ಮಡಿಕೇರಿ, ಡಿ. ೧೫: ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದಾರೆ. ಕುಂದ ಗ್ರಾಮದ ಕೈಮುಡಿಕೆ ಕೋಲ್ ಮಂದ್‌ನಲ್ಲಿ ನಡೆದ ಉಮ್ಮತಾಟ್ ಸ್ಪರ್ಧೆಯಲ್ಲಿ, ಕೋಲಾಟ್, ಕಪ್ಪೆಯಾಟ್ ಸ್ಪರ್ಧೆಗಳಲ್ಲಿ ವಿದ್ಯಾಸಂಸ್ಥೆಯ ಯು.ಜಿ ಮುತ್ತಮ್ಮ ತಂಡ ಪ್ರಥಮ, ಕೊಡವ ಪಾಟ್ ಸ್ಪರ್ಧೆಯಲ್ಲಿ ಹರ್ಷಿತ್ ಎಂ.ಜಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪುತ್ತರಿ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಿರಿಯರ ವಿಭಾಗದ ಉಮ್ಮತಾಟ್‌ನಲ್ಲಿ ಹರ್ಷಿತ ಯಂ.ಜಿ ತಂಡ ಪ್ರಥಮ ಸ್ಥಾನ ಗಳಿಸಿದ್ದಾರೆ. ಕೋಲಾಟ್‌ನಲ್ಲಿ ಅನಿಲ್ ತಂಡ ಪ್ರಥಮ, ಬೊಳಕಾಟ್‌ನಲ್ಲಿ ಸುನಿಲ್ ಮತ್ತು ತಂಡ ಪ್ರಥಮ ಹಾಗೂ ವಾಲಗತಾಟ್‌ನಲ್ಲಿ ಹರ್ಷಿತ ಯಂ.ಜಿ ಪ್ರಥಮ ಸ್ಥಾನ ಗಳಿಸಿದ್ದಾರೆ.