ಹೆಬ್ಬಾಲೆ, ಡಿ.೧೩ : ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಗ್ರಾಮೀಣ ಜಾನಪದ ಕ್ರೀಡೆಯಾದ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗಳು ನೆರೆದಿದ್ದ ಕ್ರೀಡಾ ಪ್ರೇಮಿಗಳ ಮನರಂಜಿಸಿತು.

ಈ ಗಾಡಿ ಓಟದ ಸ್ಪರ್ಧೆಯಲ್ಲಿ ಹೆಬ್ಬಾಲೆ ಸುತ್ತಮುತ್ತಲಿನ ಜನರು ಸೇರಿದಂತೆ ಮೈಸೂರು, ಚಿಕ್ಕಮಗಳೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನತೆ ಭಾಗವಹಿಸಿದ್ದು ವಿಶೇಷವೆನಿಸಿತ್ತು. ಗ್ರಾಮದ ಮಾದರಿ ಯುವಕ ಸಂಘದ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ ೧೦೦ ಮೀಟರ್ ದೂರ ನಿಗದಿಪಡಿಸಲಾಗಿತ್ತು.

ಭತ್ತದ ಕೊಯ್ಲು ಆರಂಭಗೊಳ್ಳುತ್ತಿದ್ದAತೆ ಸುಗ್ಗಿಗೆ ಮುನ್ನ ವರ್ಷಕ್ಕೆ ಒಮ್ಮೆ ಬನಶಂಕರಿ ಅಮ್ಮನ ಹಬ್ಬದ ಅಂಗವಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ರೈತಾಪಿ ವರ್ಗದವರು ಗಾಡಿ ಓಟಕ್ಕೆ ಎತ್ತುಗಳನ್ನು ತಯಾರು ಮಾಡಿ ಗಾಡಿಗಳನ್ನು ಅಣಿಗೊಳಿಸುವದು ಇಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿರುವದು ಈ ಜಾತ್ರೆಯ ವೈಶಿಷ್ಟö್ಯವಾಗಿದೆ.

ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಗಾಡಿ ಮಾಲೀಕರಿಗೆ ಕ್ರಮವಾಗಿ ೮ ಗ್ರಾಂ ಚಿನ್ನ ಹಾಗೂ ೬ ಗ್ರಾಂ.ಚಿನ್ನ, ತೃತೀಯ ಬಹುಮಾನ ೪ ಗ್ರಾಂ.ಚಿನ್ನ ಹಾಗೂ ನಾಲ್ಕನೇ, ಐದು, ಆರು ಹಾಗೂ ಏಳನೇ ಸ್ಥಾನಗಳಿಸುವ ಮಾಲೀಕರಿಗೆ ಸಮಾಧಾನಕರ ಬಹುಮಾನ ವಿಜೇತರಿಗೆ ವಿತರಿಸಲಾಯಿತು.

ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ ೨೬ ಕ್ಕೂ ಹೆಚ್ಚಿನ ಎತ್ತಿನ ಗಾಡಿ ಮಾಲೀಕರು ಪಾಲ್ಗೊಂಡಿದ್ದರು. ರೋಮಾಂಚನಕಾರಿ ಹಾಗೂ ಸಾಹಸಮಯ ಕ್ರೀಡೆಯಾದ ಎತ್ತಿನ ಗಾಡಿ ಸ್ಪರ್ಧೆ ವಿಕ್ಷೀಸಿಸಲು ಸಾವಿರಾರೂ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಗ್ರಾಮೀಣ ಪ್ರದೇಶದ ಜಾನಪದ ಕ್ರೀಡೆಗಳಲ್ಲಿ ಒಂದಾದ ಎತ್ತಿನ ಗಾಡಿ ಸ್ಪರ್ಧೆಯನ್ನು ಕಳೆದ ೨೪ ವರ್ಷಗಳಿಂದ ಗ್ರಾಮದ ಮಾದರಿ ಯುವಕ ಸಂಘದ ಆಶ್ರಯದಲ್ಲಿ ಬಸವೇಶ್ವರ ಯುವಕರ ಬಳಗವು ನಡೆಸಿಕೊಂಡು ಬರುವ ಮೂಲಕ ಗ್ರಾಮೀಣ ಕ್ರೀಡೆಯ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ.

ಸ್ಪರ್ಧೆ ಆರಂಭಗೊAಡ ಸಂದರ್ಭ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಶಿಳ್ಳೆ ಹೊಡೆಯುತ್ತ ಕೂಗುವ ಮೂಲಕ ಎತ್ತುಗಳಿಗೆ ಹುರಿದುಂಬಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬರುತಿತ್ತು. ಕೆಲವು ಎತ್ತಿನ ಗಾಡಿಗಳು ಜನರತ್ತ ಧಾವಿಸಿ ಬಂದವು ಆದರೆ, ಯಾವುದೇ ಅಪಾಯ ಸಂಭವಿಸಲಿಲ್ಲ.

ದಿನವಿಡೀ ನಡೆದ ಕ್ರೀಡಾಕೂಟದಲ್ಲಿ ಮಕ್ಕಳು ಮಹಿಳೆಯರು ಹಾಗೂ ವೃದ್ಧರು ಸಾಮೂಹಿಕವಾಗಿ ಪಾಲ್ಗೊಂಡಿದ್ದು, ಕಂಡುಬAದಿತು. ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಎತ್ತಿನ ಗಾಡಿ ಓಟ ಸ್ಪರ್ಧೆಯನ್ನು ಉದ್ಯಮಿ ಮೋಹನ್ ಲಾಲ್ ಚೌದರಿ, ಲಕ್ಷಿö್ಮ ರಾಜಶೇಖರ್ ಉದ್ಘಾಟಿಸಿದರು. ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಬೊಜೇಗೌಡ, ಪ್ರವೀಣ್, ಎಚ್.ಡಿ.ಲೋಹಿತ್ ಕುಮಾರ್ ಕಾರ್ಯನಿರ್ವಹಿಸಿದರು.

ಈ ಸಂದರ್ಭ ಬಸವೇಶ್ವರ ಯುವಕರ ಬಳಗದ ಗೌರವಾಧ್ಯಕ್ಷ ಎಚ್.ಎನ್. ರಾಜಶೇಖರ್, ಅಧ್ಯಕ್ಷ ಪಟೇಲ್ ಜಗದೀಶ್, ಕಾರ್ಯದರ್ಶಿ ಅಭಿ, ಖಜಾಂಜಿ ಶಿವು, ಪದಾಧಿಕಾರಿಯಾದ ನವೀನ್, ರಘು, ಪುನೀತ್ ಕೆಂಪ, ನಂದನ್, ಮಾಹೇಶ್, ಸುದರ್ಶನ್, ಸಚಿನ್, ರವೀಂದ್ರ, ಅಕ್ಷಯ ಸಲಹೆಗಾರ ಎಚ್.ಜಿ.ಕುಮಾರ್, ಎಚ್.ಟಿ.ದಿನೇಶ್, ಎಚ್.ಆರ್. ಶ್ರೀನಿವಾಸ್, ಗ್ರಾ.ಪಂ.ಮಾಜಿ ಅಧ್ಯಕ್ಷ ಎಚ್.ಎಸ್.ರಘು ಇದ್ದರು.