ಹೆಚ್.ಜೆ. ರಾಕೇಶ್
ಮಡಿಕೇರಿ, ಡಿ. ೧೪: ಅಧಿಕಾರ ದುರುಪಯೋಗಿಸಿಕೊಂಡು ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದ್ದ ಅನುದಾನವನ್ನು ಸಾಮಾನ್ಯ ವರ್ಗದವರಿಗೆ ವಿನಿಯೋಗಿಸಿ ಮಾರ್ಗಸೂಚಿ ಉಲ್ಲಂಘನೆ, ಕರ್ತವ್ಯಲೋಪ ಎಸಗಿದ ಮೇರೆ ಕೆಲ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಜನಪ್ರತಿನಿಧಿಯಿಂದಲೇ ಹಣ ವಸೂಲಾತಿಗೆ ಜಿಲ್ಲಾ ಪಂಚಾಯಿತಿ ಓಂಬುಡ್ಸ್ಪರ್ಸನ್ ಎನ್.ಎಸ್. ಮಹದೇವಸ್ವಾಮಿ ಆದೇಶಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ನಿವಾಸಿ ಲಕ್ಷö್ಮಯ್ಯ ಎಂಬವರು ಈ ಸಂಬAಧ ದೂರು ದಾಖಲಿಸಿ ಗಮನ ಸೆಳೆದು ಕೆಲವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ಏನಿದು ಪ್ರಕರಣ?
೨೦೨೦-೨೧ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರಿಗೆ ಸಿಗಬೇಕಾದ ಸೌಲಭ್ಯವನ್ನು ಪರಿಶಿಷ್ಟ ಜಾತಿಗೆ ಸೇರಿಲ್ಲದ ಸಾಮಾನ್ಯ ವರ್ಗಕ್ಕೆ ಸೇರಿದ ಗ್ರಾ.ಪಂ. ಸದಸ್ಯೆ ಶೀಲಾ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅಣ್ಣಪ್ಪ ಅವರ ಹೆಸರಿನಲ್ಲಿ ಇತರ ಅಧಿಕಾರಿಗಳ ಸಹಕಾರದೊಂದಿಗೆ ತಮ್ಮ ಮನೆಗೆ ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ. ಇದು ಪರಿಶಿಷ್ಟ ವರ್ಗದವರ ಅನುದಾನದ ದುರ್ಬಳಕೆಯಾಗಿದೆ. ಕಾಂಪೌAಡ್ ನಿರ್ಮಾಣ ಮಾಡಲು ಯೋಜನೆಯ ಮಾರ್ಗಸೂಚಿಯಲ್ಲಿ ಅವಕಾಶ ಇಲ್ಲದಿದ್ದರೂ ಕಾನೂನು ಉಲ್ಲಂಘನೆ ಮಾಡಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಯೋಜನೆ ಕಾರ್ಯಗತಗೊಳಿಸಿಕೊಂಡಿ ದ್ದಾರೆ. ಜೊತೆಗೆ ತಾ.ಪಂ. ಹಾಗೂ ಜಿ.ಪಂ. ಅನುಮೋದನೆ ಪಡೆಯದೇ ಅಕ್ರಮವಾಗಿ ಸದಸ್ಯೆ ಶೀಲಾ ತಮ್ಮ ಮನೆ ಬಳಿ
(ಮೊದಲ ಪುಟದಿಂದ) ಸೋಕ್ಪಿಟ್ ನಿರ್ಮಿಸಿ ಕೊಂಡಿರುವುದರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಲಕ್ಷö್ಮಯ್ಯ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದರು.
ದೂರು ಅರ್ಜಿಯನ್ನು ಪರಿಶೀಲಿಸಿ ತಾ. ೦೪-೦೯-೨೦೨೩ರಂದು ಓಂಬುಡ್ಸ್ಪರ್ಸನ್ರವರ ಕಚೆೆÃರಿಗೆ ಕಳುಹಿಸಿ ಈ ಬಗ್ಗೆ ತನಿಖೆ ನಡೆಸಿ ವರದಿ ಕಳುಹಿಸಿಕೊಡುವಂತೆ ಸೂಚಿಸಿದ ಹಿನ್ನೆಲೆ ಸಂಬAಧಿಸಿದ ದಾಖಲೆಗಳನ್ನು ೭ ದಿನದೊಳಗೆ ನೀಡಲು ಸೂಚಿಸಲಾಗಿತ್ತು.
ದಾಖಲೆ ನೀಡುವಲ್ಲಿ ವಿಫಲ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಗದಿತ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸದ ಕಾರಣ ದೂರಿನ ಸತ್ಯಾಸತ್ಯತೆ ತಿಳಿಯುವ ಉದ್ದೇಶದಿಂದ ತಾ. ೨೧-೦೯-೨೦೨೩ರಂದು ಸೂಚನಾ ಪತ್ರವನ್ನು ಹೊರಡಿಸಿ ತಾ. ೦೫-೧೦-೨೦೨೩ರಂದು ವೀರಾಜಪೇಟೆ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು ಮತ್ತು ತಾಂತ್ರಿಕ ಸಂಯೋಜಕರೊAದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಓಂಬುಡ್ಸ್ಪರ್ಸನ್ ದೂರುದಾರರು ಮತ್ತು ಎದುರುದಾರರ ಸಮ್ಮುಖದಲ್ಲಿ ಕಡತ ಹಾಗೂ ಸ್ಥಳ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಕಾಮಗಾರಿಯು ೨೦೨೦-೨೧ನೇ ಸಾಲಿನ ನರೇಗಾ ಯೋಜನೆಯ ಆದ್ಯತೆ ಪಟ್ಟಿಯಲ್ಲಿ ಸೇರಿರುವುದಿಲ್ಲ. ವೈಯಕ್ತಿಕ ಸೌಲಭ್ಯದಡಿಯಲ್ಲಿ ತಡೆಗೋಡೆÉ ನಿರ್ಮಿಸಲು ಆದ್ಯತಾ ಪಟ್ಟಿಯಲ್ಲಿ ಅವಕಾಶ ಇರುವುದಿಲ್ಲ. ಆದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜನ್ ಸಿ. ರವರು ಹೆಚ್ಚುವರಿ ಕ್ರಿಯಾ ಯೋಜನೆಯನ್ನು ತಯಾರಿಸಿ ಸಹಾಯಕ ನಿರ್ದೇಶಕರಿಂದ ಅನುಮೋದನೆ ಪಡೆದು ಕಾಮಗಾರಿಯನ್ನು ಅನುಷ್ಠಾನಗೊಳಿಸಿರುತ್ತಾರೆ. ಯೋಜನೆಯಡಿ ಅವಕಾಶವಿರದ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಖರ್ಚಾಗಿರುವ ಹಣ ರೂ. ೯೫,೪೦೨ ಹಾಗೂ ಕಾಮಗಾರಿ ಸ್ಥಳದಲ್ಲಿ ನಾಮಫಲಕ ಹಾಕದಿರುವುದಕ್ಕೆ ೨ ಕಾಮಗಾರಿಗಳಿಗೆ ರೂ. ೧೦ ಸಾವಿರ ಹಾಗೂ ನಿಯಮದಂತೆ ಕಡತದಲ್ಲಿ ಚೆಕ್ ಲಿಸ್ಟ್ ಹಾಕದೆ ಅಸಮರ್ಪಕ ಕಡತ ನಿರ್ವಹಣೆಗಾಗಿ ತಲಾ ರೂ. ೧೦೦೦ ದಂತೆ ಒಟ್ಟು ರೂ. ೬ ಸಾವಿರ ಸೇರಿದಂತೆ ಒಟ್ಟು ರೂ. ೧,೧೧,೪೦೨ ಗಳನ್ನು ವಸೂಲಿ ಮಾಡಿ ಸಂಬAಧಪಟ್ಟ ಲೆಕ್ಕ ಶೀರ್ಷಿಕೆಗೆ ಜವಾಬ್ದಾರರು ಜಮಾ ಮಾಡಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.