ಐಗೂರು, ಡಿ. ೧೪: ಶಾಲಾ ಮಕ್ಕಳಿಗೆ ಓದುಬರಹದ ಜೊತೆಗೆ ಹೊರ ಜಗತ್ತಿನ ಅರಿವು ಮೂಡಿಸುವ ಸಲುವಾಗಿ ಕಾಜೂರು ಶಾಲಾ ವತಿಯಿಂದ ಎರಡು ದಿನಗಳ ಕಾಲ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರವಾಸಕ್ಕೆ ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಅಧ್ಯಾಪಕ ವೃಂದದವರು ಚಾಲನೆ ನೀಡಿದರು. ಮಂಗಳೂರು, ಉಡುಪಿ ಮತ್ತು ಮುರುಡೇಶ್ವರ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಆಯ್ಕೆಯ ಸ್ಥಳಗಳಾದ ಪಿಲಿಕುಳ ನಿಸರ್ಗಧಾಮ, ವಿಜ್ಞಾನ ವಸ್ತು ಪ್ರದರ್ಶನ, ಸ್ವಾಮಿ ವಿವೇಕಾನಂದ ತಾರಾಲಯ, ಮಣಿ ಪಾಲದ ಮ್ಯೂಸಿಯಂ, ಸಂತಮೇರಿ ದ್ವೀಪ, ಮಲ್ಪೆ ಮತ್ತು ಮುರುಡೇಶ್ವರದ ಕಡಲತೀರ, ಐತಿಹಾಸಿಕ ದೇವಾಲಯ ಗಳನ್ನು ಮಕ್ಕಳು ವೀಕ್ಷಿಸಿದರು.