ಸೋಮವಾರಪೇಟೆ, ಡಿ. ೧೫: ಕಳೆದ ಒಂದೂವರೆ ತಿಂಗಳಿನಿAದಲೂ ಜನವಸತಿ ಪ್ರದೇಶದಲ್ಲಿ ಓಡಾಡಿಕೊಂಡಿದ್ದ ದೃಷ್ಟಿ ದೋಷ ಹೊಂದಿರುವ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ ಮರುದಿನವೇ, ನಿತ್ರಾಣಗೊಂಡ ಆನೆ ಗುಂಡಿಯಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಯಿತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಆನೆ ಕೊನೆಯುಸಿರೆಳೆದಿದೆ. ಸಜ್ಜಳ್ಳಿ ಹಾಡಿ ಸೇರಿದಂತೆ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಕಳೆದ ಒಂದೂವರೆ ತಿಂಗಳಿನಿAದ ಬೀಡು ಬಿಟ್ಟಿದ್ದ ಕಾಡಾನೆ, ಜನವಸತಿ ಹಾಗೂ ಕೃಷಿ ಪ್ರದೇಶದಲ್ಲಿ ಓಡಾಡಿಕೊಂಡಿತ್ತು.

(ಮೊದಲ ಪುಟದಿಂದ) ಮೇಲ್ನೋಟಕ್ಕೆ ದೃಷ್ಟಿ ಕಳೆದುಕೊಂಡಿರು ವಂತೆ ಕಂಡುಬAದ ಕಾಡಾನೆಯು ಈವರೆಗೆ ಯಾರಿಗೂ ತೊಂದರೆ ನೀಡಿರಲಿಲ್ಲ. ಕೆಲವೊಮ್ಮೆ ಬಿದಿರು, ಹುಲ್ಲು ತಿನ್ನುತ್ತಿದ್ದ ಆನೆಯು ರಸ್ತೆಯಲ್ಲಿಯೇ ಓಡಾಡುತ್ತಿತ್ತು.

ಇದನ್ನು ಸೆರೆಹಿಡಿದು ಶಿಬಿರಕ್ಕೆ ಸಾಗಿಸುವಂತೆ ಸ್ಥಳೀಯರು ಅನೇಕ ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ದೃಷ್ಟಿ ದೋಷ ಹೊಂದಿರುವ ಸಂಶಯ ವ್ಯಕ್ತಪಡಿಸಿ ಕೂಡಲೇ ಸೆರೆ ಹಿಡಿದು ಉಪಚರಿಸು ವಂತೆ ಒತ್ತಾಯಿಸಿದ್ದರು. ಅಂತಿಮವಾಗಿ ನಿನ್ನೆ ದಿನ ಹಾರಂಗಿ ಸಾಕಾನೆ ಶಿಬಿರದ ಮೂರು ಆನೆಗಳೊಂದಿಗೆ ಕಾರ್ಯಾ ಚರಣೆಗೆ ಅರಣ್ಯ ಇಲಾಖೆ ಮುಂದಾ ಗಿತ್ತು. ದೃಷ್ಟಿ ದೋಷ ಹೊಂದಿರುವ ಕಾಡಾನೆಯು ಹೆಣ್ಣಾನೆ ಆಗಿರುವುದ ರಿಂದ ವಿಜಯ ಹೆಸರಿನ ಹೆಣ್ಣಾನೆ ಯನ್ನು ಅದರೊಂದಿಗೆ ಬಿಡಲಾಗಿತ್ತು.

ಇಂದು ಬೆಳಿಗ್ಗೆ ಮತ್ತೆ ಈಶ್ವರ ಹಾಗೂ ಏಕದಂತ ಆನೆಯೊಂದಿಗೆ ಕಾರ್ಯಾಚರಣೆ ಆರಂಭಿಸುತ್ತಿದ್ದAತೆ ಸಜ್ಜಳ್ಳಿ ಗಿರಿಜನ ಹಾಡಿಯ ಹಿಂಭಾಗದಲ್ಲಿರುವ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಗುಂಡಿಯೊಳಗೆ ಬಿದ್ದು, ನಿತ್ರಾಣ ಸ್ಥಿತಿಯಲ್ಲಿ ಹೆಣ್ಣು ಕಾಡಾನೆ ಕಂಡುಬAದಿದೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಯನ್ನು ಉಪಚರಿಸಲು ಕ್ರಮಕೈಗೊಂಡಿದ್ದು, ಸಂಜೆಯ ವೇಳೆಗೆ ೨೦ ಬಾಟಲ್‌ಗೂ ಅಧಿಕ ಗ್ಲುಕೋಸ್ ನೀಡಿದ್ದರು. ತೀರಾ ನಿತ್ರಾಣಗೊಂಡಿರುವ ಕಾಡಾನೆಗೆ ಮೇಲೇಳಲೂ ಶಕ್ತಿಯಿಲ್ಲದಂತಾಗಿತ್ತು.

ಆನೆಯ ಒಂದು ಕಣ್ಣಿನ ಗುಡ್ಡೆಯೇ ಇಲ್ಲವಾಗಿದ್ದು, ಮತ್ತೊಂದು ಕಣ್ಣಿಗೆ ಪೊರೆ ಬಂದಿತ್ತು.

ಮೈಯಲ್ಲಿ ಗುಂಡೇಟು ತಗುಲಿರುವ ಕುರುಹುಗಳಿವೆ. ಮನೆ, ಕೃಷಿ ಜಮೀನಿಗೆ ತೆರಳಿದ ಸಂದರ್ಭ ಯಾರೋ ಆನೆಗೆ ಗುಂಡು ಹಾರಿಸಿದ್ದಾರೆ. ಇದರಲ್ಲಿ ಒಂದು ಗುಂಡು ಕಣ್ಣಿಗೆ ತಗುಲಿರುವ ಸಾಧ್ಯತೆಯಿದೆ ಎಂದು ಯಡವಾರೆ ಗ್ರಾಮದ ಕೃಷಿಕ ಮಚ್ಚಂಡ ಅಶೋಕ್ ಅವರು ಅಭಿಪ್ರಾಯಿಸಿದ್ದಾರೆ.

ದೃಷ್ಟಿಹೀನವಾಗಿರುವುದರಿಂದ ಅಗತ್ಯ ಆಹಾರವೂ ಇಲ್ಲದೇ ತೀರಾ ನಿತ್ರಾಣಗೊಂಡಿರುವ ಕಾಡಾನೆ ಗುಂಡಿಯೊಳಗೆ ಬಿದ್ದಿದೆ. ಕಳೆದ ಕೆಲ ದಿನಗಳಿಂದ ಆನೆಯ ಚಲನ ವಲನದ ಮೇಲೆ ನಿಗಾ ಇರಿಸಲಾಗಿತ್ತು. ನಿನ್ನೆಯಿಂದ ಕಾರ್ಯಾಚರಣೆ ಆರಂಭಿಸಿದ್ದು, ಕಾಡಾನೆಗೆ ಗಾಬರಿಯಾಗದಿರಲಿ ಎಂದು ಸಾಕಾನೆಯನ್ನು ಅದರೊಂದಿಗೆ ಬಿಡಲಾಗಿತ್ತು. ಕಾಡಾನೆ ಸೆರೆ ಸಂದರ್ಭ ಡಿಎಫ್‌ಓ ಭಾಸ್ಕರ್‌ರಾವ್, ಎಸಿಎಫ್ ಗೋಪಾಲ್, ಆರ್‌ಎಫ್‌ಓ ಚೇತನ್ ಅವರುಗಳಿದ್ದು, ಸಿಬ್ಬಂದಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಅರಣ್ಯ ಇಲಾಖೆ ನಿರ್ಲಕ್ಷö್ಯ ಆರೋಪ

ದೃಷ್ಟಿದೋಷ ಆನೆ ಓಡಾಟದ ಬಗ್ಗೆ ಅನೇಕ ಬಾರಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಯಾರಿಗೂ ತೊಂದರೆ ನೀಡದ ಈ ಆನೆಯನ್ನು ಸೆರೆಹಿಡಿದು ಆರೈಕೆ ಮಾಡುವ ಒತ್ತಾಯ ಕೇಳಿಬಂದಿತ್ತು. ಇಲಾಖೆಯ ನಿರ್ಲಕ್ಷö್ಯದಿಂದ ಸರಿಯಾದ ಸಮಯದಲ್ಲಿ ಸಿಗಬೇಕಾದ ಚಿಕಿತ್ಸೆ ಲಭಿಸದೆ ಆನೆ ಕೊನೆಯುಸಿರೆಳೆದಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾ. ೧೬ ರಂದು (ಇಂದು) ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.