ಐಗೂರು, ಡಿ. ೧೫: ಮಾದಾಪುರ ನಿರ್ಮಲ ಮಾತೆ ದೇವಾಲಯದ ಬೆಳ್ಳಿ ಮಹೋತ್ಸವ ವಿಜೃಂಭಣೆಯಿAದ ನೆರವೇರಿತು. ತಾ. ೯ ರಂದು ಧ್ವಜಾರೋಹಣವನ್ನು ಧರ್ಮಗುರುಗಳಾದ ದಾಂತಿ ಹಾಗೂ ರಾಜೇಶ್ ನೆರವೇರಿಸಿದರು. ನಂತರ ಬಲಿ ಪೂಜೆ ನಡೆಯಿತು. ತಾ. ೧೦ ರಂದು ಗುರುಗಳಾದ ಲೆಸ್ಲಿ ಮೊರಾಸ್ ಅವರೊಂದಿಗೆ ಆಗಮಿಸಿದ್ದ ವಿವಿಧ ಗುರುಗಳು ಹಬ್ಬದ ದಿವ್ಯ ಬಲಿ ಪೂಜೆ ನೆರವೇರಿಸಿದರು. ಮಾದಾಪುರದ ಮುಖ್ಯ ಬೀದಿಗಳಲ್ಲಿ ಮೈಸೂರಿನ ವಾದ್ಯಗೋಷ್ಠಿಯೊಂದಿಗೆ ಅಲಂಕೃತ ಮಂಟಪದ ಮೆರವಣಿಗೆ ನಡೆಯಿತು. ಪರಮ ಪ್ರಸಾದ ಮತ್ತು ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಈ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾದಾಪುರ, ಹಟ್ಟಿಹೊಳೆ, ಕುಂಬೂರು, ಕೂಡಿಗೆ, ಗೋಪಾಲಪುರ, ಸಿದ್ದಾಪುರ, ಹುಣಸೂರು, ಪಾಂಡವಪುರ, ಮಂಡ್ಯ, ಮೈಸೂರು, ಮಡಿಕೇರಿ ಮತ್ತು ಸೋಮವಾರಪೇಟೆ ದೇವಾಲಯಗಳ ಗುರುಗಳು ಪಾಲ್ಗೊಂಡಿದ್ದರು.