ಮಡಿಕೇರಿ, ಡಿ. ೧೬: ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಹಾಗೂ ಜಾತ್ರೋತ್ಸವ ತಾ. ೨೩ ರಿಂದ ೨೯ ರವರೆಗೆ ನೆರವೇರಲಿದೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೆಮ್ಮಿಂಜೆ ಲಕ್ಷಿö್ಮÃಶ ತಂತ್ರಿ ಹಾಗೂ ಇರುವೈಲು ಕೃಷ್ಣದಾಸ್ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಲಿದ್ದು, ತಾ. ೨೩ ರಂದು ಸಂಜೆ ೫ ಗಂಟೆಗೆ ಕ್ಷೇತ್ರ ತಂತ್ರಿಗಳಿಗೆ ಪೂರ್ಣ ಕುಂಭ ಸ್ವಾಗತ, ರಾತ್ರಿ ೭ ಗಂಟೆಗೆ ಶ್ರೀ ದೇವತಾ ಪ್ರಾರ್ಥನೆ ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಪ್ರಸಾದ ಶುದ್ಧಿ ಅಂಕುರಾರೋಪಣ, ರಾಕ್ಷೆÆÃಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ೯ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಶಶಿ ಜನಾರ್ಧನ ಹೇಳಿದರು.

ತಾ ೨೪ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬಿಂಬ ಶುದ್ಧಿ ಕಲಶÀಪೂಜೆಯೊಂದಿಗೆ ವಿವಿಧ ಪೂಜೆಗಳು ನೆರವೇರಲಿದ್ದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಲಿದೆ. ರಾತ್ರಿ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ, ಪ್ರಸಾದ ವಿತರಣೆಯೊಂದಿಗೆ ಅನ್ನದಾನ ಬಳಿಕ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ೬ ಗಂಟೆಗೆ ‘ಶಕ್ತಿ’ ಉಪ ಸಂಪಾದಕ ಕುಡೆಕಲ್ ಸಂತೋಷ್ ಧಾರ್ಮಿಕ ಭಾಷಣ ಮಾಡಲಿದ್ದು, ರಾತ್ರಿ ೭ ಗಂಟೆಗೆ ಬಾಯಾರಿನ ಹಂಸಧ್ವನಿ ಮೆಲೋಡಿಸ್ ತಂಡದಿAದ ಗಾನ ವೈಭವ ರಸಮಂಜರಿ ಮೂಡಿಬರಲಿದೆ. ತಾ. ೨೫ರಂದು ಬೆಳಿಗ್ಗೆ ಮಹಾಗಣಪತಿ ಹೋಮದೊಂದಿಗೆ ವಿವಿಧ ಪೂಜೆ ಹೋಮಾಧಿಗಳು ನಡೆಯಲಿದ್ದು, ಮಧ್ಯಾಹ್ನ ಹೋಮ ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ ಮತ್ತು ಅನ್ನದಾನ ನಡೆಯಲಿದೆ. ರಾತ್ರಿ ಅಂಕುರ ಪೂಜೆ, ಕುಂಬೇಶ ಕರ್ಕರಿ ಪೂಜೆ, ಇನ್ನಿತರ ಪೂಜಾ ಕಾರ್ಯಕ್ರಮಗಳೊಂದಿಗೆ ಪ್ರಸಾದ ವಿತರಣೆ ಬಳಿಕ ರಾತ್ರಿ ೭ ಗಂಟೆಗೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಚಿಂತಕರಾದ ಚಿ.ನಾ. ಸೋಮೇಶ್ ಧಾರ್ಮಿಕ ಭಾಷಣ ಮಾಡಲಿದ್ದು, ರಾತ್ರಿ ೯ ಗಂಟೆಗೆ ಅನ್ನದಾನ ನಡೆಯ ಲಿದೆ ಎಂದು ಅವರು ಮಾಹಿತಿ ಯಿತ್ತರು.

ತಾ. ೨೬ರಂದು ಬೆಳಿಗ್ಗೆ ಅಗ್ನಿ ಜನನ ತತ್ವ ಹೋಮ ಸೇರಿದಂತೆ ವಿವಿಧ ಪೂಜೆಗಳು ನೆರವೇರಲಿವೆ. ಮಧ್ಯಾಹ್ನ ಅನುಜ್ಞಾಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ರಾತ್ರಿ ಅನುಜ್ಞಾ ಬಲಿ, ಅನುಜ್ಞಾ ಪ್ರಾರ್ಥನೆ ಇತ್ಯಾದಿ ಪೂಜೆಗಳೊಂದಿಗೆ ಪ್ರಸಾದ ವಿತರಣೆ ಬಳಿಕ ರಾತ್ರಿ ೭ ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಧಾರ್ಮಿಕ ಭಾಷಣ ಮಾಡಲಿದ್ದು, ರಾತ್ರಿ ೯ ಗಂಟೆಗೆ ಅನ್ನದಾನವಿರುತ್ತದೆ. ತಾ. ೨೭ರಂದು ಬೆಳಿಗ್ಗೆ ಸಂಹಾರ ತತ್ವ ಹೋಮ, ಶಯ್ಯಾ ಪೂಜೆ, ವಿದ್ಯೇಶ್ವರ ಕಲಶ ಪೂಜೆ ಸೇರಿದಂತೆ ವಿವಿಧ ಪೂಜೆಗಳು ನೆರವೇರಲಿವೆ. ಮಧ್ಯಾಹ್ನ ಮಹಾ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಲಿದೆ. ರಾತ್ರಿ ಧಾನ್ಯಧಿವಾಸ್, ಪೀಠಾಧಿವಾಸ್, ಹೊರಗೆ ಮಂಟಪ ಸಂಸ್ಕಾರ ಮತ್ತಿತರ ಪೂಜೆಗಳೊಂದಿಗೆ ಅನ್ನದಾನ ನಡೆಯಲಿದೆ. ರಾತ್ರಿ ೭ ಗಂಟೆಗೆ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಚಿಂತಕರಾದ ಮೊಣ್ಣಂಡ ಶೋಭಾ ಸುಬ್ಬಯ್ಯ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಬಳಿಕ ಅನ್ನದಾನ ವಿರುತ್ತದೆ. ತಾ. ೨೮ರಂದು ಬೆಳಿಗ್ಗೆ ವಿವಿಧ ಪೂಜೆಯೊಂದಿಗೆ ಬಿಂಬ ನಿದ್ರಾ ಕಲಶಗಳನ್ನು ಗರ್ಭಗೃಹದೊಳಕ್ಕೆ ಒಯ್ಯುವುದು, ಪರವಾಹನ, ಅವಸ್ಥಾವಾಹನ, ಮೂಲಾವಾಹನ. ಬೆಳಿಗ್ಗೆ ೭.೨೬ಕ್ಕೆ ಧನು ಲಗ್ನದಲ್ಲಿ ಶ್ರೀ ಮಹಾದೇವ ಮೃತ್ಯುಂಜಯ, ಮಹಾಗಣಪತಿ, ಮಹಾವಿಷ್ಣು ದೇವರ ಪ್ರತಿಷ್ಠೆ, ಪೀಠ ಪ್ರತಿಷ್ಠೆ ಮತ್ತಿತರ ಧಾರ್ಮಿಕ ಕೈಂಕರ್ಯಗಳು ನೆರವೇರ ಲಿವೆ. ಮಧ್ಯಾಹ್ನ ಮಹಾಪೂಜೆ, ಅನ್ನದಾನ. ರಾತ್ರಿ ಅಧಿವಾಸ ಪೂಜೆ, ಅಧಿವಾಸ ಬಲಿ ಮತ್ತಿತರ ಪೂಜೆಗ ಳೊಂದಿಗೆ ಅನ್ನದಾನ, ರಾತ್ರಿ ೭ ಗಂಟೆಗೆ ಸಾಹಿತಿ ನಾಗೇಶ್ ಕಾಲೂರು ಅವರಿಂದ ಧಾರ್ಮಿಕ ಭಾಷಣವಿರು ತ್ತದೆ. ತಾ. ೨೯ ರಂದು ಬೆಳಿಗ್ಗೆ ಗಣಪತಿ ಹೋಮ, ಧ್ವಜಕ್ಕೆ ಪ್ರಾಯಶ್ಚಿತ ನಾಂದೀಮುಖ, ಧ್ವಜ ಪ್ರತಿಷ್ಠೆ, ಪೀಠ ಪ್ರತಿಷ್ಠೆ ಮತ್ತಿತರ ಧಾರ್ಮಿಕ ಕೈಂಕರ್ಯಗಳೊAದಿಗೆ ಮಧ್ಯಾಹ್ನ ಮಹಾದೇವ ದೇವರಿಗೆ ಬ್ರಹ್ಮಕಲಶಾ ಭಿಷೇಕ, ಮಹಾಪೂಜೆ ಅವಸ್ರಾವ ಪ್ರೋಕ್ಷಣೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೭ ಗಂಟೆಗೆ ಮಹಾಪೂಜೆ, ದೇವರ ಬಲಿ ಹೊರಟು ‘ಶ್ರೀಭೂತಬಲಿ’ ಉತ್ಸವ ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜ ಅವರೋಹಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ೨೦೨೪ರ ಫೆ. ೧೩ರಂದು ದೃಢಕಲಶ ನೆರವೇರಲಿದೆ ಎಂದು ಶಶಿ ಜನಾರ್ಧನ್ ವಿವರಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಕಾರ್ಯ ದರ್ಶಿ ಕಳ್ಳೀರ ಗಣಪತಿ, ಕೋಶಾಧಿ ಕಾರಿ ತೋರೆರ ಪೂಣಚ್ಚ, ಪದಾಧಿಕಾರಿ ಗಳಾದ ನಂದೇಟಿರ ಗಣಪತಿ, ತೋರೆರ ಕಾರ್ಯಪ್ಪ, ಅಪ್ಪೆಯಂಡ್ರ ಮಣಿ ಮುತ್ತಪ್ಪ ಉಪಸ್ಥಿತರಿದ್ದರು.