ಮಡಿಕೇರಿ, ಡಿ. ೧೫: ವೈಲ್ಡ್ ಮಾಸ್ಟರ್ಸ್ ಕೊಡಗು ವತಿಯಿಂದ ೪ನೇ ವರ್ಷದ ಲೆದರ್ ಬಾಲ್ ಟಿ-೨೦ ಕ್ರಿಕೆಟ್ ಪ್ರೀಮಿಯರ್ ಲೀಗ್ ಜನವರಿಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ರವಿಕಿರಣ್, ಸಹ ಕಾರ್ಯದರ್ಶಿ ರಿಷಿತ್ ಮಾದಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಐಪಿಎಲ್ ಮಾದರಿಯ ಟಿ-೨೦ ಪ್ರೀಮಿಯರ್ ಲೀಗ್‌ನಲ್ಲಿ ೯ ಕ್ರೀಡಾಪಟುಗಳು ಕಡ್ಡಾಯವಾಗಿ ಜಿಲ್ಲೆಯವರಾಗಿರಬೇಕು. ಇಬ್ಬರು ರಾಜ್ಯ, ರಾಷ್ಟç ಮತ್ತು ಅಂರ‍್ರಾಷ್ಟಿçÃಯ ಮಟ್ಟದ ಆಟಗಾರರನ್ನು ಸೇರಿಸಿಕೊಳ್ಳಬಹುದಾಗಿದೆ.

ವೈಲ್ಡ್ ಮಾಸ್ಟರ್ಸ್ ಟಿ-೨೦ಯ ನಾಲ್ಕನೇ ಆವೃತ್ತಿಯಲ್ಲಿ ೮ ಫ್ರಾಂಚೈಸಿ ತಂಡಗಳು ಭಾಗವಹಿಸಲಿದ್ದು, ಈಗಾಗಲೇ ಆನ್‌ಲೈನ್‌ನಲ್ಲಿ ಪ್ಲೇಯರ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಲಾಗಿದೆ. ಆಟಗಾರರ ಹೆಸರನ್ನು ನೋಂದಾಯಿಸಿಕೊಳ್ಳಲು ತಾ. ೨೭ ಕೊನೆಯ ದಿನವಾಗಿದೆ. ತಾ. ೩೦ ರೊಳಗೆ ತಂಡಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಹೊಸದಾಗಿ ಬರುವ ಫ್ರಾಂಚೈಸಿಗಳಿಗೆ ಅವಕಾಶ ಇರುತ್ತದೆ.

ವಿಜೇತ ತಂಡಕ್ಕೆ ರೂ. ೧ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು. ದ್ವಿತೀಯ ವಿಜೇತ ತಂಡಕ್ಕೆ ರೂ. ೬೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ, ವೈಯಕ್ತಿಕ ಮ್ಯಾನ್ ಆಫ್ ದಿ ಸೀರಿಸ್, ಬೆಸ್ಟ್ ಬ್ಯಾಟ್ಸ್ಮೆನ್, ಬೆಸ್ಟ್ ಬೌಲರ್, ಬೆಸ್ಟ್ ವಿಕೆಟ್ ಕೀಪರ್, ಎಮರ್ಜಿಂಗ್ ಪ್ಲೇಯರ್ ಸೇರಿದಂತೆ ಹಲವು ಬಹುಮಾನಗಳನ್ನು ನೀಡಲಾಗುವುದು ಎಂದು ಅವರುಗಳು ಮಾಹಿತಿಯಿತ್ತರು.

ಕೊಡಗಿನಲ್ಲಿ ಲೆದರ್ ಬಾಲ್ ಪಂದ್ಯಾವಳಿಯನ್ನು ನಡೆಸಲು ಉತ್ತಮ ಮೈದಾನದ ಕೊರತೆ ಇದೆ. ಕೊಡಗಿನ ಯುವ ಪ್ರತಿಭೆಗಳಿಗೆ ಅಭ್ಯಾಸ ನಡೆಸಲು ಸುಸಜ್ಜಿತ ವ್ಯವಸ್ಥೆ ಜಿಲ್ಲೆಯಲ್ಲಿ ಇಲ್ಲದಿರುವುದು ಬೇಸರದ ಸಂಗತಿ ಎಂದ ಅವರುಗಳು ಇನ್ನಾದರೂ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಶಾಸಕರು ಈ ಬಗ್ಗೆ ಗಮನ ಹರಿಸಿ, ಉತ್ತಮ ಕ್ರೀಡಾಂಗಣವನ್ನು ಕಲ್ಪಿಸಿಕೊಡುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗಾಗಿ ೭೦೧೯೬೭೧೧೩೦, ೯೯೭೨೩೭೬೧೫೧, ೮೬೬೦೭೨೩೧೭೦ ಸಂಪರ್ಕಿಸಬಹುದೆAದರು.

ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಸುಜಿತ್ ಶೆಟ್ಟಿ, ಪ್ರಿನ್ಸ್ ಕುಶಾಲಪ್ಪ, ಕಾರ್ಯದರ್ಶಿ ಕುಟ್ಟನ ಪ್ರಶಾಂತ್, ನಿರ್ದೇಶಕ ಸಲೀಂ ಉಪಸ್ಥಿತರಿದ್ದರು.