ಕೂಡಿಗೆ, ಡಿ. ೧೨: ಶಿರಂಗಾಲ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಬಿ. ರವಿ, ಉಪಾಧ್ಯಕ್ಷೆಯಾಗಿ ದೇವಿರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಂದೊAದು ನಾಮಪತ್ರಗಳು ಮಾತ್ರ ಸಲ್ಲಿಕೆಯಾದ ಹಿನ್ನೆಲೆ ಎಸ್.ಬಿ. ರವಿ ಮತ್ತು ದೇವಿರಮ್ಮ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭ ಹಾಲಿ ನಿರ್ದೇಶಕರಾದ ಟಿ.ಜೆ. ಶೇಷಪ್ಪ, ಹೆಚ್.ಎಸ್. ಬಸವರಾಜ್, ಎಸ್.ಎಸ್. ಹರ್ಷ, ಎಸ್.ಸಿ. ರುದ್ರಪ್ಪ, ಪೂಜಾ, ಡಿ.ಎ. ಲೋಕೇಶ್, ಸಿ.ಎನ್. ಲೋಕೇಶ್, ಎಸ್.ಜೆ. ಮಧುರಾಜ್, ಪಿ.ಸಿ. ಬೇಲಯ್ಯ, ಎಸ್.ಜಿ. ಲೋಕೇಶ್ ಹಾಜರಿದ್ದರು. ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಇಲಾಖೆ ಅಧಿಕಾರಿ ಪಿ.ಬಿ. ಮೋಹನ್ ನೆರವೇರಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀವನ್, ಸಂಘದ ಮೇಲ್ವಿಚಾರಕಿ ಅನುರಾಧ, ನಗದು ಗುಮಾಸ್ತೆ ರೂಪ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.