ಶನಿವಾರಸAತೆ, ಡಿ. ೧೪: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಆಯುಷ್ಮಾನ್ ಭವ ಅಭಿಯಾನದಡಿ ತಜ್ಞ ವೈದ್ಯರುಗಳಿಂದ ೨ನೇ ಉಚಿತ ಆರೋಗ್ಯ ತಪಾಸಣಾ ಬೃಹತ್ ಮೇಳವನ್ನು ಆಯೋಜಿಸಲಾಗಿತ್ತು.

ಆರೋಗ್ಯ ಕೇಂದ್ರದ ಸಭಾಂಗಣ ದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉಚಿತ ಆರೋಗ್ಯ ತಪಾಸಣಾ ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾ ಶಸ್ತç ಚಿಕಿತ್ಸಕ ತಜ್ಞ ಡಾ. ನಂಜುAಡಪ್ಪ ಮಾತನಾಡಿ, ಜನಸಾಮಾನ್ಯರಿಗೂ ಉತ್ತಮ ಆರೋಗ್ಯ ಸೇವೆ ದೊರೆಯಬೇಕು. ಸಮುದಾಯದ ಸರ್ವರಿಗೂ ಹಾಗೂ ವಿಶೇಷ ಚೇತನರಿಗೂ ಆರೋಗ್ಯ ಸೇವೆ ಸೌಲಭ್ಯಗಳು ಒಂದೇ ಸೂರಿನಡಿ ದೊರೆಯಬೇಕು ಎಂಬ ಸದುದ್ದೇಶ ದಿಂದ ‘ಆಯುಷ್ಮಾನ್ ಭವ’ ಅಭಿಯಾನದಡಿ ಉಚಿತ ಆರೋಗ್ಯ ತಪಾಸಣಾ ಬೃಹತ್ ಮೇಳವನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಜನರು ತಜ್ಞ ವೈದ್ಯರ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಾ ಉತ್ತಮವಾಗಿ ಸ್ಪಂದಿಸುತ್ತಿರುವುದರಿAದ ಆರೋಗ್ಯ ಮೇಳ ಸಂಪೂರ್ಣ ಯಶಸ್ವಿಯಾಗುತ್ತಿದೆ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ-ಬೋಧಕ ಆಸ್ಪತ್ರೆಯ ತಜ್ಞ ವೈದ್ಯರ ತಂಡದವರು ೨೫೦ಕ್ಕೂ ಅಧಿಕ ಮಂದಿಯನ್ನು ತಪಾಸಣೆ ಮಾಡಿ ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡಿದರು. ಶಸ್ತç ಚಿಕಿತ್ಸೆ ಅಗತ್ಯವಿದ್ದವರಿಗೆ ಜಿಲ್ಲಾ ಆಸ್ಪತ್ರೆಗೆ ಬರುವಂತೆ ಸೂಚಿಸಲಾಯಿತು.

ಮುಖ್ಯವಾಗಿ ವಿಶೇಷಚೇತನ ಪ್ರಮಾಣಪತ್ರ ಹಾಗೂ ಆರೋಗ್ಯ ಕಾರ್ಡ್ ನೋಂದಣಿ ವ್ಯವಸ್ಥೆಗೆ ಆದ್ಯತೆ ನೀಡಿದ್ದು, ೨೨ ಮಂದಿ ವಿಶೇಷ ಚೇತನರಿಗೆ ಸ್ಥಳದಲ್ಲೇ ಪ್ರಮಾಣ ಪತ್ರ ವಿತರಿಸಲಾಯಿತು. ಸರಿಯಾದ ಮಾಹಿತಿ ಇಲ್ಲದೆ ಪರದಾಡುತ್ತಿದ್ದ ವಿಶೇಷಚೇತನರಿಗೆ ಈ ಆರೋಗ್ಯ ಮೇಳ ವರದಾನವಾಯಿತು. ಅಂಗಾAಗ ದಾನಕ್ಕೂ ನೋಂದಣಿ ಪ್ರಕ್ರಿಯೆ ನಡೆದು ಆಶಾ ಕಾರ್ಯಕರ್ತೆ ಯರು ಸೇರಿದಂತೆ ೨೫ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿ ಸಿದ್ದಾರೆ. ತಜ್ಞ ವೈದ್ಯರ ತಂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಮೇಳದಲ್ಲಿ ಆಯುಷ್ಮಾನ್ ಭವ ಆರೋಗ್ಯ ಮೇಳದ ನೋಡೆಲ್ ಅಧಿಕಾರಿ ಡಾ. ರಾಮಚಂದ್ರ ಕಾಮತ್, ಜಿಲ್ಲಾ ಶಸ್ತç ಚಿಕಿತ್ಸಕ ಡಾ. ನಂಜುAಡಪ್ಪ, ಸಾಮಾನ್ಯ ವೈದ್ಯ ಶಾಸ್ತç ವಿಭಾಗ ಮುಖ್ಯಸ್ಥ ಡಾ. ಲೋಕೇಶ್, ಮಕ್ಕಳ ತಜ್ಞ ಡಾ. ರವಿಚಂದ್ರ, ಚರ್ಮರೋಗ ವಿಭಾಗ ಮುಖ್ಯಸ್ಥ ಡಾ. ಹರ್ಷವರ್ಧನ್, ಕಿವಿ-ಮೂಗು-ಗಂಟಲು ತಜ್ಞ ಡಾ. ಪೃಥ್ವಿ, ಸಾಮಾನ್ಯ ಶಸ್ತç ಚಿಕಿತ್ಸಕ ಡಾ. ಚಿರಂತ್, ಮೂಳೆ ಮತ್ತು ಕೀಲು ತಜ್ಞ ಡಾ. ಬಿಂದುಸಾರ, ಮಹಿಳಾ ವೈದ್ಯಾಧಿಕಾರಿ ಡಾ. ದಿವ್ಯಜ್ಯೋತಿ, ಪ್ರಸೂತಿ ಸ್ತಿçà ರೋಗ ತಜ್ಞೆ ಡಾ. ಜ್ಯೋತ್ಸಾ, ಶ್ವಾಸಕೋಶ ತಜ್ಞ ಡಾ. ಅಮಿತಾ, ತಾಲೂಕು ವೈದ್ಯಾಧಿಕಾರಿ ಡಾ. ಇಂದೂಧರ್, ಡಾ. ಅಶೋಕ್ ಕುಮಾರ್, ಡಾ. ಬಿಪಿನ್, ಡಾ. ರಕ್ಷಿತ್, ಡಾ. ಲೋಕೇಶ್ವರ್, ಡಾ. ಮಹೇಶ್, ರೋಗಿಗಳ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡಿ, ಔಷಧಿಯನ್ನು ವಿತರಿಸಿ ಸೇವೆ ಸಲ್ಲಿಸಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ, ಕ್ಲಿನಿಕಲ್ ಸೈಕಾಲಾಜಿಸ್ಟ್ ರಮೇಶ್, ಆರೋಗ್ಯ ನಿರೀಕ್ಷಾಣಾಧಿಕಾರಿ ಮಹೇಶ್, ಲ್ಯಾಬ್ ಟೆಕ್ನಿಷಿಯನ್ ರಶೀದ್, ಶೂಶ್ರುಷಾ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮೇಳದಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಿದರು.