ವೀರಾಜಪೇಟೆ, ಡಿ. ೧೩: ಕಂಡAಗಾಲದ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಕ್ರೀಡೋತ್ಸವ ಸಮಿತಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ವತಿಯಿಂದ ಸ್ಥಳೀಯ ಮೂರುನಾಡಿನ ಕುಟುಂಬಸ್ಥರಿಗಾಗಿ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ್ದು ಇಂದು ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಕ್ರೀಡೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ರೀಡಾ ಸಮಿತಿಯ ಪೂರ್ವ ಅಧ್ಯಕ್ಷ ಕೊಂಗಾAಡ ಭೀಮಯ್ಯ ಚಾಲನೆ ನೀಡಿದರು. ನಂತರ ಮಾತನಾಡಿದ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಈ ನಾಡಿನಲ್ಲಿ ಕಳೆದ ಹಲವು ವರ್ಷಗಳಿಂದ ಕ್ರೀಡೋತ್ಸವವನ್ನು ಆಯೋಜಿಸುತ್ತಿದ್ದು ಸ್ಥಳೀಯ ಪ್ರತಿಭೆಗಳ ಅನಾವರಣಕ್ಕೆ ಇದೊಂದು ಉತ್ತಮ ವೇದಿಕೆಯಾಗಿದೆ. ಇಲ್ಲಿ ಆಡಿದ ಹಲವರು ಇಂದು ರಾಷ್ಟçಮಟ್ಟದಲ್ಲಿ ಗುರುತಿಸಿಕೊಂಡಿ ರುವುದು ಹೆಮ್ಮೆಯ ವಿಚಾರ. ಇಂತಹ ಸ್ಥಳೀಯ ಪಂದ್ಯಾವಳಿಗಳಿAದ ಇಲ್ಲಿನ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಕ್ಕಂತಾಗುತ್ತದೆ ಎಂದರು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ಮಾತನಾಡಿ ಇಂಥ ಪಂದ್ಯಾವಳಿಗಳನ್ನು ನಡೆಸುವುದರಿಂದ ಹಲವಾರು ಕ್ರೀಡಾಸಕ್ತರಿಗೆ ವೇದಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಪಂದ್ಯಾವಳಿಗಳ ಅವಶ್ಯಕತೆ ಇದೆ. ಪಂದ್ಯಾವಳಿಗಳಿAದ ಕ್ರೀಡಾಪಟುಗಳ ಮನೋಸ್ಥೆöÊರ್ಯವೂ ಉತ್ತಮಗೊ ಳ್ಳುತ್ತದೆ ಎಂದರು. ಕಾರ್ಯಕ್ರಮದಲ್ಲಿ ದಾನಿಗಳಾದ ಕಡೇಮಡ ಕನಸು ದೇವಯ್ಯ, ಚಂದುರ ದೇಚವ್ವ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಹದೇವ, ಗ್ರಾಮ ಪಂಚಾಯಿತಿ ಸದಸ್ಯ ಕಂಜಿತAಡ ಸಂಧ್ಯಾ ಉತ್ತಪ್ಪ, ಕ್ರೀಡಾ ಸಮಿತಿಯ ಅಧ್ಯಕ್ಷ ಬಲ್ಲಡಿಚಂಡ ರವಿ ಸೋಮಯ್ಯ , ಶಾಲಾ ಮುಖ್ಯೋಪಾಧ್ಯಾಯಿನಿ ಚೇಂದ್ರಿಮಾಡ ಪವೀನ ಉಪಸ್ಥಿತರಿದ್ದರು.

ಪಂದ್ಯಾಟದ ವಿವರ

ಇಂದು ನಡೆದ ಪ್ರಥಮ ಪಂದ್ಯ ಮದ್ರೀರ ಮತ್ತು ಆಟ್ರಂಗಡ ತಂಡಗಳ ನಡುವೆ ನಡೆದು ಮದ್ರೀರ ತಂಡವು ೪ -೨ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ದ್ವಿತೀಯ ಪಂದ್ಯ ನಾಮೇರ ಮತ್ತು ಚೇಂದಿರ ತಂಡಗಳ ನಡುವೆ ನಡೆದು ನಾಮೇರ ತಂಡವು ೨-೧ ಗೋಲುಗಳ ಅಂತರದ ಜಯ ಸಾಧಿಸಿತು. ಮೂರನೇ ಪಂದ್ಯ ಚೊಟ್ಟೇಪಂಡ ಮತ್ತು ಕೋಲತಂಡ ತಂಡಗಳ ನಡುವೆ ನಡೆದು ಕೋಲತಂಡ ತಂಡ ಸಡನ್ ಡೆತ್‌ನಲ್ಲಿ ಗೆಲುವಿನತ್ತ ಮುಖ ಮಾಡಿತ್ತು. ನಾಲ್ಕನೇ ಪಂದ್ಯ ನಂಬುಡುಮಾಡ ಮತ್ತು ಬಲ್ಲಡಿಚಂಡ ತಂಡಗಳ ನಡುವೆ ನಡೆದು ಬಲ್ಲಡಿಚಂಡ ತಂಡ ೪-೨ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ೫ನೇ ಪಂದ್ಯ ಮಂದಾಮಾಡ ಮತ್ತು ಅಪ್ಪಂಡೇರAಡ ತಂಡಗಳ ನಡುವೆ ನಡೆದು ಅಪ್ಪಂಡೇರAಡ ತಂಡ ೪ -೨ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ೬ನೇ ಪಂದ್ಯ ಕೊಲ್ಲೀರ ಮತ್ತು ಮೇಚಿಯಂಡ ತಂಡಗಳ ನಡುವೆ ನಡೆದು ಮೇಚಿಯಂಡ ತಂಡ ಸಡನ್ ಡೆತ್‌ನಲ್ಲಿ ಜಯ ಸಾಧಿಸಿತು.