರೋಪಾಯ ಕಾಮಗಾರಿಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು. ಈ ಸಂಬAಧ ೨೦೨೦ರಲ್ಲಿ ಯೋಜನೆಯ ಕಾಮಗಾರಿಗಳಿಗಾಗಿ ರೂ.೧೩೦ ಕೋಟಿ ವಿಶೇಷ ಅನುದಾನ ಒದಗಿಸಲಾಗಿದೆ. ಇದೀಗ ಟೆಂಡರ್ ಪ್ರಕ್ರಿಯೆ ಮುಗಿದು ಮಹಾರಾಷ್ಟçದ ಗುತ್ತಿಗೆದಾರ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ.

ಕಾಮಗಾರಿಗೆ ಚಾಲನೆ

ಇದೀಗ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರ ಸಂಸ್ಥೆ ಸೊಮವಾರಪೇಟೆ ತಾಲೂಕಿನ ಮಾದಾಪುರ ಗ್ರಾಮ ಪಂಚಾಯ್ತಿಯ ಹಟ್ಟಿಹೊಳೆ ಬಳಿಯಿಂದ ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮ ಪಂಚಾಯ್ತಿಯ ತಂತಿಪಾಲದವರೆಗೆ ನದಿತಟದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಮಾರ್ಗದಲ್ಲಿ ಪ್ರವಾಹ ಉಂಟಾಗಲಿದೆ ಎಂದು ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಲ್ಲಿ ತಡೆಗೋಡೆ, ಗೇಬಿಯನ್ ಕುಶಾಲನಗರ : ಕುಶಾಲನಗರ ಕುವೆಂಪು ಬಡಾವಣೆ ಕಾವೇರಿ ನದಿ ತೀರದಲ್ಲಿ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸುತ್ತಿರುವ ಬಗ್ಗೆ ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.

ಪ್ರವಾಹ ನಿಯಂತ್ರಣ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಮೂಲಕ ಅಂದಾಜು ನಾಲ್ಕು ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಆರಂಭಗೊAಡಿದ್ದು, ನದಿ ತೀರದಲ್ಲಿರುವ ಭಾರೀ ಗಾತ್ರದ ಮರಗಳನ್ನು ಅಕ್ರಮವಾಗಿ ತೆರವುಗೊಳಿಸಲಾಗಿದೆ.

ಇದರಿಂದ ನದಿಯ ಬದಿಯ ಮಣ್ಣು ಸವೆತ ಉಂಟಾಗಲಿದೆ ಎಂದು ಸ್ಥಳೀಯ ನಿವಾಸಿಗಳಾದ ದೀಪಕ್ ಮತ್ತು ರಘು ಆರೋಪ ಮಾಡಿದ್ದಾರೆ.

ಯಂತ್ರ ಬಳಸಿ ಮಣ್ಣನ್ನು ಅಗೆದು ಸಡಿಲಗೊಳಿಸುವ ಮೂಲಕ ಮಳೆಗಾಲದಲ್ಲಿ ಅಪಾಯಕ್ಕೆ ಆಹ್ವಾನ ಮಾಡಿದಂತಾಗಿದೆ ಎಂದು ತಿಳಿಸಿರುವ ದೀಪಕ್ ಈ ಬಗ್ಗೆ ಸಂಬAಧಿಸಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.

ನದಿ ತಟದಲ್ಲಿ ಬೆಳೆಸಿರುವ ಮರ, ಗಿಡಗಳನ್ನು ಧ್ವಂಸ ಮಾಡಿರುವ ಕಾರ್ಮಿಕರು, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಕಾಮಗಾರಿ ನಡೆಸಿ ಸರ್ಕಾರದ ಹಣವನ್ನು ಪೋಲು ಮಾಡಬಾರದೆಂದು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಎನ್. ಮುರಳಿಧರ್ ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಕಡಿದುರುಳಿಸಲು ತಯಾರಿ ಕೂಡ ನಡೆದಿದೆ.

ಪರಿಸರಕ್ಕೆ ಹಾನಿ ಮಾಡಬಾರದು

ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯಾರದು ಯಾವದೇ ಅಡ್ಡಿ, ತಡೆ ಮಾಡಬಾರದು. ಆದರೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಸಂಬAಧ ಯಾವದೇ ಪರಿಸರಕ್ಕೆ ಹಾನಿ ಮಾಡಬಾರದೆಂದು ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಮರ-ಗಿಡ, ಜಲಮೂಲಗಳಿಗೆ ಯಾವದೇ ತೊಂದರೆ ಆಗಬಾರದೆಂಬ ಸ್ಪಷ್ಟ ಆದೇಶವಿದೆ. ಆದರೆ, ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರ ಸಂಸ್ಥೆಯವರು ನದಿ ತೀರದಲ್ಲಿರುವ ದೊಡ್ಡ ದೊಡ್ಡ ಮರಗಳನ್ನು ಕಡಿದುರುಳಿಸಲು ತಯಾರಿ ಮಾಡಿಕೊಂಡಿದೆ. ಈಗಾಗಲೇ ಮರಗಳನ್ನು ಕಡಿಯಲು ನಂಬರ್‌ಗಳನ್ನು ಹಾಕಿ ಅನುಮತಿಗಾಗಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ನೂರಾರು ಮರಗಳಿಗೆ ನಂಬರ್ ಹಾಕಲಾಗಿರುವದು ಕಂಡು ಬಂದಿದೆ.

ಕಡಿಯುವ ಅವಶ್ಯಕತೆ ಇಲ್ಲ

ಈ ಯೋಜನೆ ಸಾರ್ವಜನಿಕರ ಅನುಕೂಲಕ್ಕಾಗಿ ಎಂದು ಹೇಳಲಾಗುತ್ತಿದೆಯಾದರೂ ಇದಕ್ಕಾಗಿ ಮರಗಳನ್ನು ಕಡಿಯುವ ಅವಶ್ಯಕತೆ ಇಲ್ಲವೆಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ. ನದಿಯ ಅಂಚಿನಲ್ಲಿರುವ ಮರಗಳ ಬೇರುಗಳ ಹಿಡಿತದಿಂದಾಗಿ ತೀರದ ಮಣ್ಣುಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮರಗಳಿಗಿರುತ್ತವೆ. ಅದನ್ನು ಕಡಿದರೆ ಮಣ್ಣು ಸವಕಳಿಯಾಗಿ ಇನ್ನೂ ಅಪಾಯ ಸಂಭವಿಸಲಿದೆ. ಮರಗಳನ್ನು ಕಡಿಯದೆ ರಸ್ತೆ ಬದಿಯಲ್ಲಿ ತಡೆಗೋಡೆಗಳನ್ನು ನಿರ್ಮಿಸಲು ಅವಕಾಶವಿದ್ದರೂ ಮರಗಳನ್ನು ಕಡಿಯಲು ಮುಂದಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಯಾವದೇ ಮಾಹಿತಿಯಿಲ್ಲ

ಸರಕಾರದ ಯೋಜನೆಯಾದರೂ ಈ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಾಗಲೀ, ಸಾರ್ವಜನಿಕರಿಗಾಗಲೀ ಯಾವದೇ ಮಾಹಿತಿ ಇಲ್ಲ. ಯಾವ ರೀತಿಯ ಕಾಮಗಾರಿ, ಅದರ ರೂಪುರೇಷೆ ಬಗ್ಗೆ ಯಾರಿಗೂ ಗೊತ್ತಿಲ್ಲ. ದಿಢೀರನೇ ಯಂತ್ರಗಳು ಬಂದು ನದಿ ತೀರದಲ್ಲಿ ಮಣ್ಣು ಕೊರೆಯುವಾಗಲೇ ಜನರಿಗೆ ಗೊತ್ತಾಗಿದ್ದು. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯ್ತಿಯಿAದ ಕಾಮಗಾರಿ ಬಗ್ಗೆ ಮಾಹಿತಿ ನೀಡುವಂತೆ ಸಂಬAಧಿಸಿದ ನೀರಾವರಿ ನಿಗಮದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಯಾವದೇ ಪ್ರತ್ಯುತ್ತರವಿಲ್ಲ. ಮರಗಳಿಗೆ ನಂಬರ್ ಹಾಕಿರುವ ಬಗ್ಗೆ ಸ್ಥಳೀಯರು ವಿಚಾರಿಸಿದರೆ, ‘ಯಾರೂ ಏನು ಮಾಡಿದರೂ ನಾವು ಮರಗಳನ್ನು ಕಡಿಯುತ್ತೇವೆ’ ಎಂಬ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳಿಯರು ಹೇಳುತ್ತಾರೆ.

ಸೇತುವೆ ಮಾಡಲಿ

ಪ್ರವಾಹ ಬರುವೆಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾಮಗಾರಿ ಕೈಗೊಳ್ಳಲಾಗಿದೆಯಾದರೂ ಕೆಲವು ಕಡೆಗಳಲ್ಲಿ ಪ್ರವಾಹ ಬಾರದ ಸ್ಥಳಗಳಲ್ಲಿ ಕಾಮಗಾರಿಗೆ ಸಿದ್ಧತೆ ನಡೆದಿದೆ. ತಗ್ಗು ಪ್ರದೇಶದಲ್ಲಿ ಸಾಮಾನ್ಯವಾಗಿ ಪ್ರವಾಹ ಬರುತ್ತದೆಯಾದರೂ ಒಂದೆರಡು ದಿನಗಳಲ್ಲಿ ಇಳಿಯುತ್ತದೆ. ಆದರೂ ಯಾರ ಅಭಿಪ್ರಾಯ, ಮಾಹಿತಿ ಸಂಗ್ರಹಿಸದೆ ಈ ರೀತಿಯ ಅವೈಜ್ಞಾನಿಕ ಕಾಮಗಾರಿ ಆರಂಭ ಮಾಡಿರುವದು ಸಹಜವಾಗಿಯೇ ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ. ಈ ರೀತಿಯಾಗಿ ಹಣ ದುಂದುವೆಚ್ಚ ಮಾಡುವ ಬದಲಿಗೆ ಹಟ್ಟಿಹೊಳೆ ರಸ್ತೆಗೆ ಅಡ್ಡಲಾಗಿರುವ, ಮುರಿದು ತೂಗಾಡುತ್ತಿರುವ ಕಾಲುಸೇತುವೆಗಳನ್ನು ಪುನರ್ ನಿರ್ಮಾಣ ಮಾಡಲಿ ಎಂಬದು ಅವರುಗಳ ಆಗ್ರಹವಾಗಿದೆ. ಮರಗಳು ನದಿಯನ್ನು ರಕ್ಷಿಸುವ ಒಂದು ಜೀವವೆಂದೇ ಹೇಳಬಹುದು. ಆ ಜೀವವನ್ನು ತೆಗೆದರೆ ಮುಂದೊAದು ದಿನ ಬಿಸಿಲಿನ ಝಳ ಹೆಚ್ಚಾಗಿ, ನೀರು ಆವಿಯಾಗಿ ನದಿಯೇ ಬತ್ತಿಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆ ಹಲವು ನಿದರ್ಶನಗಳೂ ಇವೆ.

ಯಾವದೇ ಕಾಮಗಾರಿ ಕೈಗೊಳ್ಳಬೇಕಿದ್ದರೂ ಸ್ಥಳೀಯ ಸಂಸ್ಥೆ, ಸಾರ್ವಜನಿಕರ ಅಭಿಪ್ರಾಯ ಪಡೆದು ಪರಿಸರ, ಜನವಸತಿ ಪ್ರದೇಶಗಳಿಗೆ ಹಾನಿಯುಂಟಾಗದAತೆ ಜಾಗ್ರತೆ ವಹಿಸಬೇಕೆಂಬ ನಿಯಮ ಗುತ್ತಿಗೆ ಪಡೆದುಕೊಳ್ಳುವ ಸಂದರ್ಭ ಕರಾರಾಗಿರುತ್ತದೆ. ಆದರೆ ಇಲ್ಲಿ ಎಲ್ಲವನ್ನೂ ಉಲ್ಲಂಘನೆ ಮಾಡಿ ಕಾಮಗಾರಿ ಆರಂಭಿಸಿರುವದರ ಹಿಂದಿರುವ ಉದ್ದೇಶದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತಗೊಂಡಿದೆ. ಎಲ್ಲೆಂದರಲ್ಲಿ ಈ ರೀತಿಯ ತಡೆಗೋಡೆಗಳನ್ನು ನಿರ್ಮಾಣ ಮಾಡುತ್ತಿರುವದು ಕಂಡು ಬರುತ್ತಿದ್ದು, ‘ಕಮಿಷನ್’ ಎಂಬ ಪದ ಜನರ ಬಾಯಿಂದ ಕೇಳಿಬರುತ್ತಿದೆ..! ?-ಕುಡೆಕಲ್ ಸಂತೋಷ್