ಹಲವು ವಿಷಯಗಳ ಬಗ್ಗೆ ಬರೆದು-ಬರೆದು ಸಾಕಾಗಿದೆ. ಆಡಳಿತದ ಗಮನಕ್ಕೆ ತಂದು ವರುಷಗಳಾಗಿವೆ.. ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಎಚ್ಚರಿಸಿ ಹೇಳಲಾಗಿದೆ... ಜಡತ್ವದ ವ್ಯವಸ್ಥೆ ಯಲ್ಲಿ ಧ್ವನಿ ಎತ್ತಿದವರ ಸ್ವರಗಳೇ ಸವಕಲಾಗುತ್ತವೆ. ತುಕ್ಕು ಹಿಡಿದ ಮೆದುಳುಗಳಿಗೆ ಕರ್ತವ್ಯ ಪ್ರಜ್ಞೆಯ ಅರಿವಾಗಲಿ, ಜನತೆಯ ತೆರಿಗೆ ಹಣಕ್ಕೆ ಇರುವ ಬೆಲೆಯಾಗಲಿ, ಸಂಬಳ ತೆಗೆದುಕೊಳ್ಳುವುದ ಕ್ಕಾದರೂ ಒದಗಿಸಬೇಕಾದ ನ್ಯಾಯದ ಬಗ್ಗೆಯಾಗಲಿ, ಕಿಂಚಿತ್ ಪಾಪ ಪ್ರಜ್ಞೆಯಾಗಲೀ ಇಲ್ಲದಿರುವದು ಅಭಿವೃದ್ಧಿಯನ್ನು ಹಿಂದಕ್ಕೆ ಒಯ್ಯುತ್ತಿದೆ.

ಜನತೆಯ ಜಡತ್ವ, ತಪ್ಪುಗಳನ್ನು ಕಂಡರೂ ಮೌನವಾಗಿರುವ ಮನಸ್ಥಿತಿ, ಪ್ರಶ್ನಿಸಿದರೂ ಫಲ ಶೂನ್ಯ ಎನ್ನುವ ನಿರಾಶಾಭಾವ, ಉಸಾಬರಿಗೆ ಬೇರೆಯವರಿದ್ದಾರೆ ಎನ್ನುವ ಬೇಜವಾಬ್ದಾರಿ, ಇವುಗಳ ನಡುವೆಯೇ ಒಗ್ಗಟ್ಟಿಲ್ಲದ ಅಸಹಾಯಕತೆ ಸಮಾಜದ ಏಳಿಗೆಗೆ ಸದಾ ಅಡ್ಡಿಯಾಗಿವೆ. ಯಾವುದೇ ಸರಕಾರಗಳು ಬಂದರೂ... ಹೋದರೂ ಇದು ಸಾಮಾನ್ಯ ಎಂಬAತಾಗಿದೆ.

ಕೊಡಗಿನಲ್ಲಿ ಅದೆಷ್ಟೋ ಯೋಜನೆಗಳು ಕಾಗದದ ದಾಖಲೆಗಳಲ್ಲಿ ಮಾತ್ರ ಕಾರ್ಯರೂಪಕ್ಕೆ ಬಂದಿವೆ; ಅದೆಷ್ಟೋ ಸರಕಾರಿ ಕಟ್ಟಡಗಳ ನಿರ್ಮಾಣ ಕಾರ್ಯ ಆರಂಭಗೊAಡು ದಶಕಗಳೇ ಕಳೆದಿವೆ. ಕೆಲವೆಡೆ ಇಲಾಖೆಗಳ ದೂರದೃಷ್ಟಿಯ ಕೊರತೆಯಿಂದ ದೂರದಲ್ಲೆಲ್ಲೋ ಕಟ್ಟಡಗಳು ಹುದುಗಿ ಹೋಗಿವೆ. ಹಲವೆಡೆ ಕಾಮಗಾರಿಗಳು ನಿಂತಿವೆ. ಇನ್ನೂ ಕೆಲವು ಜಾಗಗಳಲ್ಲಿ ಅಂದಾಜುಪಟ್ಟಿಗಿAತ ದುಪ್ಪಟ್ಟು ದರ ಏರಿಸಿ ಯರ‍್ಯಾರೋ ಆ ದರದ ಸಿಹಿಯನ್ನು ನೆಕ್ಕಿದ್ದರೂ, ಕಟ್ಟಡಗಳು ಮಾತ್ರ ಮೇಲೆ ಬಂದಿಲ್ಲ. ಎಷ್ಟೋ ವಿಭಾಗಗಳಲ್ಲಿ ರಸ್ತೆ ಕಾಮಗಾರಿಗಳು ಆರಂಭಗೊAಡು ಅರ್ಧದಲ್ಲಿ ನಿಂತಿವೆ. ಹಲವು ಯೋಜನೆಗಳನ್ನು ಕಾಗದದ ಅಡಿ ಹುದುಗಿಹಾಕಲಾಗಿದೆ. ಈ ಬಗ್ಗೆ ಸರಣಿ ಚಿತ್ರಣಗಳನ್ನು ‘‘ಶಕ್ತಿ’’ಯಲ್ಲಿ ಪ್ರಕಟಿಸುತ್ತೇವೆ.

ಜಿಲ್ಲೆಯ ವಿವಿಧೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದ ಕಟ್ಟಡಗಳು ಅಪೂರ್ಣಗೊಂಡು ನಿಂತಿದ್ದಲ್ಲಿ, ಶಾಲಾ ಕಟ್ಟಡಗಳು ಆರಂಭಗೊAಡು ಪೂರ್ಣವಾಗದಿದ್ದಲ್ಲಿ, ರಸ್ತೆಗಳಿಗೆ, ಸೇತುವೆಗಳಿಗೆ ಭೂಮಿಪೂಜೆ ಮಾಡಿ ಕಾಮಗಾರಿ ಆರಂಭವಾಗದಿದ್ದಲ್ಲಿ ಇದ್ದ ಯೋಜನೆಗಳು ದುರಸ್ತಿಗೊಂಡು ಮತ್ತೆ ಕೈಗೆತ್ತಿಕೊಳ್ಳದೆ ಇದ್ದಲ್ಲಿ ಈ ಬಗ್ಗೆ ವಿವರಗಳನ್ನು ಚಿತ್ರ ಸಹಿತ ವಾಟ್ಸಾö್ಯಪ್ ಸಂಖ್ಯೆ: ೭೪೮೩೫೬೩೭೫೬ಗೆ ಕಳುಹಿಸಿಕೊಡಿ. ಪ್ರಕಟಣೆಗಳ ಮೂಲಕ ಆಡಳಿತದ ಮತ್ತು ಜನಪ್ರತಿನಿಧಿಗಳ ಕಣ್ತೆೆರೆಸಲು ಪ್ರಯತ್ನಿಸೋಣ. -ಜಿ. ಚಿದ್ವಿಲಾಸ್, ಸಂಪಾದಕ.