ಗೋಣಿಕೊಪ್ಪಲು, ಡಿ. ೧೫: ದಕ್ಷಿಣ ಕೊಡಗಿನ ಇತಿಹಾಸ ಪ್ರಸಿದ್ಧವಾದ ಕಿರುಗೂರು ಗ್ರಾಮದ ಕುಟ್ಟಿಚಾತ ಚಾಮುಂಡಿ ಪುತ್ತರಿ ಕೋಲ್‌ಮಂದ್‌ನಲ್ಲಿ ಪುತ್ತರಿ ಕೋಲಾಟ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಕೊರಕುಟ್ಟಿರ, ಪೊಕ್ಕಳಿಚಂಡ, ಪಾನಿಕುಟ್ಟಿರ, ಕಾಕೇರ, ವಾಣಂಡ, ಚೂರೀರ ಹಾಗೂ ಚಾರಿಮಂಡ ಕುಟುಂಬದವರಿAದ ಆಯೋಜಿಸಲಾಗಿದ್ದ ಕಾರ್ಯಕ್ರಮವು ಮುಂಜಾನೆಯಿAದ ಸಂಜೆಯವರೆಗೂ ನಡೆಯಿತು.

ಆರಂಭದಲ್ಲಿ ಕೊರಕುಟ್ಟಿರ ಕುಟುಂಬದ ಹಿರಿಯ ಬೀಟಿವಾಡ ಕುಟ್ಟಿಚಾತ ಚಾಮುಂಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಕುಟ್ಟಿರ ರಾಜಪ್ಪ ಮುಂದಾಳತ್ವದಲ್ಲಿ ಕುಟುಂಬಸ್ಥರು ಅಂಬಲದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಲ್‌ಮಂದ್‌ನಲ್ಲಿ ಸಮಾಜ ಬಾಂಧವರು ಪುತ್ತರಿ ಕೋಲಾಟ್ ನಡೆಸಿದರು.

ಪೊಕ್ಕಳಿಚಂಡ ರಾಣಿ ಜಾನಕಿ ತಂಡದಿAದ ಸಾಂಪ್ರದಾಯಿಕ ಉಮ್ಮತ್ತಾಟ್, ಪುತ್ತರಿ ಕೋಲಾಟ್ ಪ್ರದರ್ಶನ ನೀಡಿದರು. ಪುರುಷರಿಗೆ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ ಪಂದ್ಯವನ್ನು ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಕಿರುಗೂರು ತಂಡ ಜಯ ಗಳಿಸಿತು. ಮತ್ತೂರು ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಕಿರುಗೂರು ಹಾಗೂ ಮತ್ತೂರು ತಂಡ ದ್ವಿತೀಯ ಸ್ಥಾನ ಪಡೆದವು. ಕಿರಿಯ ಮಕ್ಕಳಿಗೆ ಆಟೋಟ ಸ್ಪರ್ಧೆ ನಡೆಸಲಾಯಿತು. ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸಂಗೀತ ಕುರ್ಚಿ ಸ್ಪರ್ಧೆಯು ಆಯೋಜಿಸಲಾಗಿತ್ತು. ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.

ದವಸ ಭಂಡಾರದ ಅಧ್ಯಕ್ಷ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ನಿರ್ದೇಶಕ ಕೊರಕುಟ್ಟಿರ ಸರಚಂಗಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪ್ರತಿವರ್ಷ ಪುತ್ತರಿ ಹಬ್ಬದ ನಂತರ ಸಾಂಪ್ರದಾಯಿಕವಾಗಿ ಕಾರ್ಯಕ್ರಮವನ್ನು ಕೋಲ್‌ಮಂದ್‌ನಲ್ಲಿ ಆಯೋಜಿಸಲಾಗುತ್ತಿದೆ. ಸಂಪ್ರದಾಯ ಪದ್ಧತಿ ಪರಂಪರೆ ಉಳಿಸುವುದರೊಂದಿಗೆ ಮುಂದಿನ ಪೀಳಿಗೆಗೂ ಇದನ್ನು ತಿಳಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಸಂಸ್ಕೃತಿ, ಆಚಾರ, ವಿಚಾರ ಉಳಿಸುವ ನಿಟ್ಟಿನಲ್ಲಿ ಸಮುದಾಯ ಬಾಂಧವರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬೀಟಿವಾಡ ಕುಟ್ಟಿಚಾತ ಚಾಮುಂಡಿ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಕೊರಕುಟ್ಟಿರ ರಾಜಪ್ಪ, ಪೊಕ್ಕಳಿಚಂಡ ಪೂಣಚ್ಚ, ಪಾನಿಕುಟ್ಟಿರ ಕಾರ್ಯಪ್ಪ, ಕೊರಕುಟ್ಟಿರ ರಮೇಶ್, ಚಾರಿಮಂಡ ಕುಶಾಲಪ್ಪ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದ ಆಯೋಜಕರಾದ ಚಾರಿಮಂಡ ಧರ್ಮಜ, ಪೊಕ್ಕಳಿಚಂಡ ಪೂವಯ್ಯ, ಚಾರಿಮಂಡ ಮಧು, ಚಾರಿಮಂಡ ದಿನು ದೇವಯ್ಯ, ಕಾಕೇರ ರವಿ ಸೇರಿದಂತೆ ದಸವ ಭಂಡಾರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಜನತೆ ಪಾಲ್ಗೊಂಡಿದ್ದರು. ಮುಂಜಾನೆಯಿAದ ಸಂಜೆಯವರೆಗೂ ವಿವಿಧ ಕಾರ್ಯಕ್ರಮಗಳು ಮೂಡಿ ಬಂದವು. ವಾಲಗತ್ತಾಟ್‌ನೊಂದಿಗೆ ಕಾರ್ಯಕ್ರಮ ಮೂಡಿಬಂದವು.