ಮಡಿಕೇರಿ ನಗರ ದಿನದಿಂದ ದಿನಕ್ಕೆ ವಾಹನ ದಟ್ಟಣೆಯ ನಗರವಾಗಿ ಬೆಳೆಯುತ್ತಿದೆ. ಸ್ಥಳೀಯರ ವಾಹನವಷ್ಟೇ ಅಲ್ಲದೆ ಪ್ರವಾಸಿಗರ ವಾಹನಗಳ ದಟ್ಟಣೆಯೂ ಹೆಚ್ಚಿದೆ. ಇದರೊಂದಿಗೆ ವೇಗಮಿತಿಯಿಲ್ಲದೇ ಸಂಚರಿಸುವ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ ಅಪಘಾತಗಳು, ಅವಘಡಗಳೂ ಹೆಚ್ಚುತ್ತಿವೆ. ಅದಕ್ಕೊಂದು ಉದಾಹರಣೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಡಿಕೇರಿ ನಗರಕ್ಕೆ ಗಾಂಭೀರ್ಯತೆಯನ್ನು, ಗೌರವವನ್ನೂ ನೀಡುತ್ತಿದ್ದ ಜನರಲ್ ತಿಮ್ಮಯ್ಯ ಅವರ ಪ್ರತಿಮೆ. ಬಸ್ನ ವೇಗಕ್ಕೆ ಸಿಲುಕಿ ನೆಲಕ್ಕುರುಳಿರುವುದು.
೧೯೭೩ ರಲ್ಲಿ ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಪ್ರತಿಷ್ಠಾಪಿಸಲ್ಪಟ್ಟಿತ್ತು. ಅಂದಿನ ಕಾಲದಲ್ಲಿ ಈಗಿನಷ್ಟು ಜನಸಂದಣಿಯಾಗಲೀ, ವಾಹನದಟ್ಟಣೆಯಾಗಲೀ ಇರಲಿಲ್ಲ. ಹಾಗಾಗಿ ಅಂದಿನ ವ್ಯವಸ್ಥೆಗೆ ತಕ್ಕನಾಗಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೆ ಇಂದು ಆ ಪರಿಸ್ಥಿತಿ ಇಲ್ಲ. ಮಡಿಕೇರಿ ನಗರ ಇಂದು ಕಿಷ್ಕಿಂಧಾ ನಗರಿಯಾಗುತ್ತಿದೆ. ಅದಕ್ಕೆ ತಕ್ಕನಾಗಿ ಬದಲಾವಣೆಯ ಅಗತ್ಯತೆಯೂ ಇದೆ.
ಮೇಲ್ನೋಟಕ್ಕೆ ಈ ಅಪಘಾತಕ್ಕೆ ಕಾರಣ ದಟ್ಟ ಮಂಜು ಎಂದು ಹೇಳಲ್ಪಟ್ಟರೂ ಬಸ್ ಚಾಲಕನ ಅಜಾಗರೂಕತೆ ಹಾಗೂ ವೇಗದ ಚಾಲನೆ ಮೂಲ ಕಾರಣ ಎಂಬುದೂ ಅಷ್ಟೇ ಸತ್ಯ ಕೂಡ. ಅಪಘಾತ ಅನಿರೀಕ್ಷಿತ ಹೌದು. ಆದದ್ದು ಆಗಿ ಹೋಗಿದೆ. ಮುಂದೇನಾಗಬೇಕೋ ಚಿಂತಿಸಬೇಕಿದೆ, ಕಾರ್ಯಗತಗೊಳಿಸಬೇಕಿದೆ.
ಮೈಸೂರು ರಸ್ತೆ ಬದಿಯಿಂದ ಬರುವ ವಾಹನಗಳು ವೇಗಮಿತಿ ಇಲ್ಲದೆ ಸಂಚರಿಸುತ್ತವೆ. ಹಾಗಾಗಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಲ್ಲಲ್ಲಿ ರಸ್ತೆ ತಡೆಗಳನ್ನು ಅಳವಡಿಸುವುದರ ಮೂಲಕ ಅವಘಡಗಳನ್ನು ತಡೆಯಬಹುದಾಗಿದೆ.
ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ಮಂಜು ಪ್ರತಿರೋಧಕ ಬೀದಿ ದೀಪಗಳನ್ನು ಅಳವಡಿಸುವ ಅಗತ್ಯತೆ ಇದೆ. ಮುಂದಾಲೋಚನೆಯ ದೃಷ್ಟಿಯಿಂದ ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ಮಡಿಕೇರಿ ನಗರ ಪೊಲೀಸ್ ಠಾಣೆವರೆಗೆ ಫ್ಲೆöÊಓವರ್ ರಸ್ತೆ ನಿರ್ಮಿಸಿ, ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆಗೂ ಫ್ಲೆöÊಓವರ್ ಸಂಪರ್ಕ ಕಲ್ಪಿಸಿದಲ್ಲಿ ಬಹಳಷ್ಟು ವಾಹನ ದಟ್ಟಣೆಯನ್ನು ನಿವಾರಿಸಬಹುದಾಗಿದೆ.
ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸಂಚಾರಿ ಪೊಲೀಸ್ ಸಿಬ್ಬಂದಿಗಳು ಹರಸಾಹಸ ಪಟ್ಟು ಹೈರಾಣಾಗುತ್ತಿರುವುದನ್ನು ಪ್ರತಿನಿತ್ಯ ನಾವುಗಳು ಗಮನಿಸುತ್ತಲೇ ಇರುತ್ತೇವೆ. ಈ ಸಂಕಷ್ಟವನ್ನು ತಪ್ಪಿಸಲು ದಿನದ ೨೪ ಗಂಟೆಗಳೂ ಕಾರ್ಯನಿರ್ವಹಣಾ ಕ್ಷಮತೆಯುಳ್ಳ ಸಿಗ್ನಲ್ ಲೈಟ್ಗಳ ಅಳವಡಿಕೆ ನಗರದ ಅಲ್ಲಲ್ಲಿ ಅನಿವಾರ್ಯವಾಗಿದೆ.
ವಾಹನ ದಟ್ಟಣೆ, ಅಪಘಾತಗಳನ್ನು ನಿಯಂತ್ರಿಸಲು ಮಡಿಕೇರಿ ನಗರದಲ್ಲಿ ಸೂಕ್ತ ವಾಹನ ನಿಲುಗಡೆ ಮತ್ತು ನಿಯಮಬದ್ಧ ವಾಹನ ನಿಲುಗಡೆಯ ಕ್ರಮವನ್ನು ಅನುಷ್ಠಾನಕ್ಕೆ ತರಬೇಕಿದೆ.
ಇನ್ನು ಬಹಳ ಮುಖ್ಯವಾಗಿ, ಹೇಗೂ ಬಸ್ನ ಕಾರಣದಿಂದಾಗಿ ಈಗಾಗಲೇ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಧರೆಗುರುಳಿದೆ. ಅದನ್ನು ಮತ್ತೆ ಅಲ್ಲಿಯೇ ಪ್ರತಿಷ್ಠಾಪಿಸಬೇಕಿದೆ. ಪ್ರತಿಷ್ಠಾಪಿಸುವ ಮುನ್ನ ಜಿಲ್ಲಾಡಳಿತ, ನಗರ ಸಭೆಯವರು, ಜನಪ್ರತಿಧಿಗಳು ಫೀಲ್ಡ್ ಮಾರ್ಷಲ್ ಕಾರ್ಯಪ್ಪ- ಜನರಲ್ ತಿಮ್ಮಯ್ಯ ಫೋರಂ, ವಿವಿಧ ಸಮಾಜ, ಸಂಘ-ಸAಸ್ಥೆ-ಸAಘಟನೆಗಳೊಡನೆ ಚರ್ಚಿಸಿ ಆ ಸ್ಥಳದಲ್ಲಿ ಭದ್ರವಾದ ತಡೆಗೋಡೆಯನ್ನು ನಿರ್ಮಿಸಿ ಸುಂದರ ಉದ್ಯಾನವನವನ್ನು ಮಾಡಿ ಅದರ ನಡುವೆ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಇರಿಸಿ ಆ ಪ್ರತಿಮೆಯ ನಾಲ್ಕೂ ಬದಿಯಿಂದಲೂ ಮಂಜು ಪ್ರತಿರೋಧಕ ದೀಪವನ್ನು ಅಳವಡಿಸಿದಲ್ಲಿ ಪ್ರತಿಮೆ ಎಷ್ಟೇ ದೂರಕ್ಕೂ ಕಾಣುವಂತಾಗುತ್ತದೆ. ಹಾಗೆಯೇ ಸೂಕ್ತ ನಿರ್ವಹಣೆಯನ್ನೂ ಮಾಡುವ ನಿಟ್ಟಿನಲ್ಲಿ ಚಿಂತಿಸಿದಲ್ಲಿ ಜನರಲ್ ತಿಮ್ಮಯ್ಯ ಅವರಿಗೂ ಗೌರವ ಸಲ್ಲಿಸಿದಂತಾಗುತ್ತದೆ ಮತ್ತು ಮಡಿಕೇರಿ ನಗರಕ್ಕೂ ಶೋಭೆ ತಂದAತಾಗುತ್ತದೆ. ಎಲ್ಲದಕ್ಕೂ ಇಚ್ಚಾಶಕ್ತಿಯ ಅವಶ್ಯಕತೆ ಪ್ರಮುಖವಾಗಿದೆ.
- ಮಾದೇಟಿರ ಬೆಳ್ಯಪ್ಪ, ಕಡಗದಾಳು.