ಮಡಿಕೇರಿ, ಡಿ. ೧೬ : ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿAದ ಮಡಿಕೇರಿಯ ಆಂಜನೇಯ ದೇವಾಲಯದಲ್ಲಿ ತಾ.೧೭ ರಂದು (ಇಂದು) ಅಖಂಡ ಏಕಾಹ ಭಜನೆ ನಡೆಯಲಿದೆ. ೧೫ ತಂಡಗಳಿAದ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರ ಭಜನೆ ನಡೆಯಲಿದೆ. ಬೆಳಿಗ್ಗೆ ೬:೫೦ ಕ್ಕೆ ಕಾರ್ಯಕ್ರಮದ ಭದ್ರದೀಪ ಜ್ವಲನವನ್ನು ಮಡಿಕೇರಿ ರೋಟರಿ ಕ್ಲಬ್‌ನ ಲಲಿತ ರಾಘವನ್ ನೆರವೇರಿಸಲಿದ್ದಾರೆ. ಸಂಜೆ ೭ ಗಂಟೆಗೆ ಮಹಾಮಂಗಳಾರತಿ ಬಳಿಕ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ. ನಿವೃತ್ತ ಬ್ಯಾಂಕ್ ಅಧಿಕಾರಿ ಡಿ.ಎಚ್. ತಮ್ಮಪ್ಪ ಅವರು ಹಿತವಚನ ನೀಡಲಿದ್ದಾರೆ.

೭:೩೦ ಕ್ಕೆ ಹನುಮಾನ ಚಾಲೀಸ ಪಠಣ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.