ಕೂಡಿಗೆ , ಡಿ.೧೩ : ಕೂಡಿಗೆ ಶ್ರೀ ಸತ್ಯನಾರಾಯಣ ವ್ರತಾಚರಣಾ ಸಮಿತಿಯ ವತಿಯಿಂದ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದ ಅಂಗವಾಗಿ ದೀಪೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಕೂಡಿಗೆಯ ಕುಶಾಲನಗರ ಟಾಟಾ ಕಾಫಿ ವರ್ಕ್ಸ್ನ ವ್ಯವಸ್ಥಾಪಕ ರೋಷನ್ ಸೋಮಯ್ಯ, ಗಾಯತ್ರಿ ಸೋಮಯ್ಯ ದೀಪ ಹಚ್ಚುವುದರ ಮೂಲಕ ಚಾಲನೆ ನೀಡಿದರು.
ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು, ಸೇರಿದಂತೆ ಅಭಿಷೇಕಗಳು ನಡೆದವು. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು, ಮದಲಾಪುರ, ಹಾರಂಗಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಟಾಟಾ ಕಾಫಿ ವರ್ಕ್ಸ್ನ ಅಧಿಕಾರಿಗಳಾದ ಮಂದಣ್ಣ, ನವೀನ್, ಸಮಂತ್ ರೈ, ಸತ್ಯನಾರಾಯಣ ಸಮಿತಿ ಅಧ್ಯಕ್ಷ ಪ್ರಮೋದ್ , ಕಾರ್ಯದರ್ಶಿ ಬೋಪಣ್ಣ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.