ವೀರಾಜಪೇಟೆ, ಡಿ. ೧೩: ಮಕ್ಕಳನ್ನು ಸಂತೋಷವಾಗಿ ಸುಶಿಕ್ಷಿತರ ನ್ನಾಗಿ ಬೆಳಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪುರಸಭೆ ಸದಸ್ಯ ಮಹಮದ್ ರಾಫಿ ಹೇಳಿದರು.
ವೀರಾಜಪೇಟೆ ಮಗ್ಗುಲದ ಲಿಟಲ್ ಸ್ಕಾರ್ಸ್ ಅಕಾಡಮಿ ವತಿ ಯಿಂದ ಮಕ್ಕಳ ಮೇಲೆ ನಡೆಯುತ್ತಿ ರುವ ದೌರ್ಜನ್ಯ ಕುರಿತು ಏರ್ಪಡಿಸ ಲಾಗಿದ್ದ ಜಾಥಾದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಿಂದಿನ ಕಾಲದಲ್ಲಿ ಯಾವ ರೀತಿಯಲ್ಲಿ ಬದುಕು ಸಾಗಿಸಬೇಕು. ಎಲ್ಲರೊಂದಿಗೆ ಯಾವ ರೀತಿಯಲ್ಲಿ ಜೀವನ ನಡೆಸಬೇಕು ಎಂಬುದರ ಬಗ್ಗೆ ಶಾಲೆಗಳಲ್ಲಿ ಕೆಲವು ನೀತಿ ಪಾಠಗಳನ್ನು ಹೇಳಿ ಕೊಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮಕ್ಕಳು ಯಾವ ರೀತಿಯಲ್ಲಿ ಅಂಕಗಳನ್ನು ಪಡೆಯಬೇಕು ಎಂಬುದರ ಬಗ್ಗೆ ಚಿಂತಿಸತೊಡಗಿ ದ್ದಾರೆ. ಮಕ್ಕಳಿಗೆ ಬದುಕುವ ಹಕ್ಕನ್ನು ಕೊಡದೆ ಭಿಕ್ಷಾಟನೆ, ಬಾಲಕಾರ್ಮಿಕ ರನ್ನಾಗಿ ಬಳಸಿಕೊಳ್ಳುತ್ತಿರುವುದನ್ನು ತಪ್ಪಿಸಬೇಕು ಎಂದು ಹೇಳಿದರು.
ಲಿಟ್ಲ್ ಸ್ಕಾರ್ಸ್ ಅಕಾಡೆಮಿ ಅಧ್ಯಕ್ಷೆ ಪೂಜಾ ಸಜೇಶನ್ ಮಾತನಾಡಿ ಹಿಂದಿನ ಕಾಲದಲ್ಲಿ ಮಹಿಳೆಯರನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತಿದ್ದರು. ಇತ್ತೀಚೆಗೆ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ನಡೆಯು ತ್ತಿದ್ದು, ಹೆಣ್ಣು ಮಕ್ಕಳು ಜಾಗೃತರಾಗ ಬೇಕು. ಅವರ ರಕ್ಷಣೆಯನ್ನು ಅವರೇ ಮಾಡಿಕೊಳ್ಳಬೇಕು. ಹೆಣ್ಣುಮಕ್ಕಳು ಎಲ್ಲಾ ರೀತಿಯಲ್ಲೂ ಹಾಗೂ ಎಲ್ಲಾ ಹಂತದಲ್ಲೂ ನೈತಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹಂತ ಹಂತದ ಲ್ಲಿಯೂ ಶೋಷಣೆಗೆ ಒಳಗಾಗುತ್ತಿ ದ್ದಾರೆ. ಹೆಣ್ಣು ಗೃಹಿಣಿಯಾಗಿ, ತಾಯಿಯಾಗಿ, ಅಕ್ಕ-ತಂಗಿಯರಾಗಿ ತನ್ನ ಪರಿವಾರವನ್ನು ರಕ್ಷಿಸುತ್ತಿರುತ್ತಾಳೆ.
ಆದರೆ ಅವಳ ರಕ್ಷಣೆಯನ್ನು ಯಾರು ಮಾಡುತ್ತಾರೆ ಎಂಬುದೆ ಪ್ರಶ್ನೆಯಾಗಿದೆ. ಜನ್ಮ ಕೊಟ್ಟ ತಂದೆಯೇ ಮಗಳ ಮೇಲೆ, ಸೊಸೆಯ ಮೇಲೆ ಹಣದ ಆಸೆಗಾಗಿ ಪುಟ್ಟ ಮಕ್ಕಳ ಮೇಲೆ ಅತ್ಯಾಚಾರವೆಸಗಿ ಅವರನ್ನು ಕೊಲೆ ಮಡುವ ಹಂತಕ್ಕೆ ತಲುಪಿದ್ದಾರೆ. ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಇಂತಹ ಜಾಥಾಗಳು ಸಹಕಾರಿಯಾಗಲಿವೆ. ಕೇಂದ್ರ ಸರ್ಕಾರದ ಹೆಣ್ಣು ಮಕ್ಕಳ ಸುರಕ್ಷಾ ಸಮೃದ್ಧಿ ಯೋಜನೆಯ ಉಪಯೋಗವನ್ನು ಪಡೆದು ಕೊಳ್ಳುವಂತೆ ಹೇಳಿದರು.
ಇದೇ ಸಂದರ್ಭ ಪಶು ವೈದ್ಯಾಧಿಕಾರಿ ರಾಕೇಶ್, ನಗರ ಠಾಣೆ ಮುಖ್ಯಪೇದೆ ಗೀತಾ, ಸಂಸ್ಥೆಯ ಕಾರ್ಯದರ್ಶಿ ಪ್ರತಿಮಾ ರಂಜನ್ ಇದ್ದರು.