ವೀರಾಜಪೇಟೆ, ಡಿ. ೧೩: ಉತ್ತರಪ್ರದೇಶದ ಅಯೋಧ್ಯೆ ಯಿಂದ ಬಂದಿದ್ದ ಪವಿತ್ರ ಮಂತ್ರಾಕ್ಷತೆಯನ್ನು ಗ್ರಾಮಗಳಿಗೆ ವಿತರಿಸುವ ಕಾರ್ಯಕ್ರಮವನ್ನು ಹಿಂದೂ ಸಂಘಟನೆಗಳ ಮೂಲಕ ಹಮ್ಮಿಕೊಳ್ಳಲಾಗಿತ್ತು. ಪವಿತ್ರ ಮಂತ್ರಾಕ್ಷತೆಯನ್ನು ವೀರಾಜಪೇಟೆಯ ಮಹಿಳಾ ಸಮಾಜದಿಂದ ಗ್ರಾಮಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು. ವೀರಾಜಪೇಟೆಯ ವಿವಿಧ ಗ್ರಾಮಗಳಿಗೆ ಹಿಂದೂ ಕಾರ್ಯಕರ್ತರ ಮೂಲಕ ಪವಿತ್ರ ಮಂತ್ರಾಕ್ಷತೆ ಕಳುಹಿಸಲಾಯಿತು.