ಸುಮಾರು ಆರು ಶತಮಾನಗಳ ಸುದೀರ್ಘವಾದ ಮತ್ತು ಅಮೂಲ್ಯವಾದ ಇತಿಹಾಸವನ್ನು ಹೊಂದಿರುವ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ವಿಶಿಷ್ಟ ಹಾಗೂ ಅನನ್ಯವಾದುದು. ಆಧುನಿಕತೆಯ ಸ್ಪರ್ಶದಿಂದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ತೊಂದರೆಯಾಗುವುದನ್ನು ಮನಗಂಡು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆರಾಧಕರ ಪ್ರಯತ್ನದ ಫಲವಾಗಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಅಂದಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೊಡಗಿನ ಅಳಿಯ ದೇವರಗುಂಡ ಸದಾನಂದಗೌಡ ಮತ್ತು ಕರ್ನಾಟಕ ರಾಜ್ಯದ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದ ಕೊಡಗಿನ ಕೊಂಬಾರನ ಬೋಪಯ್ಯನವರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಕೊಡಗಿನ ಮಡಿಕೇರಿ ಕೇಂದ್ರವಾಗಿಟ್ಟುಕೊAಡು ಡಿಸೆಂಬರ್ ೧೫, ೨೦೧೧ರಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯನ್ನು ಪ್ರಾರಂಭಿಸಿತು. ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅಧಿಕೃತವಾಗಿ ಘೋಷಣೆಯಾದ ಆ ದಿನವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅರೆಭಾಷೆ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಆದ್ದರಿಂದ ಪ್ರತಿ ವರ್ಷ ಡಿಸೆಂಬರ್ ೧೫ನ್ನು ಅರೆಭಾಷೆ ದಿನವನ್ನಾಗಿ ಆಚರಿಸಲಾಗುತ್ತಿದೆ.

ಸಾಹಿತ್ಯ ಮತ್ತು ಸಂಸ್ಕೃತಿ ಮನುಷ್ಯನ ಜೀವನದ ಒಂದು ಅವಿಭಾಜ್ಯ ಅಂಗ. ಸಂಸ್ಕೃತಿ ಎಂದರೆ ಬದುಕುವ ಕ್ರಮ. ಯಾವುದೇ ಭಾಷೆಯನ್ನು ಮಾತನಾಡುವ ಮತ್ತು ಸಂಸ್ಕೃತಿಯನ್ನು ಆರಾಧಿಸುವವರ ಆಚರಣೆ, ವಿಚಾರ, ಸಂಪ್ರದಾಯ, ನೀತಿ, ನಿಯಮ, ಕಟ್ಟು ಕಟ್ಟಲೆಗಳು, ಊಟ ಉಪಚಾರ ಮೊದಲಾದವುಗಳು ಅವರ ಸಂಸ್ಕೃತಿಯ ದ್ಯೋತಕವಾಗಿರುತ್ತದೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅರೆಭಾಷಿಗರ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸುವ, ಬೆಳೆಸುವ ಉದ್ದೇಶವನ್ನು ಹೊಂದಿದೆ. ಇಲ್ಲಿ ಸಂಸ್ಕೃತಿ ಎಂಬುದು ಅರೆಭಾಷೆ ಸಮುದಾಯಕ್ಕೆ ಸೀಮಿತವಾಗಿದೆ. ಸಾಹಿತ್ಯ ಎಂಬುದು ಎಲ್ಲಾ ಸಾಹಿತ್ಯ ಪ್ರೇಮಿಗಳಿಗೆ ಸೇರಿದೆ. ಅರೆಭಾಷೆ ಸಾಹಿತ್ಯ ಎಂಬುದು ಕೇವಲ ಅರೆಭಾಷಿಗರ ಆಸ್ತಿಯಲ್ಲ. ಹಾಗಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಬಹಳ ವಿಶಾಲವಾದ ಆಶಯಗಳನ್ನು ಇಟ್ಟುಕೊಂಡಿದೆ.

ಅರೆಭಾಷೆ ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಆಸುಪಾಸಿನಲ್ಲಿ ವಾಸಿಸುವ ಗೌಡ ಸಮುದಾಯದವರ ಮಾತೃಭಾಷೆ. ಈ ಪ್ರದೇಶದಲ್ಲಿ ಕೇವಲ ಗೌಡ ಸಮುದಾಯದವರು ಮಾತ್ರ ಅಲ್ಲ. ಉಳಿದ ಸಮುದಾಯದವರೂ ಕೂಡ ಅರೆಭಾಷೆಯನ್ನು ಬಹಳ ಸ್ಪಷ್ಟವಾಗಿ ಮಾತನಾಡುತ್ತಿದ್ದಾರೆ. ಹಾಗಾಗಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸುವುದು ತುಂಬಾ ಅಗತ್ಯವಾಗಿದೆ.

ಅರೆಭಾಷಿಗರು ಗೌಡ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಗೌಡ ಎಂದರೆ ಭೂಮಿಯ ಒಡೆಯ, ನೇಗಿಲ ಯೋಗಿ, ಊರಿನ ಮುಖ್ಯಸ್ಥ ಹೀಗೆ ಹಲವಾರು ಅರ್ಥಗಳಿವೆ. ಗೌಡ ಸಂಸ್ಕೃತಿ ಒಂದು ಸ್ಥಳದ ಸಂಸ್ಕೃತಿ ಅಲ್ಲ. ಇದು ಹಲವಾರು ಸ್ಥಳಗಳ, ಜನರ, ಸಂಸ್ಕೃತಿಯ ಸಂಗಮ.

ಕುಲದೇವ ತಿರುಪತೀಶ

ಗೌಡ ಜನಾಂಗದವರು ತಿರುಪತಿ ವೆಂಕಟರಮಣ ಸ್ವಾಮಿಯ ಭಕ್ತರು. ವೆಂಕಟರಮಣ ಸ್ವಾಮಿ ಗೌಡ ಜನಾಂಗದವರ ಕುಲದೇವರು. ವೆಂಕಟರಮಣ ಸ್ವಾಮಿಯ ಹರಿಸೇವೆಯನ್ನು ಎಲ್ಲಾ ಗೌಡ ಕುಟುಂಬದವರು ಆಚರಿಸಿಕೊಡು ಬರುತ್ತಿದ್ದಾರೆ. ಅಲ್ಲದೆ ಕೆಲವೊಂದು ಗೌಡ ಕುಟುಂಬದವರು ಅಜ್ಜಪ್ಪ ದೇವರನ್ನು, ದುರ್ಗಿಯನ್ನು, ಸಬ್ಬಮ್ಮ ದೇವರನ್ನು ಸಹ ಆರಾಧಿಸುವುದನ್ನು ಕಾಣುತ್ತಿದ್ದೇವೆ.

ಗೌಡ ಜನಾಂಗದವರ ಅಸ್ತಿತ್ವ ವಿಜಯನಗರ ಅರಸ ಕೃಷ್ಣ ದೇವರಾಯರ ಕಾಲದಲ್ಲಿ ಇತ್ತು ಎಂಬುದು ಇತಿಹಾಸದಲ್ಲಿ ತಿಳಿಯುತ್ತದೆ. ೧೫೬೫ರ ತಾಳಿಕೋಟೆ ಅಥವಾ ರಕ್ಕಸತಂಗಡಿ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾದ ಮೇಲೆ ಮುಸ್ಲಿಮರ ಆಳ್ವಿಕೆ ಪ್ರಾರಂಭವಾದ ನಂತರ ಅವರ ಆಳ್ವಿಕೆ ಇಷ್ಟವಾಗದೆ ಇಕ್ಕೇರಿ ಸಂಸ್ಥಾನಕ್ಕೆ ಬಂದು ನೆಲೆಸಿದರು ಎಂದು ತಿಳಿದು ಬರುತ್ತದೆ. ಇಕ್ಕೇರಿಯ ನಾಯಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾರಂಭದ ಅರಸರಾದ ಮೇಲೆ ಇವರು ಇಕ್ಕೇರಿ ಸಂಸ್ಥಾನದ ಐಗೂರು ಸೀಮೆಯಿಂದ ಗೌಡ ಜನಾಂಗದವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಟ್ಟದ ಸರಹದ್ದು ಪ್ರದೇಶಕ್ಕೆ ತಂದು ಅಲ್ಲಿ ಭೂಮಿಯನ್ನು ನೀಡಿ ನೆಲೆನಿಲ್ಲಿಸಿದರು ಎಂಬುದಾಗಿ ಇತಿಹಾಸದಿಂದ ತಿಳಿದು ಬರುತ್ತದೆ. ಹೀಗೆ ಇಕ್ಕೇರಿಯ ನಾಯಕರ ಪ್ರೋತ್ಸಾಹದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆನಿಂತು ಕೃಷಿಯನ್ನು ಪ್ರಾರಂಭಿಸಿದರು.

ಟಿಪ್ಪು - ಮತಾಂತರ

ಹದಿನೆAಟನೆ ಶತಮಾನದ ಕೊನೆ ಮತ್ತು ಹತ್ತೊಂಬತ್ತನೆ ಶತಮಾನದ ಪ್ರಾರಂಭದಲ್ಲಿ ಕೊಡಗಿನ ಹಾಲೇರಿ ರಾಜ ದೊಡ್ಡ ವೀರರಾಜೇಂದ್ರನ ಪ್ರೋತ್ಸಾಹದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಗೌಡ ಜನಾಂಗದವರು ಕೊಡಗಿಗೆ ಬಂದು ನೆಲೆಸಲು ಪ್ರಾರಂಭಿಸಿದರು. ಟಿಪ್ಪು ಸುಲ್ತಾನನು ಕೊಡಗನ್ನು ವಶಪಡಿಸಿಕೊಂಡ ನಂತರ ಟಿಪ್ಪುವಿನ ಆಳ್ವಿಕೆಯನ್ನು ವಿರೋಧಿಸಿ ಅನೇಕ ಬಾರಿ ಕೊಡಗಿನವರು ದಂಗೆಯೆದ್ದರು. ಇದರಿಂದ ಕೊಡಗಿನ ಜನತೆಯ ಮೇಲೆ ಕೋಪಗೊಂಡ ಟಿಪ್ಪು ಸುಲ್ತಾನನು ತಾನೇ ೧೭೮೫ರಲ್ಲಿ ಕೊಡಗಿಗೆ ಸೇನೆಯನ್ನು ತೆಗೆದುಕೊಂಡು ಬಂದು, ಕೊಡಗಿನ ಜನರೆಲ್ಲರನ್ನು ಬಲಾತ್ಕಾರದಿಂದ ಸೆರೆಹಿಡಿದು ಭಾಗಮಂಡಲದ ದೇವಟ್‌ಪರಂಬುವಿನಲ್ಲಿ ಸೇರಿಸಿ ಸುಮಾರು ೮೦,೦೦೦ ಜನರನ್ನು ಶ್ರೀರಂಗಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವುದಾಗಿ ಟಿಪ್ಪು ಸುಲ್ತಾನನ ಚರಿತ್ರೆಕಾರ ಮೀರ್ ಹುಸೇನ್ ಆಲಿ ಕಿರ್ಮಾನಿ ತನ್ನ ಪುಸ್ತಕದಲ್ಲಿ ಬರೆದಿರುವನು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೊಡಗಿನವರನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಿರುವುದರಿಂದ ಇಲ್ಲಿ ವ್ಯವಸಾಯ ಮಾಡುವವರಿಲ್ಲದೆ ಕೃಷಿ ಭೂಮಿ ಪಾಳುಬಿದ್ದವು. ೧೭೯೨ರಲ್ಲಿ ಅಮರ ಸುಳ್ಯ ಮಾಗಣೆಗಳು ವೀರರಾಜೇಂದ್ರರ ವಶಕ್ಕೆ ಬಂದ ನಂತರ ಅಮರ ಸುಳ್ಯದ ಗೌಡ ಜನಾಂಗದವರನ್ನು ಕೊಡಗಿಗೆ ಕರೆತಂದು ಪಾಳುಬಿದ್ದ ಭೂಮಿಗಳಲ್ಲಿ ನೆಲೆಸುವಂತೆ ಪ್ರೋತ್ಸಾಹಿಸಿದರು. ಹೀಗೆ ಬಂದವರಿಗೆ ದೊಡ್ಡವೀರರಾಜೇಂದ್ರ ಒಡೆಯರು ಜಮ್ಮಾ ಮತ್ತು ಉಂಬಳಿಯಾಗಿ ಭೂಮಿಯನ್ನು ಕೊಟ್ಟರು. ಕೊಡಗಿನಲ್ಲಿ ಗೌಡ ಜನರು ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊAಡಿರುವ ಭಾಗಮಂಡಲನಾಡು, ನಾಪೋಕ್ಲು ನಾಡು, ಮಡಿಕೇರಿ ನಾಡುಗಳಲ್ಲಿ ಹೆಚ್ಚಾಗಿ ಬಂದು ನೆಲೆಸಿರುವುದನ್ನು ಕಾಣಬಹುದು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಹೆಚ್ಚಿನ ಜನರು ತೊಡಿಕಾನ, ಪಟ್ಟಿ ಮಾರ್ಗವಾಗಿ ಭಾಗಮಂಡಲ ಮತ್ತು ನಾಪೋಕ್ಲು ನಾಡುಗಳಲ್ಲಿ ನೆಲೆಸಿದರು. ಸಂಪಾಜೆ ಮಾರ್ಗವಾಗಿ ಬಂದ ಜನರು ಮಡಿಕೇರಿ ನಾಡಲ್ಲಿ ನೆಲೆಸಿದರು. ಸುಬ್ರಹ್ಮಣ್ಯ, ಕಡಮಕಲ್ಲು ಮಾರ್ಗವಾಗಿ ಬಂದ ಜನರು ಗಾಳಿಬೀಡು ಮತ್ತು ಮಡಿಕೇರಿ ನಾಡುಗಳಲ್ಲಿ ನೆಲೆಸಿದರು. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಡಗಿಗೆ ಬಂದು ನೆಲೆಸಿದ ಗೌಡ ಜನಾಂಗದವರಿಗೆ ಅವರು ನೆಲೆನಿಂತ ಭೂಮಿಯನ್ನು ಉಂಬಳಿಯಾಗಿ ಅಥವಾ ಜಮ್ಮಾವಾಗಿ ನೀಡಿರುವುದು ಇತಿಹಾಸದಿಂದ ತಿಳಿದುಬರುತ್ತದೆ. ಹೀಗೆ ದಕ್ಷಿಣ ಕನ್ನಡದಿಂದ ಕೊಡಗಿಗೆ ಬಂದ ಗೌಡ ಜನಾಂಗದವರು ಇಂದು ವಿಶ್ವದ ಎಲ್ಲಾ ಭಾಗಗಳಲ್ಲಿ ನೆಲೆ ನಿಂತಿರುವುದನ್ನು ಕಾಣುತ್ತಿದ್ದೇವೆ.

ಶೃಂಗೇರಿ ಜಗದ್ಗುರು ಹದಿನೆಂಟು ಗೋತ್ರ

ಗೌಡ ಜನಾಂಗದವರು ಹತ್ತು ಕುಟುಂಬ ಹದಿನೆಂಟು ಗೋತ್ರಕ್ಕೆ ಸೇರಿದವರು. ಗೌಡ ಜನಾಂಗದವರ ಕುಲಗುರು ಶೃಂಗೇರಿ ಜಗದ್ಗುರುಗಳು. ಹಿಂದಿನ ಕಾಲದಿಂದಲೇ ಶೃಂಗೇರಿ ಮಠದ ಗುರುಗಳಿಗೆ ಕಾಣಿಕೆ ನೀಡಿ ಗುರುಗಳಿಂದ ಆಶೀರ್ವಾದ ಪಡೆಯುವ ಕ್ರಮವಿತ್ತು. ಇಂದು ಸಹ ವಿವಾಹ ಸಂದರ್ಭದಲ್ಲಿ ತೆರ ಎಂದು ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ ರೂ.೪.೫೦ ನ್ನು ಹೆಣ್ಣಿನ ಮುತ್ತೆöÊದೆ ತನಕ್ಕೆ ಶೃಂಗೇರಿ ಮಠಕ್ಕೆ ತಲುಪಿಸಬೇಕೆಂದು ಕೊಡುವ ಕ್ರಮವಿದೆ.

ಭತ್ತದ ಕೃಷಿ ಗೌಡ ಜನಾಂಗದವರ ಮುಖ್ಯ ಕಸುಬು. ಆದರೆ ಇಂದು ಗೌಡ ಜನಾಂಗದವರು ಭತ್ತದ ಕೃಷಿ ಮಾತ್ರವಲ್ಲದೆ ಕಾಫಿ, ಏಲಕ್ಕಿ, ಕರಿಮೆಣಸು, ತೆಂಗು, ಅಡಿಕೆ, ಗೇರು, ರಬ್ಬರ್ ಮುಂತಾದ ಕೃಷಿಯಲ್ಲಿ ಹಾಗೂ ಹಲವು ರೀತಿಯ ವಾಣಿಜ್ಯ ವ್ಯವಹಾರದಲ್ಲಿ ತೊಡಗಿರುವುದನ್ನು ಕಾಣಬಹುದು. ಗೌಡ ಜನಾಂಗದವರು ಮೂಲತಃ ಸಾಧು ಸ್ವಭಾವದವರು, ಸ್ವಾತಂತ್ರö್ಯ ಅಭಿಮಾನಿಗಳು. ಇವರ ಆಚಾರ ವಿಚಾರಗಳು ವಿಶಿಷ್ಟವಾಗಿದೆ.

ಭಾಷೆ ಮನುಷ್ಯ ಜೀವನದ ಅವಿಭಾಜ್ಯ ಅಂಗ. ಭಾಷೆಯಿಂದಾಗಿ ನಾವು ಪ್ರಾಣಿಗಳಿಗಿಂತ ವಿಭಿನ್ನ ಮತ್ತು ಶ್ರೇಷ್ಠರು. ನಮ್ಮ ವಿಭಿನ್ನವಾದ ಸಂಸ್ಕೃತಿಯನ್ನು ಬಿಂಬಿಸಲು ಭಾಷೆ ಬೇಕು. ಗೌಡ ಜನರ ಭಾಷೆ ಕನ್ನಡ ಭಾಷೆಗಿಂತ ವಿಶಿಷ್ಟವಾದದು. ಇದನ್ನು ಅರೆಭಾಷೆ, ಅರೆಬಾಸೆ, ಗೌಡಭಾಷೆ, ಗೌಡ ಕನ್ನಡ, ಅರೆಕನ್ನಡ ಹೀಗೆ ಬೇರೆ ಬೇರೆ ರೀತಿಯಲ್ಲಿ ಸಂಬೋಧಿಸ ಲಾಗುತ್ತಿದೆ. ಅರೆಭಾಷೆಯ ಬಗ್ಗೆ ದಿವಂಗತ ಪ್ರೊ. ಕೋಡಿ ಕುಶಾಲಪ್ಪಗೌಡರವರು ವೈಜ್ಞಾನಿಕವಾಗಿ ಅಧ್ಯಯನ ಮಾಡಿರುವರು. ಇವರು ಅರೆಭಾಷೆಯನ್ನು ಗೌಡ ಕನ್ನಡ ಎಂದು ಕರೆದಿದ್ದಾರೆ. ಕೊಳಂಬೆ ಪುಟ್ಟಣ್ಣಗೌಡ, ಡಾ. ಪುರುಷೋತ್ತಮ ಬಿಳಿಮಲೆ, ಬಾರಿಯಂಡ ಜೋಯಪ್ಪ, ಕೋರನ ಡಾ ಸರಸ್ವತಿ ಪ್ರಕಾಶ್, ಡಾ. ವಿಶ್ವನಾಥ ಬದಿಕಾನ, ಬೈತಡ್ಕ ಜಾನಕಿ ಬೆಳ್ಯಪ್ಪ ಹೀಗೆ ಹಲವಾರು ವಿದ್ವಾಂಸರು ಅರೆಭಾಷೆ ಸಾಹಿತ್ಯದ ಬೆಳವಣೆಗೆಯಲ್ಲಿ ಪ್ರಮುಖ ಪಾತ್ರವಹಿಸಿರುವರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮೂಲಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ನಾಟಕ, ಯಕ್ಷಗಾನ, ಚಿತ್ರಕಲೆ, ನೃತ್ಯ. ಬರವಣೆಗೆ ಹೀಗೆ ಹಲವಾರು ಪ್ರಾಕಾರಗಳಲ್ಲಿ ಅಮೋಘವಾದ ಬೆಳವಣಿಗೆ ಯಾಗಿರುವುದನ್ನು ಕಾಣಬಹುದಾಗಿದೆ. ಅರೆಭಾಷೆಯ ಸಾಹಿತ್ಯ ಪರಿಪಕ್ವತೆಯನ್ನು ಪಡೆಯಲು ಸಾಹಿತ್ಯ ಕೃಷಿ ಸಾಕಷ್ಟು ಆಗಬೇಕಾಗಿದೆ. ಭಾಷೆ ಉಳಿಯಬೇಕಾದರೆ ಭಾಷೆಯ ಬಳಕೆ ಜಾಸ್ತಿಯಾಗಬೇಕು. ಅರೆಭಾಷೆ ಜನಾಂಗದವರ ಸಂಸ್ಕೃತಿಯು ಅನನ್ಯವಾದದು. ಅರೆಭಾಷಿಗರ ಉಡುಗೆ ತೊಡುಗೆ ಹುಟ್ಟಿನಿಂದ ಸಾವಿನವರೆಗಿನ ಆಚರಣೆಗಳು ಅರೆಭಾಷಿಕರ ಸಂಸ್ಕೃತಿಯ ದ್ಯೋತಕವಾಗಿದೆ. ಅದಕ್ಕಾಗಿ ಅರೆಭಾಷೆಯ ದಿನವಾದ ಇಂದು ಅಮೂಲ್ಯವಾದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸೋಣ ಎಂಬ ಧೃಡ ಸಂಕಲ್ಪವನ್ನು ಮಾಡೋಣ.

-ಡಾ ದಯಾನಂದ.ಕೆ.ಸಿ

ಪ್ರಾAಶುಪಾಲರು, ಸರ್ಕಾರಿ ಪ್ರಥಮ

ದರ್ಜೆ ಕಾಲೇಜು, ವೀರಾಜಪೇಟೆ.

ಮೊಬೈಲ್ ಸಂಖ್ಯೆ: ೯೪೪೯೭೬೬೭೭೨