ಮಡಿಕೇರಿ, ಡಿ. ೧೩: ಕೊಡವ ಹಾಗೂ ಗೌಡ ಜನಾಂಗಗಳ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಂದ್ ಹಾಗೂ ಸುಗ್ಗಿ ಕಟ್ಟೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವಂತೆ ವಿಧಾನ ಪರಿಷತ್ತು ಸದಸ್ಯೆ ಡಾ. ತೇಜಸ್ವಿನಿ ಗೌಡ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶದಲ್ಲಿ ಒತ್ತಾಯಿಸಿದ್ದಾರೆ.
ಕೊಡವರು ಆಚರಿಸುವ ಪುತ್ತರಿ, ಕೈಲ್ಪೋಳ್ದ್, ಸಂಕ್ರಮಣ ಸಮಯದಲ್ಲಿ ಮಂದ್ಗಳಲ್ಲಿ ಹಾಡಿ ನರ್ತಿಸುತ್ತಾರೆ. ಅದೇ ರೀತಿ ಜಿಲ್ಲೆಯಲ್ಲಿ ನೆಲೆಸಿರುವ ಗೌಡ ಸಮಾಜ ಕೂಡ ಸುಗ್ಗಿಕಟ್ಟೆ ಎಂಬ ಸಾಂಸ್ಕೃತಿಕ-ಧಾರ್ಮಿಕ ಬಯಲು ಆಲಯಗಳಲ್ಲಿ ಹಲವು ವರ್ಷಗಳಿಂದ ಆಚರಣೆ ಗಳನ್ನು ನಡೆಸುತ್ತಿದ್ದಾರೆ. ರಾಜರ ಕಾಲದಿಂದಲೂ
(ಮೊದಲ ಪುಟದಿಂದ) ಸುರಕ್ಷಿತವಾಗಿದ್ದ ಮಂದ್ ಹಾಗೂ ಸುಗ್ಗಿಕಟ್ಟೆಗಳಿಗೆ ಆವರಣ ಗೋಡೆ, ಶಿಲ್ಪಕಲಾ ಪ್ರವೇಶದ್ವಾರ ನಿರ್ಮಿಸುವ ಜೊತೆಗೆ ಅಲ್ಲಿ ಸೇರುವ ಜನರಿಗೆ ಉಪಯೋಗವಾಗುವ ಶೌಚಾಲಯ, ನೆರಳಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಸಾಂಸ್ಕೃತಿಕ ಭವನ ನಿರ್ಮಾಣವಾಗಬೇಕು ಎಂದು ತಿಳಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್ ತಂಗಡಗಿ, ಮಂದ್ ಹಾಗೂ ಸುಗ್ಗಿಕಟ್ಟೆಯ ಜವಾಬ್ದಾರಿಯನ್ನು ಆಯಾ ಊರಿಗೆ ಸಂಬAಧಿಸಿದ ದೇವಾಲಯ ಸಮಿತಿ ನಿರ್ವಹಿಸುತ್ತಿದೆ. ಇಲ್ಲಿ ಅಗತ್ಯ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಪ್ರಸ್ತಾವನೆಯನ್ನು ಪಡೆದು ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.