ಭಾವೈಕ್ಯತೆಗೆ ನಾಂದಿ ಹಾಡಿದ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ಹಾಗೂ ಪರಿವಾರ ದೇವರ ದೇವಾಲಯಗಳು
ವಿಶೇಷ ಲೇಖನ
ಶನಿವಾರಸಂತೆ, ಡಿ. ೧೩: ಪಟ್ಟಣ ಪ್ರವೇಶಿಸುತ್ತಿದ್ದಂತೆ ಮೊದಲಿಗೆ ಕಾಣ ಸಿಗುವ ದೇವಾಲಯ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಾಲಯ ಭಕ್ತಿಭಾವ ಮೂಡಿಸಿ ಸ್ವಾಗತಿಸು ವಂತಿದೆ. ೫ ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡ ದೇವಾಲಯ ಭಾವೈಕ್ಯತೆಗೆ ನಾಂದಿ ಹಾಡಿದೆ. ನಿತ್ಯ ಪೂಜೆ, ಅಮಾವ್ಯಾಸೆ ಪೂಜೆ, ಹಬ್ಬ ಹರಿದಿನಗಳ ವಿಶೇಷ ಪೂಜೆ ಹಾಗೂ ವಾರ್ಷಿಕೋತ್ಸವ ಪೂಜೆಯ ಆಚರಣೆಯೊಂದಿಗೆ ಸರ್ವಧರ್ಮ ಸಮನ್ವಯವನ್ನು ಸಾರುತ್ತಾ ಪ್ರಖ್ಯಾತಗೊಳ್ಳುತ್ತಿದೆ.
ಈ ದೇವಾಲಯಕ್ಕೆ ಕೇವಲ ಹಿಂದೂ ಧರ್ಮದವರು ಮಾತ್ರವಲ್ಲ; ಮುಸ್ಲಿಂ, ಕ್ರೈಸ್ತ ಧರ್ಮದವರು ಆಗಮಿಸಿ ಪೂಜಾ ಕೈಂಕರ್ಯ, ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾ ಸಾಮರಸ್ಯ ಬೆಸೆಯುತ್ತಾ ಕೊಡಗು ಜಿಲ್ಲೆಯಲ್ಲೆ ಮಾದರಿ ದೇವಾಲಯ ಎನಿಸುತ್ತಿದೆ. ದೇವಾಲಯ ಸೇವಾ ಸಮಿತಿಯಲ್ಲಿ ಸುತ್ತಮುತ್ತಲಿನ ವಿವಿಧ ಜಾತಿ ಜನಾಂಗ, ಧರ್ಮ, ಸಮುದಾಯದ ಪ್ರತಿನಿಧಿಗಳಿದ್ದಾರೆ.
ಕೊಡಗು-ಹಾಸನ ಜಿಲ್ಲೆಗಳ ಗಡಿಭಾಗ ಸೋಮವಾರಪೇಟೆ-ಅರಕಲಗೂಡು ಮುಖ್ಯರಸ್ತೆಗೆ ಹೊಂದಿಕೊAಡAತೆ ಶನಿವಾರಸಂತೆ ಪಟ್ಟಣವಿದೆ. ಪಟ್ಟಣದ ಮುಖ್ಯರಸ್ತೆಯ ಒಂದನೇ ವಿಭಾಗದ ಪ್ರಶಾಂತ ವಾತಾ ವರಣದಲ್ಲೇ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಾಲಯವಿದೆ. ಪಟ್ಟಣ ವ್ಯಾಪ್ತಿಯ ಸುತ್ತಮುತ್ತ ಎಂಟಕ್ಕೂ ಅಧಿಕ ಹಳ್ಳಿಗಳು ಸೇರ್ಪಡೆಗೊಳ್ಳುತ್ತವೆ. ವಿವಿಧ ಜಾತಿ ಜನಾಂಗದವರು ನೆಲೆಸಿದ್ದಾರೆ. ವೀರಶೈವ ಲಿಂಗಾಯತ, ಒಕ್ಕಲಿಗ, ಗೌಡ ಜನಾಂಗ, ಕುರುಹಿನಶೆಟ್ಟಿ, ತುಳು, ಮಲೆಯಾಳ, ತಮಿಳು, ತೆಲಗು ಭಾಷಿಗರು, ಕೊಡವರು, ಮುಸ್ಲಿಂ, ಕ್ರೆöÊಸ್ತ ಧರ್ಮದವರು ಒಂದಾಗಿ ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ.
ಇತಿಹಾಸ: ದೇವಾಲಯಕ್ಕೆ ೪೦೦ ವರ್ಷಗಳ ಇತಿಹಾಸವಿದೆ. ಜಿಲ್ಲೆಯಲ್ಲಿ ಲಿಂಗಾಯತ ರಾಜರ ಆಳ್ವಿಕೆಯ ಪರಿಣಾಮ ಎಲ್ಲೆಡೆ ವಿವಿಧ ಹೆಸರುಗಳಿಂದ, ಹಲವು ರೂಪಗಳಲ್ಲಿ ಲಿಂಗರೂಪದ ಶಿವಾರಾಧನೆ ನಡೆಯುತ್ತಿದೆ.
ಶನಿವಾರಸಂತೆಯಲ್ಲಿ ಬೀರಲಿಂಗೇಶ್ವರ ಅವತಾರದಲ್ಲಿ ಪೂಜಿಸಲಾಗುತ್ತಿದೆ.ಹಿಂದೆ ಪಟ್ಟಣದ ಒಂದನೇ ವಿಭಾಗದಲ್ಲಿ ಪುಟ್ಟ ಗುಡ್ಡದ ಮೇಲೆ ಕಲ್ಲಿನ ಶಿಲೆಗಳಿದ್ದು ಗ್ರಾಮಸ್ಥರಿಂದ ಪೂಜಿಸಲ್ಪಡುತ್ತಿತ್ತು. ತೆರೆದ ಪ್ರಾಂಗಣ, ಸುತ್ತ ಮಣ್ಣಿನ ಗೋಡೆಗಳಿಂದ ನಿರ್ಮಾಣವಾಗಿದ್ದ ದೇವಾಲಯ ಕ್ರಮೇಣ ಶಿಥಿಲವಸ್ಥೆ ತಲುಪಿತ್ತು. ಪೂಜೆಯೂ ಕ್ರಮಬದ್ಧವಾಗಿ ನಡೆಯುತ್ತಿರಲಿಲ್ಲ. ಗ್ರಾಮದಲ್ಲಿ ಸಾವು-ನೋವು ಹೆಚ್ಚಾಯಿತು. ಹೆಚ್ಚಾಗಿ ಯುವಕರೇ ಆತ್ಮಹತ್ಯೆಗೆ ಶರಣಾಗುತ್ತಿದ್ದರು ಅಪಘಾತಕ್ಕೀಡಾಗುತ್ತಿದ್ದರು. ಗ್ರಾಮದಲ್ಲಿ ಶಾಂತಿ-ನೆಮ್ಮದಿ ಇಲ್ಲವಾಯಿತು. ಒಂದೆಡೆ ಕುಸಿಯ ಲಾರಂಭಿಸಿದ ದೇವಾಲಯ ಮತ್ತೊಂದೆಡೆ ಗ್ರಾಮದ ನೆಮ್ಮದಿಗೆ ಭಂಗ. ಗ್ರಾಮಸ್ಥರು ದೇವಾಲಯ ಜೀರ್ಣೋದ್ಧಾರದ ಚಿಂತನೆ ನಡೆಸಿದರು. ಗ್ರಾಮದಲ್ಲಿ ನೆಮ್ಮದಿ-ಶಾಂತಿ, ಸಂವೃದ್ಧಿ ನೆಲೆಸಬೇಕಾಗಿದ್ದು ನೂತನ ದೇವಾಲಯ ನಿರ್ಮಾಣದ ನಿರ್ಧಾರ ಕೈಗೊಂಡರು. ಗ್ರಾಮದ ಎಲ್ಲಾ ಜಾತಿ ಜನಾಂಗ, ಧರ್ಮ ದವರು, ಸುತ್ತಮುತ್ತಲಿನ ಗ್ರಾಮಸ್ಥರ ಸಭೆ ಕರೆದು ಸಮಿತಿ ರಚಿಸಲಾಯಿತು .ಸ್ಥಾಪಕ ಸೇವಾ ಸಮಿತಿ ಅಧ್ಯಕ್ಷರಾಗಿ ಎಸ್.ಸಿ. ಶರತ್ ಶೇಖರ್, ಗೌರವಧ್ಯಕ್ಷರಾಗಿ ಅರವಿಂದ್, ಕಾರ್ಯದರ್ಶಿಯಾಗಿ ದಿವಾಕರ್, ಖಜಾಂಚಿಯಾಗಿ ಜೀವನ್ ಹಾಗೂ ಹಿಂದೂ-ಮುಸ್ಲಿA ಎಲ್ಲಾ ಜಾತಿ ಜನಾಂಗದ ಪ್ರತಿನಿಧಿಗಳನ್ನು ಸದಸ್ಯ ರನ್ನಾಗಿ ಆಯ್ಕೆ ಮಾಡಲಾಯಿತು. ಗ್ರಾಮ, ಸುತ್ತಮುತ್ತಲ ದಾನಿಗಳಿಂದ, ಭಕ್ತರಿಂದ ಹಣ ಕ್ರೋಢೀಕರಿಸಲಾಯಿತು.
ಕೇವಲ ೪೮ ದಿನಗಳಲ್ಲಿ ಮೊದಲಿದ್ದ ಸ್ಥಳದಲ್ಲೆ ತೆರೆದ ಪ್ರಾಂಗಣದಲ್ಲಿ ಸುಂದರ ದೇವಾಲಯ ನಿರ್ಮಾಣವಾಯಿತು. ಮಂಗಳೂರಿನ ಕದ್ರಿ ದೇವಾಲಯದ ತಂತ್ರಿ ಶ್ರೀರಂಗ ಐತಾಳರ ನೇತೃತ್ವದಲ್ಲಿ ಅನೇಕ ಅರ್ಚಕರ ಸಮೂಹದಲ್ಲಿ ಹೋಮ-ಹವನಗಳು, ವಿಶೇಷ ಪೂಜಾ ಕೈಂಕರ್ಯಗಳಿAದ ೩ ಅಡಿ ಎತ್ತರದ ಜಗುಲಿಯಲ್ಲಿ ಕಲ್ಲಿನ ಶಿಲಾ ಮೂರ್ತಿಗಳನ್ನು ಪ್ರತಿಷ್ಠಾಪಿಸ ಲಾಯಿತು. ಗರ್ಭಗುಡಿಯ ಮುಂಭಾಗ ಬಲಬದಿಯಲ್ಲಿ ಶ್ರೀ ಮಹಾಗಣಪತಿ, ಎಡಭಾಗದಲ್ಲಿ ನವಗ್ರಹ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗರ್ಭ ಗುಡಿಯ ಭದ್ರತೆಯ ನಿಟ್ಟಿನಲ್ಲಿ ಕಬ್ಬಿಣದ ಸರಳುಗಳ ತಡೆಗೋಡೆ ಹಾಗೂ ದ್ವಾರ ನಿರ್ಮಿಸಲಾಗಿದೆ. ಪೂಜಾ ಸಮಯ ದಲ್ಲಿ ಭಕ್ತರು ಕುಳಿತು ವೀಕ್ಷಿಸುವಂತಹ ಪ್ರಶಾಂತ ವಾತಾವರಣವಿದೆ.
ದೇವಾಲಯದಲ್ಲಿ ನಿತ್ಯ ಬೆಳಿಗ್ಗೆ-ರಾತ್ರಿ ಪೂಜೆ ನಡೆಯತ್ತಿದ್ದು ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ವಾರ್ಷಿಕೋತ್ಸವ, ಪೂಜಾ ಮಹೋತ್ಸವ ವಿಜೃಂಭಣೆಯಿAದ ಆಚರಿಸಲಾಗುತ್ತಿದೆ. ವಾರ್ಷಿಕೋತ್ಸವ ಸಂದರ್ಭ ಪರಿವಾರ ೯ ಗ್ರಾಮ ದೇವತೆಗಳಾದ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಾಲಯ, ಬಿದರೂರಿನ ಊರೊಡೆಯ, ಬ್ರಹ್ಮದೇವರು, ಶ್ರೀಬಸವೇಶ್ವರ ದೇವರು, ಹೆಮ್ಮನೆ ಗ್ರಾಮದ ಮಾರಮ್ಮ ಮತ್ತು ಶ್ರೀಬಸವೇಶ್ವರ, ತ್ಯಾಗರಾಜ ಕಾಲೋನಿಯ ಶ್ರೀ ಚಾಮುಂಡೇಶ್ವರಿ-ಗುಳಿಗ ದೈವದ ಬನ, ವಿಜಯ ವಿನಾಯಕ ದೇವಸ್ಥಾನ, ಬನ್ನಿಮಂಟಪ, ಶ್ರೀರಾಮ ಮಂದಿರದಲ್ಲಿ ಸೇವಾ ಸಮಿತಿ ವತಿಯಿಂದ ವಿಶೇಷ ಪೂಜೆಗಳು ನಡೆದು ಪ್ರಸಾದ ವಿನಿಯೋಗ ವಾಗುತ್ತದೆ. ದೇವಾಲಯಗಳ ಅರ್ಚಕರನ್ನು ಗೌರವಿಸಲಾಗುತ್ತದೆ.
ನಂತರ ಜಾಮೀಯಾ ಮಸೀದಿಯಲ್ಲಿ ಧಾರ್ಮಿಕ ಸಭೆ ನಡೆದು ಧರ್ಮಗುರುಗಳು ವಿಶೇಷ ಪ್ರಾರ್ಥನೆ, ಪ್ರವಚನಗಳು ನಡೆದು ಸಮಿತಿಗಳ ಮುಖಂಡರನ್ನು ಪರಸ್ಪರ ಗೌರವಿಸಲಾಗುತ್ತದೆ. ಅಂತಿಮವಾಗಿ ಶ್ರೀ ಬೀರಲಿಂಗೇಶ್ವರ ದೇವಾಲಯದಲ್ಲಿ ಮಹಾಪೂಜೆ, ಮಹಾಮಂಗಳಾರತಿ ನಡೆದು ಅನ್ನಸಂತರ್ಪಣೆ ನಡೆಯುತ್ತದೆ.
ವಾರ್ಷಿಕೋತ್ಸವ ಸಂದರ್ಭ ಪರ ಸ್ಥಳದಲ್ಲಿ ಉದ್ಯೋಗದಲ್ಲಿರುವವರು, ವಿವಾಹವಾಗಿ ಹೋದ ಹೆಣ್ಣುಮಕ್ಕಳು ತಪ್ಪದೇ ಬಂದು ತನು ಮನ ಧನಗಳಿಂದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಂಕಷ್ಟಗಳ ಪರಿಹಾರಕ್ಕೆ, ವಿವಿಧ ಬೇಡಿಕೆಗಳ ನೆರವೇರಿಕೆಗೆ ಹರಕೆ ಮಾಡಿಕೊಂಡವರು ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆಯನ್ನು ಮಾಡಿ ಹರಕೆ ತೀರಿಸುತ್ತಾರೆ.
ವಾರ್ಷಿಕ ಪೂಜಾ ಮಹೋತ್ಸವ ಹಿಂದೂ-ಮುಸ್ಲಿA, ಇತರ ಸಮುದಾಯಗಳ ಭೇದವಿಲ್ಲದೆ ಎಲ್ಲರ ಸಹಕಾರದೊಂದಿಗೆ ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿ, ೯ ಗ್ರಾಮ ದೇವರುಗಳ ಸಮಿತಿ ಪ್ರಮುಖರು, ಮಸೀದಿ ಸಮಿತಿ ಪ್ರಮುಖರ ಸಮ್ಮುಖದಲ್ಲಿ ವಿವಿಧ ಜಾತಿ ಜನಾಂಗದ ಭಕ್ತಾದಿಗಳ ಸಾಮರಸ್ಯ ಬೆಸೆವ ಉತ್ಸವವಾಗಿ ಆಚರಿಸಲ್ಪಡುತ್ತಿದೆ.
ಪ್ರಸ್ತುತ ಸೇವಾ ಸಮಿತಿ ನೂತನ ಅಧ್ಯಕ್ಷರಾಗಿ ಎಂ.ಸಿ. ಕಾಂತರಾಜ್ ಹಾಗೂ ಪದಾಧಿಕಾರಿಗಳು ಪೂಜಾ ಕೈಂಕರ್ಯ ಗಳನ್ನು ನೆರವೇರಿ ಸುತ್ತಿದ್ದಾರೆ.
- ಶ.ಗ. ನಯನತಾರಾ, ಶನಿವಾರಸಂತೆ.