ಕರಿಕೆ, ಡಿ. ೧೩: ಕರ್ನಾಟಕ ಸರಕಾರ ವಿಶೇಷ ಕಾರ್ಯಕ್ರಮ ೨೦೨೩-೨೪ನೇ ಸಾಲಿನ ಚಿಣ್ಣರ ವನದರ್ಶನ ನಾಗರ ಹೊಳೆ, ಹಾರಂಗಿ ಹಿನ್ನೀರು, ಸಾಕಾನೆ ಶಿಬಿರ, ಕೋಟೆ, ರಾಜಾಸೀಟ್ ಭೇಟಿ ಕಾರ್ಯಕ್ರಮ ಸಂಪಾಜೆ ಪ್ರಾದೇಶಿಕ ವಲಯ ಹಾಗೂ ತಲಕಾವೇರಿ ವನ್ಯಜೀವಿ ವಲಯದಿಂದ ಪ್ರತ್ಯೇಕವಾಗಿ ನಡೆಯಿತು.
ವಲಯದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೆರಾಜೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪೆರಾಜೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಾಜೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಪೆರಾಜೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೆಚೂರ್ ಪೆರಾಜೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಡಿ ಪೆರಾಜೆ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಸಂಪಾಜೆ ವಲಯ ಅರಣ್ಯಾಧಿಕಾರಿಗಳಾದ ಡೆನ್ಸಿ ದೇಚಮ್ಮ ರವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ವಿಜೇಂದ್ರ ಕುಮಾರ್ ಎಂ. ಗಸ್ತು ಅರಣ್ಯ ಪಾಲಕರಾದ ಜನಾರ್ಧನ. ಪುನೀತ್, ನಾಗರಾಜ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ತಲಕಾವೇರಿ ವನ್ಯಜೀವಿ ವಲಯ ಹಾಗೂ ಅಭಯಾರಣ್ಯ ವಲಯದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು, ಅಂಬೇಡ್ಕರ್ ವಸತಿ ಶಾಲೆ ಭಾಗಮಂಡಲ ಇಲ್ಲಿನ ವಿದ್ಯಾರ್ಥಿಗಳನ್ನು ಕಾವೇರಿ ನಿಸರ್ಗ ಧಾಮ, ಹಾರಂಗಿ ಹಿನ್ನೀರು, ಸಾಕಾನೆ ಶಿಬಿರ, ಆನೆಕಾಡು ನಾಟ ಸಂಗ್ರಹಾಲಯ, ಮಡಿಕೇರಿ ಸಸ್ಯ ಕ್ಷೇತ್ರಕ್ಕೆ ಕೆರೆಸಿಕೊಂಡು ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸಿದರು. ಶಾಲಾ ಅಧ್ಯಾಪಕರೊಂದಿಗೆ ಅರಣ್ಯ ಅಧಿಕಾರಿ ಕೊಟ್ರೇಶ್ ಕೆ.ನೇತೃತ್ವದಲ್ಲಿ ಬೀಟ್ ಉಪ ವಲಯ ಅರಣ್ಯ ಅಧಿಕಾರಿ ಸತೀಶ್, ಸಿಬ್ಬಂದಿಗಳಾದ ಜೀವನ್, ಧನಂಜಯ, ಕಿರಣ, ರಾಜೇಶ್, ಚಾಲಕ ಲಕ್ಷಿö್ಮÃಶ ಪಾಲ್ಗೊಂಡಿದ್ದರು.