ಮಡಿಕೇರಿ, ಡಿ. ೧೩: ಸರ್ಕಾರಕ್ಕೆ ಪಾವತಿಸಬೇಕಾಗಿದ್ದ ಮೋಟಾರು ವಾಹನಗಳ ತೆರಿಗೆಯನ್ನು ಪಾವತಿಸದೇ ಸಂಚರಿಸುತ್ತಿದ್ದ ವಾಹನ ಸಂಖ್ಯೆ ಕೆಎ ೧೨ ೮೦೬೮, ಕೆಎ ೦೨ ಎಸಿ ೪೨೭೦, ಕೆಎ ೧೬ಬಿ ೪೯೯೯ ಹಾಗೂ ಕೆಎ ೧೯ಎ ೪೪೩೦ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ನೋಟೀಸು ನೀಡಿದರೂ ಸಹ ಇದುವರೆಗೂ ಸಂಬAಧಪಟ್ಟ ವಾಹನಗಳ ಮಾಲೀಕರಾಗಲಿ ಅಥವಾ ಚಾಲಕರಾಗಲಿ ಬಾಕಿ ತೆರಿಗೆಯನ್ನು ಪಾವತಿಸಿ ವಾಹನಗಳನ್ನು ಬಿಡುಗಡೆಗೊಳಿಸಿಕೊಂಡಿರುವುದಿಲ್ಲ.

ಈ ವಾಹನಗಳನ್ನು ಹೇಗಿದೆಯೋ ಅದೇ ಸ್ಥಿತಿಯಲ್ಲಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಕಾಯ್ದೆ ೧೯೫೭ ರ ನಿಯಮ ೧೧ (ಎ)(೨) ರ ರೀತ್ಯಾ ಬಹಿರಂಗವಾಗಿ ಜನವರಿ ೩ ರಂದು ಮಧ್ಯಾಹ್ನ ೩ ಗಂಟೆಗೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಈ ಸಂಬAಧ ಹೆಚ್ಚಿನ ಮಾಹಿತಿಗೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ತಿಳಿಸಿದ್ದಾರೆ.