ಮಡಿಕೇರ, ಡಿ. ೧೩: ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ (ಎಸಿಪಿಸಿಎಸ್)ವನ್ನು ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಂಬAಧಿಸಿದ ಅಧಿಕಾರಿ ಗಳಿಗೆ ರಾಜ್ಯ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಅವರು ಸೂಚನೆ ನೀಡಿದ್ದಾರೆ.
ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಅಧಿಕಾರಿಗಳೊಂದಿಗೆ ಈ ವಿಚಾರದ ಕುರಿತು ಸಮಾಲೋಚನಾ ಸಭೆ ನಡೆಸಿದರು. ಈ ಸಂಘವನ್ನು ಸಮಾಪನಗೊಳಿಸುವಂತೆ ಈ ಹಿಂದೆ ನೀಡಿರುವ ಆದೇಶವನ್ನು ರದ್ದುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವುದು ಸೇರಿದಂತೆ ಸಂಘವನ್ನು ಈ ಹಿಂದಿನAತೆ ರೈತ ಸದಸ್ಯರಿಗೆ ವಾಪಾಸ್ಸು ನೀಡುವಂತೆ ಕಳೆದ ಹಲವು ಸಮಯಗಳಿಂದ ಒತ್ತಡ ಹೇರಲಾಗುತ್ತಿದೆ.
ಮೈಸೂರುವಿನ ಕೆ.ಆರ್.ಎಸ್. ರಸ್ತೆಯ ಯಾದಗಿರಿ ಬಳಿ ಈ ಸಂಘಕ್ಕೆ ಕೋಟ್ಯಂತರ ಮೌಲ್ಯದ ಆಸ್ತಿಯಿದೆ. ೧೧೩೪ ಸದಸ್ಯರನ್ನು ಈ ಸಂಘ ಹೊಂದಿದ್ದು, ಕಾರಣಾಂತರಗಳಿAದ ಇದನ್ನು ಸಮಾಪನಗೊಳಿಸುವಂತೆ ೧೯೯೯ರಲ್ಲಿ
(ಮೊದಲ ಪುಟದಿಂದ) ಸಹಕಾರ ಇಲಾಖೆ ಮೂಲಕ ಆದೇಶ ಹೊರಡಿಸಲಾಗಿತ್ತು. ಅಲ್ಲದೆ ಸಂಘದ ಆಸ್ತಿಯಲ್ಲಿ ಕೆಲ ಭಾಗವನ್ನು ಮಾರಾಟವೂ ಮಾಡಲಾಗಿತ್ತು. ಅಲ್ಲದೆ ಎಲ್ಲಾ ಚಟುವಟಿಕೆಗಳು ಸ್ತಬ್ದಗೊಂಡಿದ್ದವು.
ಇದೀಗ ಕೆಲವು ವರ್ಷಗಳ ಹಿಂದೆ ಇತ್ತೀಚೆಗೆ ನಿಧನರಾದ ಅಮ್ಮತ್ತಿಯ ಮೂಕೋಂಡ ಬೋಸ್ ದೇವಯ್ಯ ಅವರ ಸಂಚಾಲಕತ್ವದಲ್ಲಿ ಹೋರಾಟ ಸಮಿತಿಯೊಂದನ್ನು ರಚಿಸಿ ಈ ಕಾಫಿ ಸಂಸ್ಕರಣಾ ಘಟಕದ ಉಳಿದ ಆಸ್ತಿಯ ರಕ್ಷಣೆಯೊಂದಿಗೆ ಸಂಘವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಾಗಿತ್ತು. ಕೆಲವು ವಿಚಾರದ ಬಗ್ಗೆ ನ್ಯಾಯಾಲಯ ದಿಂದಲೂ ತಡೆಯಾಜ್ಞೆ ತರಲಾಗಿತ್ತಲ್ಲದೆ ಇದರ ಪ್ರಕರಣವೂ ಮುಂದುವರಿ ಯುತ್ತಿದೆ. ಇದೀಗ ಶಾಸಕ ಪೊನ್ನಣ್ಣ ಅವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿತ್ತಲ್ಲದೆ, ಸ್ವತಃ ವಕೀಲರೂ ಆಗಿರುವ ಅವರ ಸಹಕಾರವನ್ನು ಈ ನಿಟ್ಟಿನಲ್ಲಿ ಬಯಸಲಾಗಿತ್ತು.
ಇದರಂತೆ ಇದೀಗ ಅವರ ಆಸಕ್ತಿಯಂತೆ ಕಾಫಿ ಸಂಸ್ಕರಣಾ ಸಹಕಾರ ಸಂಘ (ಎಂಸಿಪಿಸಿಎಸ್)ನ ಪುನಶ್ಚೇತನದ ನಿಟ್ಟಿನಲ್ಲಿ ಈ ಸಭೆಯನ್ನು ಕರೆದು ಸಮಾಲೋಚನೆ ನಡೆಸಲಾಗಿದೆ. ಸಂಬAಧಿಸಿದ ಅಧಿಕಾರಿಗಳು ಪ್ರಮುಖರೊಂದಿಗೆ ಸಹಕಾರ ಸಚಿವರು ಹಾಗೂ ಶಾಸಕ ಪೊನ್ನಣ್ಣ ಅವರು ಚರ್ಚೆ ನಡೆಸಿದ್ದು, ಸಂಘದ ಪುನಶ್ಚೇತನದ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಪೊನ್ನಣ್ಣ ಹಾಗೂ ಸಹಕಾರ ಸಚಿವ ರಾಜಣ್ಣ ಅವರ ಈ ಪ್ರಯತ್ನದ ಬಗ್ಗೆ ಕಾಫಿ ಸಂಸ್ಕರಣಾ ಸಹಕಾರ ಸಂಘದ ಸದಸ್ಯರು ಶ್ಪಾಘನೆ ವ್ಯಕ್ತಪಡಿಸಿದ್ದಾರೆ. ಈ ಸಂಘ ಪುನಶ್ಚೇತನಗೊಂಡು ಮತ್ತೆ ಕಾರ್ಯಚಟುವಟಿಕೆಗೆ ಇಳಿದಲ್ಲಿ ಸದಸ್ಯರಿಗೆ ಹೆಚ್ಚು ಪ್ರಯೋಜನಕಾರಿ ಯಾಗಲಿದೆ ಎಂದು ಸಂಘದ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಕೋಲತಂಡ ಎ. ಸುಬ್ರಮಣಿ ಅವರು ಹೇಳಿದ್ದಾರೆ.