ಗೋಣಿಕೊಪ್ಪಲು, ಡಿ. ೧೫: ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕದ ವತಿಯಿಂದ ಸಿರಿಧಾನ್ಯಗಳ ಮಹತ್ವದ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಉಪನ್ಯಾಸಕಿ ವಿಪ್ರಾ ನೀಲಮ್ಮ, ವಿಶ್ವ ಸಂಸ್ಥೆಯು ೨೦೨೩ ರ ವರ್ಷವನ್ನು ಅಂರ‍್ರಾಷ್ಟಿçÃಯ ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಿದೆ. ಜನರಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಿಸುವ ಮೂಲಕ ಬೆಳೆಯನ್ನು ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು ಮಕ್ಕಳು ಮತ್ತು ಯುವಕರಲ್ಲಿ ಸಿರಿಧಾನ್ಯಗಳ ಬಳಕೆಯ ವಿಶೇಷ ಅರಿವು ಮೂಡಿಸುವುದು ಮತ್ತು ರೈತರಿಗೆ ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಜನರ ಜೀವನ ಶೈಲಿ ಬದಲಾಗುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ತಿನಿಸುಗಳ ಬಗ್ಗೆ ಅರಿವಿಲ್ಲದಂತಾಗಿದೆ. ಸಿರಿಧಾನ್ಯಗಳ ಪ್ರಯೋಜನ ತಿಳಿದುಕೊಂಡರೆ ಪ್ರತಿನಿತ್ಯ ಅಡುಗೆಯಲ್ಲಿ ಇವುಗಳನ್ನು ಬಳಸಬಹುದಾಗಿದೆ. ರಾಗಿ, ಸಜ್ಜೆ, ನವಣೆ, ಬರಗು, ಸಾಮೆ, ಊದಲು, ಆರ್ಕ್, ಕೊರಲೆ ಮುಖ್ಯವಾದ ಸಿರಿಧಾನ್ಯಗಳು, ಇವು ಹೆಚ್ಚು ಪೌಷ್ಟಿಕತೆಗೆ ಹೆಸರಾಗಿವೆ. ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದ ಪ್ರೋಟೀನ್, ನಾರಿನಾಂಶ, ಬಿ ಗುಂಪಿನ ಜೀವ ಸತ್ವಗಳು, ಅಗತ್ಯ ಅಮೈನೊ ಆಮ್ಲಗಳು, ಫೋಲಿಕ್ ಆಮ್ಲ ಹಾಗೂ ಜೀವ ಸತ್ವ ‘ಇ' ಅಂಶಗಳಿAದ ಕೂಡಿದ್ದು, ಸುಮಾರು ಐದು ಸಾವಿರ ವರ್ಷಗಳ ಬೇಸಾಯದ ಇತಿಹಾಸವಿದೆ ಎಂದರು. ಸಿರಿಧಾನ್ಯಗಳು ಬೇಗ ಕೊಯ್ಲಿಗೆ ಬರುವುದರ ಜೊತೆಗೆ ಬರನಿರೋಧಕ ಗುಣಗಳನ್ನು ಹೊಂದಿದ್ದು, ಸಂದಿಗ್ಧ ಪರಿಸ್ಥಿತಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಒಂದು ಕಾಲದಲ್ಲಿ ಬಡವರ ಆಹಾರವಾಗಿದ್ದ ಈ ಆಹಾರಗಳು ಇದೀಗ ‘ಸೂಪರ್ ಫುಡ್’ ಆಹಾರವಾಗಿದೆ. ಸಿರಿಧಾನ್ಯಗಳಲ್ಲಿ ಕಬ್ಬಿಣಾಂಶ, ಮೆಗ್ನೀಷಿಯಂ, ತಾಮ್ರ, ರಂಜಕ, ಸತು, ಕ್ಯಾಲ್ಸಿಯಂ ಹಾಗೂ ಪೊಟಾಷಿಯಂ ಅಂಶಗಳು ಹೇರಳವಾಗಿವೆ. ಇವುಗಳ ಬಳಕೆ ಹೆಚ್ಚಾಗುವಂತೆ ಮಾಡಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಅವುಗಳು ಸುಲಭವಾಗಿ ಎಲ್ಲರಿಗೂ ದೊರೆಯು ವಂತೆ ಮಾಡುವ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ. ಗ್ರಾಮೀಣ ಮತ್ತು ನಗರದ ಜನರ ದಿನನಿತ್ಯ ಆಹಾರದಲ್ಲಿ ಸಿರಿಧಾನ್ಯಗಳ ಬಳಕೆಯ ಬಗ್ಗೆ ತಿಳುವಳಿಕೆ ಮೂಡಿಸುವುದು ಅವಶ್ಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶು ಪಾಲ ಡಾ. ಎಂ.ಬಿ. ಕಾವೇರಪ್ಪ, ಪ್ರೊ. ಎಸ್.ಎಸ್. ಮಾದಯ್ಯ, ಲೆಫ್ಟಿನೆಂಟ್ ಅಕ್ರಂ, ಲೆಫ್ಟಿನೆಂಟ್ ಲೇಪಾಕ್ಷಿ, ಕೆಡೆಟ್‌ಗಳು ಹಾಜರಿದ್ದು, ಸಾರ್ಜೆಂಟ್ ಮೋನಿಷಾ ಸ್ವಾಗತಿಸಿದರೆ, ಕೆಡೆಟ್ ಮನಾ ವಂದಿಸಿದರು.